IPL 2020: ಆತನಿಗಾಗಿ ಪಂದ್ಯ ಗೆಲ್ಲಲು ನಾವು ಮೊದಲೇ ನಿರ್ಧರಿಸಿದ್ದೆವು: ಕ್ರಿಸ್ ಗೇಲ್

ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡ ಸತತ 5 ಗೆಲುವುಗಳ ಮೂಲಕ ಪ್ಲೇ ಆಫ್‌ನತ್ತ ಹೆಜ್ಜೆಯಿರಿಸಿದೆ. ಆಡಿರುವ 12 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದೆ.

chris gayle

chris gayle

  • Share this:
    ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮಿಂಚಿದ್ದು ಆರಂಭಿಕ ಆಟಗಾರ ಮಂದೀಪ್ ಸಿಂಗ್ ಹಾಗೂ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್. ಮಂದೀಪ್ 56 ಎಸೆತಗಳಲ್ಲಿ 66 ರನ್ ಬಾರಿಸಿದರೆ, ಗೇಲ್ 29 ಎಸೆತಗಳಲ್ಲಿ ಸ್ಪೋಟಕ ಫಿಫ್ಟಿ ಸಿಡಿಸಿದರು. ಈ ಮನಮೋಹಕ ಆಟದ ಬಳಿಕ ಮಾತನಾಡಿದ ಗೇಲ್, ನಾವು ಮೊದಲೇ ಕೆಕೆಆರ್ ವಿರುದ್ಧ ಮಂದೀಪ್ ಸಿಂಗ್​ಗಾಗಿ ಗೆಲುವು ದಾಖಲಿಸಬೇಕೆಂದು ನಿರ್ಧರಿಸಿದ್ದೆವು ಎಂದಿದ್ದಾರೆ.

    ತಂದೆಯ ಅಗಲಿಕೆಯ ನೋವಿನಲ್ಲಿದ್ದ ಮನ್‌ದೀಪ್​ಗಾಗಿ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕು ಎಂದು ತೀರ್ಮಾನಿಸಿದ್ದೆವು. ಅದರಂತೆ ನಾವು ಕೆಕೆಆರ್ ವಿರುದ್ಧ ಜಯ ದಾಖಲಿಸಿದ್ಧೇವೆ ಎಂದು ಗೇಲ್ ತಿಳಿಸಿದರು. ಇನ್ನು ಮಂದೀಪ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಮೇಲಿನಿಂದ ಅವರ ತಂದೆ ಆತನ ಆಟವನ್ನು ಗಮನಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಆತನೇ ಪಂದ್ಯದ ಕೇಂದ್ರವಾಗಿರುವುದು ಸಂತಸದ ವಿಚಾರ ಎಂದು ಗೇಲ್ ತಿಳಿಸಿದರು.

    ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡ ಸತತ 5 ಗೆಲುವುಗಳ ಮೂಲಕ ಪ್ಲೇ ಆಫ್‌ನತ್ತ ಹೆಜ್ಜೆಯಿರಿಸಿದೆ. ಆಡಿರುವ 12 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದೆ. ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಿಗೆ ಪ್ಲೇ ಆಫ್​ಗೇರಲು ನಿರ್ಣಾಯಕವೆನಿಸಲಿದೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!
    Published by:zahir
    First published: