Chris Gayle: IPL ಗೆ ಕ್ರಿಸ್ ಗೇಲ್ ಗುಡ್ ಬೈ? ನಿವೃತ್ತರಾದ್ರಾ? ನಿವೃತ್ತರಾಗ್ತಾರಾ?

Chris Gayle retirement: ಶ್ರೀಲಂಕಾ ಪ್ರೀಮಿಯರ್ ಲೀಗ್​ಗೂ ಕ್ರಿಸ್ ಗೇಲ್ ಆಯ್ಕೆಯಾಗಿದ್ದು, ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ನಿವೃತ್ತಿ ನೀಡುತ್ತಾರಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

Chris Gayle

Chris Gayle

 • Share this:
  ಸಾವಿರ ಸಿಕ್ಸರ್​ಗಳ ಸರದಾರ ಕ್ರಿಸ್ಟೋಫರ್ ಹೆನ್ರಿ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಗುಡ್ ಬೈ ಹೇಳಿದ್ರಾ? ಐಪಿಎಲ್ ಮುಂದಿನ ಸೀಸನ್​ನಲ್ಲಿ ಗೇಲ್ ಆಡುವುದಿಲ್ಲವಾ? ಚುಟುಕು ಕದನದಿಂದ ಹಿಂದೆ ಸರಿಯಲು ನಿರ್ಧರಿಸಿದ್ರಾ ಗೇಲ್? ಕಳೆದ ಒಂದು ದಿನದಿಂದ ಇಂತಹದೊಂದು ಪ್ರಶ್ನೆ ಹಲವರಲ್ಲಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಕ್ರಿಸ್ ಗೇಲ್ ಅವರು ಮಾಡಿರುವ ಒಂದು ಟ್ವೀಟ್. ಹೌದು, ನನ್ನ ಸೀಸನ್ ಮುಕ್ತಾಯವಾಗಿದೆ. ಐಪಿಎಲ್ ನೋಡುವುದನ್ನು ಮುಂದುವರೆಸಿ ಎಂದು ಗೇಲ್ ಮಾಡಿರುವ ಒಂದು ಟ್ವೀಟ್ ಈಗ ಅವರ ನಿವೃತ್ತಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

  ಈ ಬಾರಿಯ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ ಮೊದಲ 7 ಪಂದ್ಯಗಳಲ್ಲಿ  ಅವಕಾಶ ಸಿಕ್ಕಿರಲಿಲ್ಲ. ಬಳಿಕ 7 ಪಂದ್ಯಗಳಲ್ಲಿ ಕಣಕ್ಕಿಳಿದ ಗೇಲ್ ಮತ್ತೊಮ್ಮೆ ನಾನು ಯುನಿವರ್ಸ್ ಬಾಸ್ ಎಂಬುದನ್ನು ಸಾಬೀತುಪಡಿಸಿದ್ದರು. ಅದರಲ್ಲೂ ಕ್ರಿಸ್ ಗೇಲ್ ಕಣಕ್ಕಿಳಿದ 7 ಪಂದ್ಯಗಳಲ್ಲಿ ಪಂಜಾಬ್ 5 ರಲ್ಲಿ ಜಯ ಸಾಧಿಸಿತ್ತು ಎಂಬುದು ವಿಶೇಷ. ಇದಾಗ್ಯೂ ರಾಹುಲ್ ಪಡೆ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. ಇತ್ತ 41 ವಯಸ್ಸಿನ ಗೇಲ್ ಅವರದ್ದು ಇದು ಕೊನೆಯ ಐಪಿಎಲ್ ಎಂಬ ಮಾತುಗಳು ಕೇಳಿಬಂದಿದ್ದವು.

  ಅದರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಬಳಿಕ ಯುವ ಆಟಗಾರ ಮಂದೀಪ್ ಸಿಂಗ್, ಗೇಲ್ ಓರ್ವ ಶ್ರೇಷ್ಠ ಆಟಗಾರ. ಅವರು ಯಾವಾಗಲೂ ಫಾರ್ಮ್​ನಲ್ಲಿರುತ್ತಾರೆ. ಅವರು ಯಾವತ್ತೂ ರನ್​ಗಾಗಿ ಪರದಾಡುವುದನ್ನು ನೋಡಿಲ್ಲ. ಹೀಗಾಗಿ ನಿವೃತ್ತಿ ಆಗಬಾರದು ಎಂದಿದ್ದರು. ಇದಕ್ಕೆ ಗೇಲ್ ಕೂಡ ಓಕೆ ನಿವೃತ್ತಿಯನ್ನು ರದ್ದುಗೊಳಿಸಿದ್ದೇನೆ ಎಂಬ ಉತ್ತರ ನೀಡಿದ್ದರು. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಮಾತುಗಳು ಹುಟ್ಟಿಕೊಂಡಿದ್ದವು.

  ಈ ಅಂತೆ ಕಂತೆಗಳಿಗೆ ಪುಷ್ಠಿ ನೀಡುವಂತೆ ಇದೀಗ ಗೇಲ್ ಮಾಡಿರುವ ಟ್ವೀಟ್ ಅಭಿಮಾನಿಗಳನ್ನು ನಿರಾಸೆ ಮೂಡಿಸಿದೆ. ನನ್ನ ಸೀಸನ್ ಮುಕ್ತಾಯವಾಗಿದೆ. ನೀವು ಐಪಿಎಲ್ ನೋಡುವುದನ್ನು ಮುಂದುವರೆಸಿ ಎಂದು ಸ್ಪೋಟಕ ಬ್ಯಾಟ್ಸ್​ಮನ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಏಕೆಂದರೆ ಇಲ್ಲಿ ಕಿಂಗ್ಸ್ ಇಲೆವೆನ್ ಸೀಸನ್ ಮುಕ್ತಾಯವಾಗಿದೆ ಎಂದು ಗೇಲ್ ಹೇಳದಿರುವುದೇ ಇಂತಹದೊಂದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

  ಅತ್ತ ಶ್ರೀಲಂಕಾ ಪ್ರೀಮಿಯರ್ ಲೀಗ್​ಗೂ ಕ್ರಿಸ್ ಗೇಲ್ ಆಯ್ಕೆಯಾಗಿದ್ದು, ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ನಿವೃತ್ತಿ ನೀಡುತ್ತಾರಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಇದಾಗ್ಯೂ ಗೇಲ್ ಬಗ್ಗೆ ಐಪಿಎಲ್ ಫ್ರಾಂಚೈಸಿ ಒಲವು ಹೊಂದಿಲ್ಲವಾ ಎಂಬ ಪ್ರಶ್ನೆಗಳೂ ಕೂಡ ಅಭಿಮಾನಿಗಳನ್ನು ಕಾಡುತ್ತಿದ್ದು, ಕೇವಲ 7 ಪಂದ್ಯಗಳಿಗೆ ಮಾತ್ರ ಅವಕಾಶ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಲಾಗುತ್ತಿದೆ. ಹೀಗಾಗಿ ಗೇಲ್ ಐಪಿಎಲ್​ಗೆ ನಿವೃತ್ತಿ ನೀಡುವ ಸೂಚನೆ ನೀಡಿದ್ದಾರೆ. ಇಲ್ಲ, ಮುಂದಿನ ಸೀಸನ್​ನಲ್ಲಿ ಆಯ್ಕೆಯಾಗುವುದಿಲ್ಲ ಎಂಬ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.

  ಇನ್ನು ಐಪಿಎಲ್​ನ 13ನೇ ಸೀಸನ್​ನಲ್ಲಿ ಕೇವಲ 7 ಪಂದ್ಯವನ್ನಾಡಿದರೂ ಕ್ರಿಸ್ ಗೇಲ್ 3 ಅರ್ಧಶತಕಗಳೊಂದಿಗೆ 288 ರನ್ ಬಾರಿಸಿ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದ್ದಾರೆ. ಇದೇ ಕಾರಣದಿಂದ 41 ರ ಹರೆಯದ ಯುನಿರ್ವಸ್ ಬಾಸ್ ಮುಂದಿನ ಸೀಸನ್​ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರಾ? ಕಾದು ನೋಡಬೇಕಿದೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
  Published by:zahir
  First published: