ಸ್ಪೋಟಕ ಆಟಕ್ಕೆ ಮತ್ತೊಂದು ಹೆಸರು ವಿರೇಂದ್ರ ಸೆಹ್ವಾಗ್. ವೀರು ಕ್ರೀಸ್ನಲ್ಲಿದ್ದರೆ ಸಾಕು ಸಿಕ್ಸ್ - ಫೋರ್ಗಳು ಅನಾಯಾಸವಾಗಿ ಮೂಡಿ ಬರುತ್ತಿರುತ್ತಿದ್ದವು. ನಿವೃತ್ತಿಯೊಂದಿಗೆ ನಜಾಫ್ಘಢದ ನವಾಬನ ಆಟ ಮರೆಯಿತು. ಆದರೆ ಆತ ತನ್ನಂತೆಯೇ ಬ್ಯಾಟ್ ಬೀಸಿದ್ದಾನೆ ಎಂದು ಸೆಹ್ವಾಗ್, ಸನ್ರೈಸರ್ಸ್ ಹೈದರಾಬಾದ್ ಬ್ಯಾಟ್ಸ್ಮನ್ನ್ನು ಹಾಡಿ ಹೊಗಳಿದ್ದಾರೆ. ಹೀಗೆ ಕ್ರಿಕೆಟ್ ಅಂಗಳದ ಮಾಜಿ ಸಿಡಿಲಮರಿಯಿಂದ ಹೊಗಳಿಸಿಕೊಂಡಿದ್ದು ಮತ್ಯಾರೂ ಅಲ್ಲ ಕನ್ನಡಿಗ ಮನೀಶ್ ಪಾಂಡೆ ಎಂಬುದು ವಿಶೇಷ.
ಹೌದು, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮನೀಶ್ ಪಾಂಡೆ ಅಬ್ಬರಿಸಿದ್ದರು. 47 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 83 ರನ್ ಸಿಡಿಸಿದ್ದರು. ಈ ಭರ್ಜರಿ ಆಟದ ಮೂಲಕ ಸನ್ರೈಸರ್ಸ್ ಹೈದರಾಬಾದ್ಗೆ ಜಯ ತಂದುಕೊಟ್ಟರು. ಈ ಆಟವನ್ನು ವಿಶ್ಲೇಷಿಸಿರುವ ವೀರು, ಮನೀಶ್ ಪಾಂಡೆ ಬ್ಯಾಟಿಂಗ್ ಅನ್ನು ತನ್ನ ಬ್ಯಾಟಿಂಗ್ಗೆ ಹೋಲಿಸಿಕೊಂಡಿದ್ದಾರೆ.
ಯುಟ್ಯೂಬ್ನಲ್ಲಿ ಮಾತನಾಡಿದ ಸೆಹ್ವಾಗ್, ನನ್ನಂತೆಯೇ ಆಡಿದ್ದೀರಿ ಪಾಂಡೇಜಿ. ರಾಜಸ್ಥಾನ್ ತಂಡವನ್ನು ಹೈದರಬಾದ್ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿತ್ತು. ರಾಜಸ್ಥಾನ್ ತಂಡವು ಹೈದರಾಬಾದ್ನ ಕೈಗೊಂಬೆಯಂತಾಗಿತ್ತು. ಮನೀಶ್ ಪಾಂಡೆಯವರು ನನ್ನಂತೆಯೇ ಆಡಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಧ್ವಂಸ ಮಾಡಿಬಿಟ್ಟರು ಎಂದು ಸೆಹ್ವಾಗ್ ವಿವರಿಸಿದ್ದಾರೆ.
ಸೆಹ್ವಾಗ್ ಮನೀಶ್ ಪಾಂಡೆ ಅವರ ಈ ಇನಿಂಗ್ಸ್ನ್ನು ಹಾಡಿ ಹೊಗಳಲು ಮತ್ತೊಂದು ಕಾರಣವಿದೆ. ಏಕೆಂದರೆ ಪಾಂಡೆ ಕ್ರೀಸ್ಗಿಳಿದಾಗ 4 ರನ್‌ಗೆ ಮೊದಲ ವಿಕೆಟ್ ಕಳೆದು ಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಆಟಗಾರ ಬೈರ್‌ಸ್ಟೋವ್ ಕೂಡ ನಿರ್ಗಮಿಸಿದರು. ಈ ಹಂತದಲ್ಲಿ ಎದೆಗುಂದದೆ ಮನೀಶ್ ಪಾಂಡೆ ಸ್ಪೋಟಕ ಬ್ಯಾಟಿಂಗ್ ಮೂಲಕ ರಾಜಸ್ಥಾನ್ ಬೌಲರುಗಳು ವಿರುದ್ಧ ತಿರುಗಿ ಬಿದ್ದಿದ್ದರು. ಅದರಂತೆ 8 ಸಿಕ್ಸರ್ನೊಂದಿಗೆ 83 ಸಿಡಿಸಿ ಅಜೇಯರಾಗಿ ಉಳಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ಗೆ 8 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ