IPL 2020: RCB ತಂಡದಿಂದ ಹೊರನಡೆಯುತ್ತಿದ್ದಂತೆ, ಎಲ್ಲವೂ ಸರಿಯಿಲ್ಲ ಎಂದ ಝಂಪಾ..!

ಆರು ತಿಂಗಳ ಹಿಂದೆ ದುಬೈನಲ್ಲಿ ಆಯೋಜಿಸಲಾಗಿದ್ದ ಐಪಿಎಲ್​ ವೇಳೆ ನಮಗೆ ಈ ಭಾವನೆ ಇರಲಿಲ್ಲ. ಅಲ್ಲಿ ಆಡುವಾಗ ನಾವು ತುಂಬಾ ಸುರಕ್ಷಿತವಾಗಿದ್ದೇವೆ ಎಂಬ ಭಾವನೆಯಿತ್ತು. ಆದರೆ...

ಆ್ಯಡಂ ಝಂಪಾ - ವಿರಾಟ್ ಕೊಹ್ಲಿ

ಆ್ಯಡಂ ಝಂಪಾ - ವಿರಾಟ್ ಕೊಹ್ಲಿ

  • Share this:
    ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಹಾಗೂ ಕೇನ್ ರಿಚರ್ಡ್ಸನ್ ಏಪ್ರಿಲ್ 27 ರಂದು ಐಪಿಎಲ್​ ತೊರೆಯುವ ನಿರ್ಧಾರ ಪ್ರಕಟಿಸಿದ್ದರು. ಅದರಂತೆ ಆರ್​ಸಿಬಿ ತಂಡ ಕೂಡ ಇಬ್ಬರು ಆಟಗಾರರು ವೈಯುಕ್ತಿಕ ಕಾರಣಗಳಿಗಾಗಿ ತಂಡದಿಂದ ಹೊರನಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ದಿಢೀರಣೆ ಇಂತಹ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವೇನು ಎಂಬುದನ್ನು ಝಂಪಾ ಬಹಿರಂಗಪಡಿಸಿದ್ದಾರೆ. ಸ್ವದೇಶಕ್ಕೆ ತೆರಳಿದ ಬಳಿಕ ಮಾತನಾಡಿರುವ ಝಂಪಾ, ಐಪಿಎಲ್​ ಬಯೋಬಬಲ್ ಅಸುರಕ್ಷಿತವಾಗಿತ್ತು. ಹೀಗಾಗಿ ಟೂರ್ನಿಯಿಂದ ಹೊರನಡೆಯಲು ನಿರ್ಧರಿಸಿದೆ ಎಂದಿದ್ದಾರೆ.

    ಕಳೆದ ವರ್ಷ ಯುಎಇನಲ್ಲಿ ನಡೆದ ಪಂದ್ಯಾವಳಿ ಹೆಚ್ಚು ಸುರಕ್ಷಿತವಾಗಿತ್ತು. ಆದರೆ ಭಾರತದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬಯೋಬಬಲ್ ಅತ್ಯಂತ ದುರ್ಬಲ ಎಂದು ನಾನು ಭಾವಿಸುತ್ತೇನೆ. ನಮಗೆ ಯಾವಾಗಲೂ ಇಲ್ಲಿ ಸ್ವಚ್ಛತೆ ಬಗ್ಗೆ ಹೇಳಲಾಗುತ್ತದೆ. ಹಾಗೆಯೇ ಇದರ ಬಗ್ಗೆ ಹೆಚ್ಚಿನ ಜಾಗರೂಕತೆಯಿಂದ ಇರಬೇಕಾಗುತ್ತದೆ. ಭಾರತದಲ್ಲಿ ಈ ವ್ಯವಸ್ಥೆ ಅತ್ಯಂತ ದುರ್ಬಲ ಎಂಬುದು ನನ್ನ ಭಾವನೆ. ಹೀಗಾಗಿ ಐಪಿಎಲ್​ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಎಂದು ಝಂಪಾ ಹೇಳಿದ್ದಾರೆ.

    ಆರು ತಿಂಗಳ ಹಿಂದೆ ದುಬೈನಲ್ಲಿ ಆಯೋಜಿಸಲಾಗಿದ್ದ ಐಪಿಎಲ್​ ವೇಳೆ ನಮಗೆ ಈ ಭಾವನೆ ಇರಲಿಲ್ಲ. ಅಲ್ಲಿ ಆಡುವಾಗ ನಾವು ತುಂಬಾ ಸುರಕ್ಷಿತವಾಗಿದ್ದೇವೆ ಎಂಬ ಭಾವನೆಯಿತ್ತು. ಆದರೆ ಭಾರತದಲ್ಲಿ ಅದಿರಲಿಲ್ಲ. ನನ್ನ ಪ್ರಕಾರ ಈ ಬಾರಿ ಕೂಡ ಐಪಿಎಲ್ ನಡೆಸಲು ದುಬೈ ಉತ್ತಮ ಆಯ್ಕೆಯಾಗಿತ್ತು. ಆದರೆ ರಾಜಕೀಯ ಕಾರಣಗಳಿಂದ ದುಬೈನಲ್ಲಿ ಆಯೋಜಿಸಿಲ್ಲ ಎಂಬುದು ನನ್ನ ಅನಿಸಿಕೆ ಎಂದು ಆ್ಯಡಂ ಝಂಪಾ ಹೇಳಿದ್ದಾರೆ.

    ನಿಸ್ಸಂಶಯವಾಗಿ ಕೋವಿಡ್ ಪರಿಸ್ಥಿತಿ ತುಂಬಾ ಭೀಕರವಾಗಿದೆ. ಇದಾಗ್ಯೂ ಐಪಿಎಲ್​ ನಡೆಯುವುದರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಅನೇಕರು ಹೇಳುತ್ತಿದ್ದಾರೆ. ಈ ಉತ್ತರ ತುಂಬಾ ವೈಯಕ್ತಿಕವಾಗಿದೆ. ಏಕೆಂದರೆ ಕುಟುಂಬದ ಸದಸ್ಯ ಹಾಸಿಗೆಯಲ್ಲಿ ಸಾವಿನೊಂದಿಗೆ ಹೋರಾಡುತ್ತಿದ್ದರೆ, ಯಾರೂ ಕೂಡ ಕ್ರಿಕೆಟ್ ಬಗ್ಗೆ ಯೋಚಿಸುವುದಿಲ್ಲ. ಆರ್ಥಿಕ ನಷ್ಟದ ಬಗ್ಗೆಯೂ ಚಿಂತಿಸುವುದಿಲ್ಲ. ಟೂರ್ನಿಯಿಂದ ಹೊರನಡೆಯುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ನಿಜ. ಆದರೆ ನಾನು ಅದಕ್ಕಿಂತ ಮುಖ್ಯವಾಗಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಲು ಬಯಸುತ್ತೇನೆ ಎಂದು ಝಂಪಾ ಹೇಳಿದ್ದಾರೆ.

    ಮುಂದಿನ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಇದಕ್ಕೆ ಇನ್ನೂ 6 ತಿಂಗಳ ಸಮಯವಿದೆ. ಇದು ಬಹುಶಃ ಕ್ರಿಕೆಟ್ ಜಗತ್ತಿನಲ್ಲಿ ಮುಂದಿನ ಚರ್ಚೆಯಾಗಲಿದೆ ಎಂದು ಝಂಪಾ ಅಭಿಪ್ರಾಯಪಟ್ಟಿದ್ದಾರೆ.
    Published by:zahir
    First published: