Rohit Sharma: ಚಲಿಸುತ್ತಿದ್ದ ಬಸ್​ ಮೇಲೆ ಬಿತ್ತು ಚೆಂಡು: ರೋಹಿತ್ ಶರ್ಮಾ ಸಿಡಿಸಿದ ಈ ಸಿಕ್ಸ್​ ನೀವು ನೋಡಿದ್ರಾ?

Mumbai Indians: ತಂಡದ ಆಟಗಾರರು ಅಭ್ಯಾಸ ಮಾಡುವ ವಿಡಿಯೋವನ್ನು ಹಂಚಿಕೊಂಡಿರುವ ಮುಂಬೈ ಇಂಡಿಯನ್ಸ್​, ಬುಧವಾರ ತನ್ನ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್​​ ಖಾತೆಯಲ್ಲಿ ರೋಹಿತ್ ಶರ್ಮಾ ಸಿಕ್ಸರ್​ ಮೂಲಕ ಚೆಂಡನ್ನು ಬಸ್​ಗೆ ಹೊಡೆದ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ.

news18-kannada
Updated:September 10, 2020, 8:21 AM IST
Rohit Sharma: ಚಲಿಸುತ್ತಿದ್ದ ಬಸ್​ ಮೇಲೆ ಬಿತ್ತು ಚೆಂಡು: ರೋಹಿತ್ ಶರ್ಮಾ ಸಿಡಿಸಿದ ಈ ಸಿಕ್ಸ್​ ನೀವು ನೋಡಿದ್ರಾ?
ರೋಹಿತ್ ಶರ್ಮಾ
  • Share this:
ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಉಳಿದಿವೆ. ಎಲ್ಲ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣೆಸಾಟ ನಡೆಸಲಿವೆ. ಮತ್ತೊಮ್ಮೆ ಕಪ್ ಗೆಲ್ಲಲು ಹೊಂಚು ಹಾಕಿರುವ ರೋಹಿತ್ ಪಡೆ ಇತ್ತೀಚೆಗಷ್ಟೆ ದುಬೈ ಬೀಚ್​ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಫೋಟೋ ಹಂಚಿಕೊಂಡಿತ್ತು. ಇದಾಗಿ ಸದ್ಯ ಎಲ್ಲ ಆಟಗಾರರು ಅಭ್ಯಾಸಕ್ಕೆ ಮರಳಿದ್ದು, ನೆಟ್​ನಲ್ಲಿ ಬೆವರು ಹರಿಸುತ್ತಿದ್ದಾರೆ.

ಅಂತೆಯೆ ಮುಂಬೈ ತಂಡದ ನಾಯಕ ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೂಡ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ರೋಹಿತ್‌ ಕ್ರಿಕೆಟ್‌ ಆಡದೇ ಆರು ತಿಂಗಳೇ ಕಳೆದಿದೆ. ಆದರೆ ಅವರಲ್ಲಿನ ಸಿಕ್ಸರ್‌ ಬಾರಿಸುವ ಸಾಮರ್ಥ್ಯದಲ್ಲಿ ಚೂರು ಕಡಿಮೆ ಆಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮುಂಬೈ ಇಂಡಿಯನ್ಸ್‌ ತಂಡದ ಅಭ್ಯಾಸ ಶಿಬಿರದಲ್ಲಿ ಹಿಟ್‌ಮ್ಯಾನ್‌ ಬಾರಿಸಿದ ಸಿಕ್ಸರ್‌ ಮೈದಾನದಿಂದ ಆಚೆ ಹೋಗುತ್ತಿದ್ದ ಬಸ್‌ ಒಂದಕ್ಕೆ ಬಡಿದಿರುವ ವಿಡಿಯೋ ಈಗ ವೈರಲ್‌ ಆಗಿದೆ.

CPL 2020 Semi Final: ಅಂಪೈರ್ ಔಟ್ ಕೊಟ್ಟಿದ್ದಕ್ಕೆ ತಾಳ್ಮೆ ಕಳೆದುಕೊಂಡ ರಸೆಲ್ ಮಾಡಿದ್ದೇನು ಗೊತ್ತೇ?: ವಿಡಿಯೋ ನೋಡಿ

ತಂಡದ ಆಟಗಾರರು ಅಭ್ಯಾಸ ಮಾಡುವ ವಿಡಿಯೋವನ್ನು ಹಂಚಿಕೊಂಡಿರುವ ಮುಂಬೈ ಇಂಡಿಯನ್ಸ್​, ಬುಧವಾರ ತನ್ನ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್​​ ಖಾತೆಯಲ್ಲಿ ರೋಹಿತ್ ಶರ್ಮಾ ಸಿಕ್ಸರ್​ ಮೂಲಕ ಚೆಂಡನ್ನು ಬಸ್​ಗೆ ಹೊಡೆದ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ.

ಜೊತೆಗೆ, ಲೆಜೆಂಡ್​​ ಸ್ಟೇಡಿಯಂ ಆಚೆಗೆ ಕ್ಲಿಯರ್​ ಮಾಡಿದ್ದಾರೆ. ಬೃಹತ್​ ಸಿಕ್ಸ್​ ಮೂಲಕ ಹಿಟ್​​ಮ್ಯಾನ್​ ಚಲಿಸುವ ಬಸ್​ಗೆ ಚೆಂಡನ್ನು ಬಾರಿಸಿದ್ದಾರೆ ಎಂದು ಬರೆದುಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಜೊತೆ ಸ್ಫೋಟಕ ಆಟಗಾರರ ಸಾಲೇ ಇದೆ. ಕ್ವಿಂಟನ್ ಡಿಕಾಕ್, ಕ್ರಿಸ್‌ ಲಿನ್‌, ಯುವ ಆಟಗಾರ ಇಶಾನ್ ಕಿಶನ್‌ ಹಾಗೂ ಸ್ಟಾರ್‌ ಆಲ್‌ರೌಂಡರ್‌ಗಳಾದ ಕಿರೊನ್‌ ಪೊಲಾರ್ಡ್ ಮತ್ತು ಹಾರ್ದಿಕ್‌ ಪಾಂಡ್ಯ ಎಲ್ಲರೂ ಸಿಕ್ಸರ್‌ ಕಿಂಗ್‌ಗಳೇ. ಜೊತೆಗೆ ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರಂತಹ ಸ್ಟಾರ್‌ಗಳಿದ್ದಾರೆ.

Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

ರೋಹಿತ್ ಶರ್ಮಾ ಐಪಿಎಲ್​ನ ಅತ್ಯಂತ ಯಶಸ್ವಿ ಕ್ಯಾಪ್ಟನ್​ ಆಗಿದ್ದಾರೆ. ಅವರ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್​ 2013, 2015, 2017 ಹಾಗೂ 2019ರ ಆವೃತ್ತಿಗಳಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.
Published by: Vinay Bhat
First published: September 10, 2020, 8:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading