ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಟಿ-20 ಪಂದ್ಯದಲ್ಲಿ ಭಾರತ ತಂಡವನ್ನೇ ಸೋಲಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಸಂಕ್ಷಿಪ್ತವಾಗಿ ವಿವರಣೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಓಪನರ್ಗಳು, ಮಧ್ಯಮ ಕ್ರಮಾಂಕ ಹಾಗೂ ಬೌಲರ್ಗಳನ್ನು ಟೀಂ ಇಂಡಿಯಾಕ್ಕೆ ಹೋಲಿಸಿ ಚೋಪ್ರಾ ಮಾತನಾಡಿದ್ದಾರೆ.
ಕೇವಲ ಓಪನಿಂಗ್, ಮಧ್ಯಮ ಕ್ರಮಾಂಕ ಮಾತ್ರವಲ್ಲದೆ ಫಿನಿಶಿಂಗ್ನಲ್ಲೂ ಭಾರತ ತಂಡಕ್ಕೆ ಹೋಲಿಸಿದರೆ ಮುಂಬೈ ಬಲಿಷ್ಠವಾಗಿದೆ ಎಂದಿರುವ ಚೋಪ್ರಾ, ಹಾರ್ದಿಕ್ ಪಾಂಡ್ಯ, ಕೀರೊನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ ಪ್ರಮುಖ ಬ್ಯಾಟಿಂಗ್ ಶಕ್ತಿ ಎಂದಿದ್ದಾರೆ. ಇನ್ನೂ ಐಪಿಎಲ್ ಫೈನಲ್ನಲ್ಲಿ ರಾಹುಲ್ ಚಹಾರ್ ಬದಲು ಜಯಂತ್ ಯಾದವ್ ಕಣಕ್ಕಿಳಿಸಿ ಮುಂಬೈ ತಂಡ ತನ್ನ ಕಣಕಣದಲ್ಲೂ ಬಲ ಇದೆ ಎಂಬುದು ತೋರಿಸಿದೆ ಎಂದು ಹೇಳಿದ್ದಾರೆ.
"ಭಾರತ ವಿರುದ್ಧದ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಮುಂಬೈ ತಂಡವನ್ನು ಪ್ರತಿನಿಧಿಸಬೇಕು. ಓಪನರ್ ಆಗಿ ರೋಹಿತ್ ಕಣಕ್ಕಿಳಿದರೆ, ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್ 5, 6 ಹಾಗೂ 7ನೇ ಕ್ರಮಾಂಕದಲ್ಲಿ ಆಡಬೇಕು. ಇದು ಭಾರತದ ಬ್ಯಾಟಿಂಗ್ ಲೈನ್ಅಪ್ಗಿಂತ ಉತ್ತಮವಾಗಿದೆ".
IPL 2021: 9 ತಂಡಗಳ ಜೊತೆ ಐಪಿಎಲ್ 2021ರಲ್ಲಿ ಇರಲಿದೆ ಮತ್ತೊಂದು ಬಿಗ್ ಸರ್ಪ್ರೈಸ್: ಏನದು?, ಇಲ್ಲಿದೆ ಮಾಹಿತಿ
"ಮುಂಬೈ ಒರ ರೋಹಿತ್, ಕ್ವಿಂಟನ್ ಡಿಕಾಕ್ ಇನ್ನಿಂಗ್ಸ್ ಆರಂಭಿಸಿದರೆ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಭಾರತ ತಂಡದಲ್ಲಿನ ಶಿಖರ್ ಧವನ್, ಕೆ. ಎಲ್ ರಾಹುಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜಾಗಕ್ಕೆ ಕಠಿಣ ಪೈಪೋಟಿ ನೀಡಲಿದ್ದಾರೆ ಎಂಬುದು ಚೋಪ್ರಾ ಮಾತು.
ಇನ್ನೂ ಬೌಲಿಂಗ್ ವಿಭಾಗಕ್ಕೆ ಬಂದರೆ, "ಮುಂಬೈ ಪರ ಜಸ್ಪ್ರೀತ್ ಬುಮ್ರಾ ಇದ್ದರೆ, ಭಾರತ ತಂಡದಲ್ಲಿ ಮೊಹಮ್ಮದ್ ಶಮಿ. ಟ್ರೆಂಟ್ ಬೌಲ್ಟ್ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಅಥವಾ ದೀಪಕ್ ಚಹಾರ್, ಜೇಮ್ಸ್ ಪ್ಯಾಟಿನ್ಸನ್ ಅಥವಾ ನಥನ್ ಕಲ್ಟರ್ ನೈಲ್ ಜಾಗಕ್ಕೆ ನವ್ದೀಪ್ ಸೈನಿ. ಹೀಗೆ ನೋಡಿದರೆ ಭಾರತ ತಂಡಕ್ಕಿಂತ ಮುಂಬೈ ಅತ್ಯಂತ ಬಲಿಷ್ಠ" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
IPL 2021: ಟ್ರೋಫಿ ಗೆದ್ದು ದಾಖಲೆ ಬರೆದರೂ ಮುಂಬೈಯಿಂದ ಅಚ್ಚರಿ ನಿರ್ಧಾರ: 3 ಸ್ಟಾರ್ ಆಟಗಾರರ ಬಿಡುಗಡೆ
"ಮುಂಬೈಗೆ ಹೋಲಿಕೆ ಮಾಡಿದರೆ ಭಾರತ ತಂಡ ಬಲಿಷ್ಠ ಎಂದು ಗೋಚರಿಸುವುದು ಸ್ಪಿನ್ ವಿಭಾಗದಲ್ಲಿ ಮಾತ್ರ. ಮುಂಬೈ ಪರ ಜಯಂತ್ ಯಾದವ್ ಅಥವಾ ರಾಹುಲ್ ಚಹಾರ್ ಇದ್ದರೆ, ಭಾರತಕ್ಕೆ ರವೀಂದ್ರ ಜಡೇಜಾ, ಕುಲ್ದೀಪ್ ಅಥವಾ ಚಹಾಲ್ ಇದ್ದಾರೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ