RR vs KXIP: ಕಿಂಗ್ಸ್ vs ರಾಯಲ್ಸ್​: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಮಾಹಿತಿ

RR vs KXIP Head to head record: ಪಂಜಾ​ಬ್​ ಹಾಗೂ ರಾಜಸ್ಥಾನ್​ 20 ಬಾರಿ ಮುಖಾಮುಖಿ ಆಗಿದ್ದು, ರಾಜಸ್ಥಾನ್​ 11 ಬಾರಿ ಹಾಗೂ ಪಂಜಾಬ್​ 9 ಬಾರಿ ಗೆದ್ದಿದೆ.

RR vs KXIP

RR vs KXIP

 • Share this:
  ಐಪಿಎಲ್ ಅಂಗಳದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ತಂಡ ಕಿಂಗ್ಸ್ ಇಲವೆನ್ ಪಂಜಾಬ್​ನ್ನು ಎದುರಿಸಲಿದೆ. ಈಗಾಗಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಆರ್​ಆರ್ ಆಟಗಾರರು ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿದೆ. ಇತ್ತ ಅದೇ ಮುಂಬೈ ತಂಡವನ್ನು ಮಣಿಸಿ ಪಂಜಾಬ್​ ತಂಡವು ಕಿಂಗ್ ಎನಿಸಿಕೊಂಡಿದೆ. ಹೀಗಾಗಿ ಅಬುಧಾಬಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆಯಿದೆ.

  ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಸತತ ಸೋಲಿನ ಬಳಿಕ ಸತತ ಗೆಲುವುಗಳೊಂದಿಗೆ ಭರ್ಜರಿ​ ಕಂಬ್ಯಾಕ್ ಮಾಡಿದೆ. ಅದೇ ರೀತಿಯ ಮುಂಬೈ ವಿರುದ್ಧ 195 ರನ್​ಗಳನ್ನು ಚೇಸ್​ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತನ್ನ ಬ್ಯಾಟಿಂಗ್ ವಿಭಾಗದ ಸಾಮರ್ಥ್ಯವನ್ನು ತೆರೆದಿಟ್ಟಿದೆ.

  ಇದಕ್ಕೂ ಮುನ್ನ ನಡೆದ ಪಂಜಾಬ್ ಮತ್ತು ರಾಜಸ್ಥಾನ್ ನಡುವಣ ಪಂದ್ಯ ರೋಚಕತೆಗೆ ಸಾಕ್ಷಿಯಾಗಿತ್ತು. ಸಂಜು ಸ್ಯಾಮ್ಸನ್ ಅವರ 42 ಎಸೆತಗಳ 85 ಮತ್ತು ರಾಹುಲ್ ತೆವಾಠಿಯಾ ಹಾಗೂ ಸ್ಟೀವ್ ಸ್ಮಿತ್‌ರ ಅರ್ಧಶತಕಗಳ ನೆರವಿನಿಂದ ಆರ್‌ಆರ್ ಪಂಜಾಬ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು . ಕಿಂಗ್ಸ್ ಇಲೆವೆನ್ ಓಪನರ್ ಮಯಾಂಕ್ ಅಗರ್ವಾಲ್ ಅವರ ಸ್ಪೋಟಕ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 223 ರನ್ ಪೇರಿಸಿತ್ತು.

  ಆದರೆ ಈ ಮೊತ್ತವನ್ನು 19.3 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ಹೊಸ ಇತಿಹಾಸ ಬರೆದಿದ್ದರು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ. ಇನ್ನು ಎರಡು ತಂಡಗಳು ಈ ಬಾರಿ 200 ಕ್ಕೂ ಅಧಿಕ ರನ್​ ಬಾರಿಸಿರುವ ಕಾರಣ ಇಂದಿನ ಪಂದ್ಯದಲ್ಲೂ ಬೃಹತ್ ಟಾರ್ಗೆಟ್ ನಿರೀಕ್ಷಿಸಬಹುದು. ಎರಡು ತಂಡಗಳು ಬಲಿಷ್ಠವಾಗಿದ್ದು, ಅಂಕಿ ಅಂಶಗಳು ಕೂಡ ಅದನ್ನೇ ಹೇಳುತ್ತಿದೆ.

  ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 11 ರಲ್ಲಿ ಗೆದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ 9 ರಲ್ಲಿ ಜಯ ಸಾಧಿಸಿದೆ. ಹಾಗೆಯೇ ಕಳೆದ ಸೀಸನ್​ನಲ್ಲಿ ಆಡಿದ 2 ಪಂದ್ಯಗಳಲ್ಲೂ ಕಿಂಗ್ಸ್​ ಇಲೆವೆನ್ ಗೆದ್ದು ಬೀಗಿತ್ತು. ಈ ಎರಡು ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ 180ಕ್ಕಿಂತ ಹೆಚ್ಚು ರನ್ ಬಾರಿಸಿತ್ತು ಎಂಬುದು ವಿಶೇಷ. ಹಾಗೆಯೇ ಇದನ್ನು ಚೇಸ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್​ ಕೂಡ ಎರಡು ಬಾರಿ ಕೂಡ 170 ರನ್ ಗಳಿಸಿರುವುದು ಮತ್ತೊಂದು ವಿಶೇಷ. ಹೀಗಾಗಿ ಇಂದಿನ ಪಂದ್ಯದಲ್ಲೂ ಉತ್ತಮ ಚೇಸಿಂಗ್​ನ್ನು ಉಭಯ ತಂಡಗಳಿಂದ ನಿರೀಕ್ಷಿಸಬಹುದು.

  ಅದೇ ರೀತಿ ಪಂಜಾಬ್ ತಂಡವು ಕಿಂಗ್ಸ್ ಇಲೆವೆನ್ ವಿರುದ್ಧ ಗಳಿಸಿದ ಕನಿಷ್ಠ ಸ್ಕೋರ್ 162 ರನ್. ಹಾಗೆಯೇ ರಾಜಸ್ಥಾನ್ ತಂಡವು ಪೇರಿಸಿದ ಕನಿಷ್ಠ ಮೊತ್ತ 166 ರನ್​ಗಳು. ಅಂದರೆ ಉಭಯ ತಂಡಗಳು ಮುಖಾಮುಖಿಯಾದಾಗ 150ಕ್ಕಿಂತ ಹೆಚ್ಚಿನ ರನ್​ ಹರಿದು ಬಂದಿದೆ. ಇನ್ನು 2014 ರ ಯುಎಇ ಐಪಿಎಲ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ.

  ರಾಜಸ್ಥಾನ್ ರಾಯಲ್ಸ್​ ವಿರುದ್ಧ ಬ್ಯಾಟಿಂಗ್​ನಲ್ಲಿ ಪಂಜಾಬ್ ಪರ ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್​ ಸರಾಸರಿ ಹೊಂದಿದ್ದಾರೆ. ರಾಹುಲ್ ರಾಜಸ್ಥಾನ್ ವಿರುದ್ಧದ ಏಳು ಪಂದ್ಯಗಳಿಂದ 55 ಸರಾಸರಿಯಲ್ಲಿ 280 ಕ್ಕಿಂತ ಹೆಚ್ಚು ರನ್​ ಬಾರಿಸಿದ್ದಾರೆ. ಇದೀಗ ರಾಹುಲ್ ಉತ್ತಮ ಫಾರ್ಮ್​ನಲ್ಲಿದ್ದು, ಇಂದು ಕೂಡ ಭರ್ಜರಿಯಾಗಿ ಬ್ಯಾಟ್ ಬೀಸುವ ನಿರೀಕ್ಷೆಯಿದೆ.

  ಇನ್ನು ಪಂಜಾಬ್ ವಿರುದ್ಧದ ಬ್ಯಾಟಿಂಗ್​ನಲ್ಲಿ ವಿಜೃಂಭಿಸಿದ ಆಟಗಾರರಲ್ಲಿ ರಾಬಿನ್ ಉತ್ತಪ್ಪ ಕೂಡ ಒಬ್ಬರು. ಈ ಹಿಂದೆ ಕೆಕೆಆರ್ ಪ್ರತಿನಿಧಿಸಿದ್ದ ಉತ್ತಪ್ಪ ಈಗ ಆರ್​ಆರ್ ಪರ ಕಣಕ್ಕಿಳಿಯುತ್ತಿರುವುದು ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಕಿಂಗ್ಸ್​ ಇಲೆವೆನ್ ವಿರುದ್ದ ರಾಬಿನ್ 137.35 ಸ್ಟ್ರೈಕ್ ರೇಟ್​ನಲ್ಲಿ 717 ರನ್ ಬಾರಿಸಿದ್ದಾರೆ. ಹಾಗೆಯೇ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಪಂಜಾಬ್ ವಿರುದ್ಧದ ಏಳು ಪಂದ್ಯಗಳಲ್ಲಿ ಸರಾಸರಿ 47.85 ಸರಾಸರಿಯಲ್ಲಿ 335 ರನ್ ಕಲೆಹಾಕಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಈ ಇಬ್ಬರು ವಿಜ್ರಂಭಿಸುವ ಸಾಧ್ಯತೆಯಿದೆ. ಇದರೊಂದಿಗೆ ಮುಂಬೈ ವಿರುದ್ಧ ಶತಕ ಸಿಡಿಸಿರುವ ಬೆನ್ ಸ್ಟೋಕ್ಸ್ ಹಾಗೂ ಸ್ಪೋಟಕ ದಾಂಡಿಗ ಸಂಜು ಸ್ಯಾಮ್ಸನ್ ಪಂಜಾಬ್ ಪಾಲಿಗೆ ಅಪಾಯಕಾರಿಯಾಗಲಿದ್ದಾರೆ.

  ಒಟ್ಟಾರೆ ಹೇಳುವುದಾದರೆ ಇಂದಿನ ಪಂದ್ಯವು ಸಮಬಲ ತಂಡಗಳ ನಡುವಿನ ಹೋರಾಟವಾಗಿದ್ದು, ಅಬುಧಾಬಿ ಅಂಗಳದಲ್ಲಿ ಭಾರೀ ಪೈಪೋಟಿಯನ್ನಂತು ನಿರೀಕ್ಷಿಸಬಹುದಾಗಿದೆ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  Also Read: KL Rahul: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್
  Published by:zahir
  First published: