ಆರ್​ಸಿಬಿ ಸ್ಟಾರ್ ವೇಗಿ ನವ್​ದೀಪ್ ಸೈನಿ ಶೂನಲ್ಲಿ ಬರೆದ ಸಂದೇಶ ನೋಡಿದ್ರೆ ನೀವು ಶಾಕ್ ಆಗ್ತೀರಾ!

Navdeep Saini: ಈ ಸಂಧರ್ಭ ನೆಲಕ್ಕುರುಳಿದ ತೆವಾಟಿಯಾ ಬಳಿಬಂದ ನವದೀಪ್ ಸೈನಿ ಯೋಗಕ್ಷೇಮ ವಿಚಾರಿಸಿದರು. ಇದೇ ಸಮಯದಲ್ಲಿ ಸೈನಿ ಅವರ ಶೂ ಬಹಳ ಹತ್ತಿರದಲ್ಲಿ ಕ್ಯಾಮೆರಾ ಎದುರು ಕಾಣಿಸಿಕೊಂಡಿದೆ. ಅಲ್ಲದೆ ಶೋನಲ್ಲಿ ಬರೆದಿರುವುದು ಕಂಡು ಎಲ್ಲರು ದಂಗಾಗಿದ್ದಾರೆ.

ನವದೀಪ್ ಸೈನಿ

ನವದೀಪ್ ಸೈನಿ

 • Share this:
   ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭರ್ಜರಿ ಆಗಿ ಆರಂಭಿಸಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ಕೇವಲ ಒಂದರಲ್ಲಷ್ಟೆ ವಿರಾಟ್ ಕೊಹ್ಲಿ ಸೈನ್ಯ ಸೋಲುಕಂಡಿದ್ದು, ಮೂರು ಮ್ಯಾಚ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 6 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಇಂದು ಆರ್​ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದ್ದು ಸಾಕಷ್ಟು ನಿರೀಕ್ಷೆ ಇಡಲಾಗಿದೆ.

  ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗು ಬಡಿದಿದ್ದ ಆರ್​ಸಿಬಿ 8 ವಿಕೆಟ್​ಗಳ ಅಮೋಘ ಗೆಲುವು ತನ್ನದಾಗಿಸಿತ್ತು. ನಾಯಕ ವಿರಾಟ್ ಕೊಹ್ಲಿ ಹಾಗೂ ಯುವತಾರೆ ದೇವದತ್ ಪಡಿಕ್ಕಲ್ ಬ್ಯಾಟಿಂಗ್​ನಲ್ಲಿ ಮಿಂಚಿದರೆ, ಯುಜುವೇಂದ್ರ ಚಹಾಲ್ ಸ್ಪಿನ್ ಮೋಡಿಗೆ ಆರ್​ಆರ್​ ತತ್ತರಿಸಿತ್ತು.

  IPL 2020, RCB vs DC: ಹ್ಯಾಟ್ರಿಕ್ ಜಯದ ಕನಸಲ್ಲಿ ಆರ್​ಸಿಬಿ; ಕೊಹ್ಲಿ ತಂಡದಲ್ಲಿ ಮಹತ್ವದ ಬದಲಾವಣೆ

  ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಆರ್​ಆರ್ ವಿರುದ್ಧದ ಈ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ವೇಗಿ ನವದೀಪ್ ಸೈನಿ ವಿಶೇಷ ಕಾರಣಕ್ಕಾಗಿ ಗಮನ ಸೆಳೆದಿದ್ದರು. ರಾಜಸ್ಥಾನ್ ರಾಯಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ನವದೀಪ್ ಸೈನಿ ಧರಿಸಿದ್ದ ಶೂ ಮೇಲೆ ಏನೋ ಬರೆದುಕೊಂಡಿರುವುದು ಕಂಡು ಬಂದಿದ್ದು ಸದ್ಯ ಈ ಫೋಟೋ ಭಾರೀ ವೈರಲ್ ಆಗುತ್ತಿದೆ.

  ಈ ಪಂದ್ಯದಲ್ಲಿ ಆರ್​ಆರ್​ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಇನಿಂಗ್ಸ್‌ನ ಡೆತ್‌ ಓವರ್‌ ಬೌಲಿಂಗ್‌ ಮಾಡಿದ್ದು ನವದೀಪ್‌ ಸೈನಿ. ಈ ಸಂಧರ್ಭ ಸೈನಿ ಅವರ ಯಾರ್ಕರ್ ಎಸೆತ ಮಿಸ್ ಆಗಿ ರಾಯಲ್ಸ್‌ನ ಆಲ್‌ರೌಂಡರ್‌ ತೆವಾಟಿಯಾಗೆ ಒಂದು ಅಪಾಯಕಾರಿ ಫುಲ್‌ ಟಾಸ್‌ ಎಸೆತವನ್ನು ಎಸೆದಿದ್ದರು. ಚೆಂಡನ್ನು ಡಿಫೆಂಡ್ ಮಾಡಲು ಸಾಧ್ಯವಾಗದೆ ಚೆಂಡು ನೇರವಾಗಿ ತೆವಾಟಿಯಾ ಎದೆಗೆ ಅಪ್ಪಳಿಸಿತ್ತು.

  ಈ ಸಂಧರ್ಭ ನೆಲಕ್ಕುರುಳಿದ ತೆವಾಟಿಯಾ ಬಳಿಬಂದ ಸೈನಿ ಯೋಗಕ್ಷೇಮ ವಿಚಾರಿಸಿದರು. ಇದೇ ಸಮಯದಲ್ಲಿ ಸೈನಿ ಅವರ ಶೂ ಬಹಳ ಹತ್ತಿರದಲ್ಲಿ ಕ್ಯಾಮೆರಾ ಎದುರು ಕಾಣಿಸಿಕೊಂಡಿದೆ. ಅಲ್ಲದೆ ಶೋನಲ್ಲಿ ಬರೆದಿರುವುದು ಕಂಡು ಎಲ್ಲರು ದಂಗಾಗಿದ್ದಾರೆ.

  IPL 2020: ಸತತ ಸೋಲಿನ ನಡುವೆಯೂ ದಾಖಲೆ ಬರೆದ ಕೆ.ಎಲ್.​ ರಾಹುಲ್​

  ಆರ್​​ಸಿಬಿ ವೇಗಿ ಸೈನಿ ಧರಿಸಿದ್ದ ಶೂವಿನ ಬದಿಯಲ್ಲಿ 'ಫ** ಇಟ್! ಬೌಲ್ ಫಾಸ್ಟ್ (F**k it! Bowl fast) ಎಂದು ಬರೆದಿರುವುದು ಕಂಡುಬಂದಿದೆ. ಇದನ್ನು ಕೂಡಲೇ ಗ್ರಹಿಸಿಕೊಂಡ ನೆಟ್ಟಿಗರು ಸಾಮಾಜಿಕ ತಾಣಗಳಲ್ಲಿ ಅವರ ಶೂ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಮೂಲತಃ ಹರ್ಯಾಣ ಮೂಲದ ನವದೀಪ್ ಸೈನಿ ಗಂಟೆಗೆ 145 ಕಿ.ಮೀ.ಗೂ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ವಿಶ್ವ ಶ್ರೇಷ್ಠ ಬೌಲರ್​ಗಳಾದ ಕಗಿಸೊ ರಬಾಡ, ಜಸ್‌ಪ್ರೀತ್ ಬೂಮ್ರಾ, ಡೇಲ್ ಸ್ಟೇನ್, ಲುಂಗಿ ಸಾನಿ ಎನ್‌ಗಿಡಿ ಅಂಥ ಬೌಲರ್‌ಗಳೊಂದಿಗೆ ಐಪಿಎಲ್​ನಲ್ಲಿ ಆರ್​ಸಿಬಿಯ ಸೈನಿ 4ನೇ ವೇಗದ ಬೌಲರ್‌ ಆಗಿ ಕಾಣಿಸಿಕೊಂಡಿದ್ದಾರೆ.
  Published by:Vinay Bhat
  First published: