IPL

  • associate partner

IPL 2020: ಮೊದಲ ಮ್ಯಾಚ್​ KKR ನಾಯಕನಿಗೆ ಮಾಡು ಇಲ್ಲವೇ ಮಡಿ ಪಂದ್ಯ..!

ಕೆಕೆಆರ್​ 2012 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಅಲ್ಲಿಯವರೆಗೂ ಸಾಧಾರಣ ತಂಡ ಎಂದು ಗುರುಸಿಕೊಂಡಿದ್ದ ಕೆಕೆಆರ್ ಇಮೇಜ್ ಬದಲಾಯಿತು.

news18-kannada
Updated:September 23, 2020, 5:52 PM IST
IPL 2020: ಮೊದಲ ಮ್ಯಾಚ್​ KKR ನಾಯಕನಿಗೆ ಮಾಡು ಇಲ್ಲವೇ ಮಡಿ ಪಂದ್ಯ..!
dinesh karthik
  • Share this:
IPLನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಬುಧವಾರ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ 13ನೇ ಸೀಸನ್ ಐಪಿಎಲ್​​ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲೇ ಜಯಗಳಿಸುವ ಮೂಲಕ ಟೂರ್ನಿಯನ್ನು ಭರ್ಜರಿಯಾಗಿ ಪ್ರಾಂಭಿಸಲು ಕೊಲ್ಕತ್ತಾ ಪಡೆ ಸಜ್ಜಾಗಿ ನಿಂತಿದೆ. ಇಂದಿನ ಪಂದ್ಯದಲ್ಲಿ ಕೆಕೆಆರ್​ಗೆ ಗೆಲುವುಗಿಂತ ನಾಯಕ ದಿನೇಶ್ ಕಾರ್ತಿಕ್​ಗೆ ಜಯದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಕಾರಣ ತಂಡದಲ್ಲಿರುವ ಸ್ಟಾರ್ ಆಟಗಾರರು.

ಹೌದು, ಕೆಕೆಆರ್​ 2012 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಅಲ್ಲಿಯವರೆಗೂ ಸಾಧಾರಣ ತಂಡ ಎಂದು ಗುರುಸಿಕೊಂಡಿದ್ದ ಕೆಕೆಆರ್ ಇಮೇಜ್ ಬದಲಾಯಿತು. 2013ರಲ್ಲೂ ಉತ್ತಮ ಪ್ರದರ್ಶನ ನೀಡಿದರೂ ಅಂತಿಮ ಹಂತಕ್ಕೆ ತಲುಪಲಾಗಿರಲಿಲ್ಲ. ಆದರೆ 2014 ರಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ ಮತ್ತೊಮ್ಮೆ ಮಿಂಚಿತ್ತು. ಆದರೆ ಕೊಲ್ಕತ್ತಾ ತಂಡವನ್ನು ಯಾವಾಗ ಗೌತಮ್ ಗಂಭೀರ್, ಮನೀಷ್ ಪಾಂಡೆ, ಯುಸುಫ್ ಪಠಾಣ್ ತೊರೆದರೂ ಅಲ್ಲಿ ಉಳಿದದ್ದು ಆಂಡ್ರೆ ರಸೆಲ್ ಎಂಬ ಏಕಾಂಗಿ ಹೋರಾಟಗಾರ.

ಹೀಗಾಗಿಯೇ ತಂಡದ ಫಲಿತಾಂಶಗಳು ಮೇಲೆ ಕೆಳಗಾಗಲು ಆರಂಭಿಸಿತು. ಕಳೆದ 2 ಸೀಸನ್​ಗಳಲ್ಲೂ ಕೆಕೆಆರ್​ ಕಡೆಯಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕೂಡ ಮೂಡಿ ಬಂದಿರಲಿಲ್ಲ. ಇತ್ತ ಇಡೀ ತಂಡದ ಸಂಪೂರ್ಣ ಜವಾಬ್ದಾರಿ ರಸೆಲ್ ಮೇಲಿತ್ತು. ವಿಂಡೀಸ್ ದಾಂಡಿಗ ಮಿಂಚಿದ್ರೆ ಮಾತ್ರ ಕೆಕೆಆರ್​ಗೆ ಗೆಲುವು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತ ತಂಡದ ಸಾರಥ್ಯವಹಿಸಿರುವ ದಿನೇಶ್ ಕಾರ್ತಿಕ್ ಪ್ರದರ್ಶನ ಕೂಡ ಅಷ್ಟಕಷ್ಟೇ. ಕಳೆದ ಸೀಸನ್​ನಲ್ಲಿ 14 ಪಂದ್ಯವನ್ನಾಡಿದ ಕಾರ್ತಿಕ್ ಗಳಿಸಿದ್ದು ಕೇವಲ 253 ರನ್​ಗಳು ಮಾತ್ರ. ಹೀಗಾಗಿಯೇ ಕೆಕೆಆರ್ ನಾಯಕತ್ವದ ಬದಲಾವಣೆ ಬಗ್ಗೆ ಕಳೆದ ವರ್ಷವೇ ಗುಸು ಗುಸು ಕೇಳಿ ಬಂದಿತ್ತು. ಇದೇ ಕಾರಣದಿಂದಲೇ ಕೆಕೆಆರ್ ಫ್ರಾಂಚೈಸಿ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗನ್ ಅವರನ್ನು ಈ ಬಾರಿ 5.25 ಕೋಟಿ ನೀಡಿ ಖರೀದಿಸಿದೆ.

ಒಂದು ವೇಳೆ ದಿನೇಶ್ ಕಾರ್ತಿಕ್ ಈ ಬಾರಿ ಕೂಡ ವೈಫಲ್ಯ ಹೊಂದಿದ್ರೆ ತಂಡದ ನಾಯಕ ಬದಲಾಗುವುದು ಬಹುತೇಕ ಖಚಿತ. ಏಕೆಂದರೆ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕ ಎಂಬ ಹೆಗ್ಗಳಿಕೆ ಹೊಂದಿರುವ ಮೋರ್ಗನ್ ಉತ್ತಮವಾಗಿ ಟೀಮ್​ನ್ನು ನಿಭಾಯಿಸಬಲ್ಲರು. ಹೀಗಾಗಿ ಮೊದಲ ಪಂದ್ಯದಲ್ಲೇ ದಿನೇಶ್ ಕಾರ್ತಿಕ್ ಪ್ರದರ್ಶನ ಹಾಗೂ ತಂಡದ ಒಟ್ಟಾರೆ ನಿರ್ವಹಣೆ ಪರಿಗಣನೆಗೆ ಬರಲಿದೆ.

ಇದೇ ಕಾರಣದಿಂದಲೇ ಇತ್ತೀಚೆಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂಡ ಕೆಕೆಆರ್​ ತಂಡದ ನಾಯಕತ್ವ ಬದಲಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಅಲ್ಲದೆ ಮೊದಲ ನಾಲ್ಕೈದು ಪಂದ್ಯಗಳಲ್ಲಿನ ಫಲಿತಾಂಶವು ದಿನೇಶ್ ಕಾರ್ತಿಕ್ ಅವರ ಕಪ್ತಾನ ಸ್ಥಾನವನ್ನು ನಿರ್ಧರಿಸಲಿದೆ ಎಂದಿದ್ದರು. ಹೀಗಾಗಿ ಕೆಕೆಆರ್​ ತಂಡದ ಪ್ರತಿ ಸೋಲು ಕೂಡ ಕಾರ್ತಿಕ್​ಗೆ ತೂಗುಗತ್ತಿಯಾಗಿ ಪರಿಣಮಿಸಲಿದೆ.
POINTS TABLE: SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:



ಇದನ್ನೂ ಓದಿ: IPL 2020, KKR vs MI: ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವವರು ಯಾರು? ಇಲ್ಲಿದೆ ಮಾಹಿತಿ
Published by: zahir
First published: September 23, 2020, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading