news18-kannada Updated:September 8, 2020, 11:02 AM IST
ಜಸ್ಪ್ರೀತ್ ಬುಮ್ರಾ (ವೇಗಿ)
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೇನು ಕೇವಲ 11 ದಿನಗಳಷ್ಟೆ ಬಾಕಿ ಇದೆ. ಕೊರೋನಾ ಕಾರಣದಿಂದ ಯುಎಇನಲ್ಲಿ ನಡೆಯಲಿರುವ ಈ ಮಿಲಿಯನ್ ಡಾಲರ್ ಟೂರ್ನಿಯ ವೇಳಾಪಟ್ಟಿಯನ್ನು ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಪ್ರಕಟಮಾಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿವೆ. ಈಗಾಗಲೇ ಎಲ್ಲ ತಂಡದ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇತ್ತ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಪ್ಲಾನ್ನಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ನೆಟ್ನಲ್ಲಿ ಬೆವರು ಹರಿಸುತ್ತಿದೆ.
ಅದರಲ್ಲೂ ಪ್ರಮುಖವಾಗಿ ಮುಂಬೈ ತಂಡದ ಪ್ರಮುಖ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಯಾರ್ಕರ್ ಮೂಲಕ ಎದುರಾಳಿಗೆ ನಡುಕ ಹುಟ್ಟಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಈ ಬಾರಿಯ ಐಪಿಎಲ್ನಲ್ಲಿ ಬುಮ್ರಾ ತಮ್ಮ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಲಿದ್ದಾರ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಮುಂಬೈ ಇಂಡಿಯನ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ.
ತಮಿಳು ಸ್ಟಾರ್ ನಟನ ಜೊತೆ ದಿಢೀರ್ ನಿಶ್ಚಿತಾರ್ಥ ಮಾಡಿಕೊಂಡ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ
ಈ ವಿಡಿಯೋದಲ್ಲಿ ಬುಮ್ರಾ ತಮ್ಮ ಹಳೆಯ ಬೌಲಿಂಗ್ ಸ್ಟೈಲ್ ಅನ್ನು ಬಿಟ್ಟು ಹೊಸ ರೀತಿಯಾಗಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಬುಮ್ರಾ ಬೇರೆ ಬೌಲರ್ಗಳು ಯಾವರೀತಿ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಮುಂಬೈ ಈ ಬಗ್ಗೆ ಬರೆದುಕೊಂಡಿದೆ.
ಬುಮ್ರಾ ಇಲ್ಲಿ ಒಟ್ಟು ಆರು ಬೌಲರ್ಗಳ ಅನುಕರಣೆ ಮಾಡಿದ್ದಾರೆ. ಮುನಾಫ್ ಪಟೇಲ್, ಗ್ಲೆನ್ ಮೆಕ್ಗ್ರಾಥ್, ಮಿಚೆಲ್ ಸ್ಟಾರ್ಕ್, ಕೇದರ್ ಜಾಧವ್, ಶ್ರೇಯಸ್ ಗೋಪಾಲ್ ಹಾಗೂ ಅನಿಲ್ ಕುಂಬ್ಳೆ ರೀತಿ ಬೌಲಿಂಗ್ ಮಾಡಿ ಮೋಡಿ ಮಾಡಿದ್ದಾರೆ.
ಸದ್ಯ ಬುಮ್ರಾ ಅವರ ಈ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಹೊಸರೀತಿಯಲ್ಲಿ ಬೌಲಿಂಗ್ ಮಾಡಿ ಬುಮ್ರಾ ಕಣಕ್ಕಿಳಿಯುತ್ತಾರ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?
ಕಳೆದ ಬಾರಿಯ ಐಪಿಎಲ್ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ಈ ಬಾರಿ ಮತ್ತಷ್ಟು ಬಲಿಷ್ಠವಾಗಿದ್ದು, ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದೆ.
ಸೆಪ್ಟೆಂಬರ್ 19 ರಂದು ಐಪಿಎಲ್ 13ನೇ ಆವೃತ್ತಿ ಆರಂಭವಾಗಲಿದೆ. ನವೆಂಬರ್ 10ಕ್ಕೆ ಈ ಮಹಾ ಟೂರ್ಬಿಗೆ ತೆರೆಬೀಳಲಿದೆ. ಸದ್ಯ ಬಿಸಿಸಿಐ ನವೆಂಬರ್ 3ರವರೆಗೆ ನಡೆಯಲಿರುವ ಲೀಗ್ ಹಂತದ 56 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಪ್ಲೇ ಆಫ್ ಹಂತದ ವೇಳಾಪಟ್ಟಿ ಇನ್ನಷ್ಟೆ ಬಿಡುಗಡೆಯಾಗಬೇಕಿದೆ.
Published by:
Vinay Bhat
First published:
September 8, 2020, 11:02 AM IST