IPLನಲ್ಲಿ ಸಿಕ್ಸರ್‌ಗಳ ಸುರಿಮಳೆ ಎಂದರೆ ಥಟ್ಟನೆ ನೆನಪಿಗೆ ಬರುವ ಹೆಸರು ಕ್ರಿಸ್ ಗೇಲ್. ಆದರೆ ಈ ಬಾರಿ ಗೇಲ್ ಆರ್ಭಟಕ್ಕಿಂತಲೂ ಚೋಟು ಬ್ಯಾಟ್ಸ್ಮನ್ ಅಲಿಯಾಸ್ ಪಾಕೆಟ್ ಡೈನಾಮೊ ಇಶಾನ್ ಕಿಶನ್ ಅಬ್ಬರ ತುಸು ಜೋರಾಗಿದೆ. 13ನೇ ಆವೃತ್ತಿಯ ಲೀಗ್ನಲ್ಲಿ ಸಿಕ್ಸರ್ ಸರದಾರರ ಪಟ್ಟಿಯಲ್ಲಿ 22 ವರ್ಷದ ಇಶಾನ್ ಕಿಶನ್ ಅಗ್ರಸ್ಥಾನಕ್ಕೇರಿದ್ದಾರೆ. ಅಲ್ಲದೆ ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯವನ್ನಾಡಲಿದ್ದು, ಹೀಗಾಗಿ ಈ ಪಂದ್ಯದಲ್ಲೂ ಕಿಶನ್ ಬ್ಯಾಟಿಂಗ್ ಕಾರುಬಾರು ನಿರೀಕ್ಷಿಸಬಹುದು.
ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಗರಿಷ್ಠ ಸಿಕ್ಸರ್‌ಗಳ ಸುರಿಮಳೆಯಲ್ಲಿ ಸಂಜು ಸ್ಯಾಮ್ಸನ್ ಮುಂಚೂಣಿಯಲ್ಲಿದ್ದರು. 14 ಇನ್ನಿಂಗ್ಸ್‌ಗಳಲ್ಲಿ 26 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಸ್ಯಾಮ್ಸನ್ ದಾಖಲೆಯನ್ನು ಮುರಿದು ಕಿಶನ್ ಮುನ್ನುಗ್ಗಿದ್ದಾರೆ. 29 ಸಿಕ್ಸರ್‌ಗಳನ್ನು ಸಿಡಿಸಿರುವ ಕಿಶನ್ ಹಿಂದೆಯೇ ಇಂಡಿಯನ್ಸ್‌ನ ಹಾರ್ದಿಕ್ ಪಾಂಡ್ಯ ಇದ್ದು, ಇದುವರೆಗೆ 25 ಸಿಕ್ಸರ್ ಬಾರಿಸಿದ್ದಾರೆ. ಇನ್ನು ಕೇವಲ 7 ಪಂದ್ಯವನ್ನಾಡಿದ ಗೇಲ್ ಈ ವರ್ಷ 23 ಸಿಕ್ಸರ್ ಬಾರಿಸಿರುವುದು ವಿಶೇಷ. ಸದ್ಯ 13 ಪಂದ್ಯಗಳಲ್ಲಿ 483 ರನ್ ಕಲೆಹಾಕಿರುವ ಕಿಶನ್ 500 ರನ್ ಸೀಸನ್ನ 500 ರನ್ ಸರದಾರರ ಪಟ್ಟಿಗೆ ಸೇರಲು ಕೇವಲ 17 ರನ್ ಅಷ್ಟೇ ಬೇಕಿದೆ.
ಅಂದಹಾಗೆ, ಐಪಿಎಲ್ ಇತಿಹಾಸದಲ್ಲೇ ಸೀಸನ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2012 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್ ಬೀಸಿದ ಗೇಲ್ 59 ಸಿಕ್ಸರ್ ಬಾರಿಸಿದ್ದರು. ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮತ್ತೊರ್ವ ವೆಸ್ಟ್ ಇಂಡೀಸ್ ಕ್ರಿಕೆಟಿಗ ಆಂಡ್ರೆ ರಸ್ಸೆಲ್ ಪಡೆದಿದ್ದು, 2019 ರಲ್ಲಿ ಕೆಕೆಆರ್ ಪರ ಸೀಸನ್ವೊಂದರಲ್ಲಿ 52 ಸಿಕ್ಸರ್ ಸಿಡಿಸಿದ್ದರು. ಇನ್ನು ಮೂರನೇ ಸ್ಥಾನದಲ್ಲಿ ಗೇಲ್ ಇದ್ದು, 2013 ರಲ್ಲಿ ಆರ್‌ಸಿಬಿ ಪರ 51 ಸಿಕ್ಸರ್ ಬಾರಿಸಿದ್ದರು. ಇನ್ನು ಸೀಸನ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ 5ನೇ ಸ್ಥಾನದಲ್ಲಿದ್ದಾರೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ