news18-kannada Updated:October 15, 2020, 8:22 PM IST
RCB
ಯುಎಇನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಯಿಯರ್ ಲೀಗ್ ಟೂರ್ನಿ ಅದಾಗಲೆ ಅರ್ಧದಷ್ಟು ಮುಗಿದುಹೋಗಿದೆ. ಪ್ರತಿಬಾರಿ ಬಲಿಷ್ಠವಾಗಿದ್ದ ತಂಡ ಈ ಬಾರಿ ಪರಾಕ್ರಮ ಮೆರೆಯದೆ ಎದುರಾಳಿಗೆ ಶರಣಾಗುತ್ತಿದೆ. ದುರ್ಬಲ ಎಂದುಕೊಂಡಿದ್ದ ತಂಡ ಟೇಬಲ್ ಟಾಪರ್ನಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗೆ ಯಾರೂ ಊಹಿಸಲಾಗದ ರೀತಿಯಲ್ಲಿ ಐಪಿಎಲ್ 2020 ಸಾಗುತ್ತಿದೆ. ಈ ಪೈಕಿ ಈಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.
ಕೊಹ್ಲಿ ಸೈನ್ಯ ಈಗಾಗಲೇ ಆಡಿರುವ 7 ಪಂದ್ಯಗಳ ಪೈಕಿ 5 ರಲ್ಲಿ ಜಯ ಸಾಧಿಸಿ, 2 ಪಂದ್ಯಗಳನ್ನು ಕೈಚೆಲ್ಲಿದೆಯಷ್ಟೆ. ಪ್ರಚಂಡ ಫಾರ್ಮ್ನಲ್ಲಿರುವ ಆರ್ಸಿಬಿಗೆ ಏಳು ಪಂದ್ಯಗಳು ಬಾಕಿ ಉಳಿದಿವೆ. ಇದರಲ್ಲಿ ಎಷ್ಟು ಪಂದ್ಯ ಗೆದ್ದರೆ ಬೆಂಗಳೂರು ತಂಡ ಪ್ಲೇ ಆಫ್ಗೆ ಲಗ್ಗೆಯಿಡಲಿದೆ?. ಇಲ್ಲಿದೆ ಮಾಹಿತಿ.
RCB vs KXIP, IPL 2020 Live Score
ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ 10 ಅಂಕಸಂಪಾದಿಸಿ 3ನೇ ಸ್ಥಾನದಲ್ಲಿದೆ. ಆದರೆ, ಮೈನಸ್ ರನ್ರೇಟ್ನಲ್ಲಿರುವ ಆರ್ಸಿಬಿ, ಮುಂದಿನ ಪಂದ್ಯಗಳಲ್ಲಿ ಗೆಲುವಿನ ಜತೆಗೆ ರನ್ರೇಟ್ ಸುಧಾರಿಸುವುದು ಮಹತ್ವ ಪಡೆದಿದೆ. ಮೊದಲ ಸ್ಥಾನದಲ್ಲಿ12 ಅಂಕದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ 10 ಅಂಕದೊಂದಿಗೆ ಮುಂಬೈ ಇಂಡಿಯನ್ಸ್ 2ನೇ ಸ್ಥಾನದಲ್ಲಿದೆ.
ಆರ್ಸಿಬಿ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ತನ್ನ 8ನೇ ಪಂದ್ಯ ಆಡುತ್ತಿದೆ. ಇದಾದ ಬಳಿಕ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಹೀಗೆ ಒಟ್ಟು ಏಳು ಪಂದ್ಯಗಳನ್ನು ಆಡಲಿದೆ.
ಈ ಏಳು ಪಂದ್ಯಗಳಲ್ಲಿ ಕೊಹ್ಲಿ ಪಡೆ ಮೂರು ಅಥವಾ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿದರೆ 16-18 ಪಾಯಿಂಟ್ ಆಗಲಿದೆ. ಆಗ ಆರ್ಸಿಬಿ ಪ್ಲೇ ಆಫ್ಗೆ ತಲುಪಲಿದೆ. ಎಲ್ಲಾದರು ಐದು ಪಂದ್ಯ ಗೆದ್ದಿತು ಎಂದಾದರೆ ಜೊತೆಗೆ ಉತ್ತಮ ರನ್ರೇಟ್ ಇದ್ದರೆ ಸುಲಭವಾಗಿ ಆರ್ಸಿಬಿ ತಂಡ ಪ್ಲೇ ಆಫ್ಗೆ ಲಗ್ಗೆಯಿಡಲಿದೆ.
Virat Kohli: ಅದೇ ಮೂಢನಂಬಿಕೆಯೊಂದಿಗೆ ಬ್ಯಾಟ್ ಬೀಸಲಿದ್ದಾರೆ ವಿರಾಟ್ ಕೊಹ್ಲಿಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪ್ರಚಂಡ ಫಾರ್ಮ್ನಲ್ಲಿದೆ. ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಂತು ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ತಂಡದ ರನ್ಗತಿಯನ್ನು ಏರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಇನ್ನೂ ಪ್ರತಿಬಾರಿ ಆರ್ಸಿಬಿ ಬೌಲಿಂಗ್ ವಿಭಾಗ ದುರ್ಬಲವಾಗಿತ್ತು. ಆದರೆ, ಈ ಬಾರಿ ವಾಷಿಂಗ್ಟನ್ ಸುಂದರ್, ನವ್ದೀಪ್ ಸೈನಿ, ಇಸುರು ಉದಾನ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಕ್ರಿಸ್ ಮೊರೀಸ್ ಸೇರ್ಪಡೆಯಾದ ಬಳಿಕ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ.
Published by:
Vinay Bhat
First published:
October 15, 2020, 8:22 PM IST