IPL 2020: ಕಟ್ಟಲು ವರುಷ, ನಾಶ ಮಾಡಲು ನಿಮಿಷ: KKR ಮಾಜಿ ನಾಯಕ ಗೌತಮ್ ಗಂಭೀರ್

ಗೌತಮ್ ಗಂಭೀರ್ ಕೆಕೆಆರ್ ತಂಡದ ನಾಯಕರಾದ ಬಳಿಕ​ 2012 ರಲ್ಲಿ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಅಲ್ಲಿಯವರೆಗೂ ಸಾಧಾರಣ ತಂಡ ಎಂದು ಗುರುಸಿಕೊಂಡಿದ್ದ ಕೆಕೆಆರ್ ಇಮೇಜ್ ಬದಲಾಯಿತು.

Gautam Gambhir

Gautam Gambhir

  • Share this:
    IPL 13ನೇ ಸೀಸನ್​ನಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನ ಸ್ಥಾನದಿಂದ ದಿನೇಶ್ ಕಾರ್ತಿಕ್ ಕೆಳಗಿಳಿದಿದ್ದಾರೆ. ಇನ್ನು ಕೆಕೆಆರ್ ಕ್ಯಾಪ್ಟನ್ ಪಟ್ಟವನ್ನು ಇಯಾನ್ ಮೋರ್ಗನ್​ಗೆ ನೀಡಲಾಗಿದೆ. ಶುಕ್ರವಾರ ನಡೆದ ಈ ಬೆಳವಣಿಗೆಗಳ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಮಾಡಿರುವ ಟ್ವೀಟ್​ವೊಂದು ವೈರಲ್ ಆಗಿದೆ.

    ಕೆಕೆಆರ್‌ ತಂಡದ ಯಶಸ್ವಿ ನಾಯಕ ಎಂದು ಗುರುತಿಸಿಕೊಂಡಿರುವ ಗೌತಮ್ ಗಂಭೀರ್ ಅವರನ್ನು 2018 ರಲ್ಲಿ ತಂಡದಿಂದ ಕೈ ಬಿಡಲಾಗಿತ್ತು. ಆ ಬಳಿಕ ದಿನೇಶ್ ಕಾರ್ತಿಕ್​​ಗೆ ನಾಯಕ ಸ್ಥಾನ ನೀಡಲಾಗಿತ್ತು. ಮೊದಲ ಸೀಸನ್​ನಲ್ಲೇ ತಂಡವನ್ನು ಪ್ಲೇ ಆಫ್​ಗೆ ಕೊಂಡೊಯ್ದಿದ್ದ ಡಿಕೆ, ಕಪ್ತಾನನ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

    ಆದರೆ ಕಳೆದ ವರ್ಷದಿಂದ ತಂಡದ ಪ್ರದರ್ಶನ ತೀರಾ ಕಳಪೆ ಮಟ್ಟದಲ್ಲಿದೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಫಲಿತಾಂಶಗಳಲ್ಲಿ ಹೆಚ್ಚಿನ ಬದಲಾವಣೆಗಳಾಗುತ್ತಿಲ್ಲ. ಈ ಬಾರಿ ಕೂಡ ಕೆಕೆಆರ್ ಭರ್ಜರಿ ಎನ್ನುವಂತಹ ಗೆಲುವು ದಾಖಲಿಸಿಲ್ಲ. ಆಡಿರುವ ಏಳು ಪಂದ್ಯಗಳಿಂದ ನಾಲ್ಕು ಜಯಗಳಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಇಲ್ಲಿ ನಾಯಕನ ಕಳಪೆ ಆಟವೇ ತಂಡದ ಸೋಲಿಗೂ ಕಾರಣವಾಗುತ್ತಿರುವುದು ಫ್ರಾಂಚೈಸಿಗಳ ಚಿಂತೆಗೆ ಕಾರಣವಾಗಿತ್ತು.

    ಈ ಸೀಸನ್​ನಲ್ಲಿ 7 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ ಗಳಿಸಿರುವುದು ಕೇವಲ 108 ರನ್​ಗಳು ಮಾತ್ರ. ಅದರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 58 ರನ್‌ ಗಳಿಸಿರುವುದೇ ಅತ್ಯುತ್ತಮ ಆಟವಾಗಿತ್ತು. ಸತತ ವೈಫಲ್ಯದಿಂದ ಕಂಗೆಟ್ಟಿರುವ ದಿನೇಶ್ ಕಾರ್ತಿಕ್ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಸಲು ಕೊನೆಗೂ ಕೆಕೆಆರ್ ನಿರ್ಧರಿಸಿದೆ. ಅದರಂತೆ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಇಯಾನ್ ಮೋರ್ಗನ್ ಇನ್ಮುಂದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

    ಈ ಸುದ್ದಿ ಹೊರಬೀಳುತ್ತಿದ್ದಂತೆ ಕೆಕೆಆರ್ ಮಾಜಿ ನಾಯಕ ಗಂಭೀರ್, ಪರಂಪರೆಯನ್ನು ನಿರ್ಮಿಸಲು ವರ್ಷಗಳು ಬೇಕಾಗುತ್ತದೆ. ಆದರೆ ಅದನ್ನು ನಾಶ ಮಾಡಲು ನಿಮಿಷಗಳು ಸಾಕು ಎಂದು ಟ್ವೀಟ್ ಮಾಡಿದ್ದಾರೆ. ಕಟ್ಟಲು ವರುಷ, ನಾಶ ಮಾಡಲು ನಿಮಿಷ ಎಂಬಾರ್ಥದಲ್ಲಿ ಪರೋಕ್ಷ ಟಾಂಗ್ ನೀಡಿರುವ ಗೌತಿ, ದಿನೇಶ್ ಕಾರ್ತಿಕ್ ಅವರನ್ನು ಟೀಕಿಸಿದ್ರಾ ಅಥವಾ ಕೆಕೆಆರ್ ಫ್ರಾಂಚೈಸಿಗೆ ಚುಚ್ಚಿದ್ರಾ ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ.

    ಏಕೆಂದರೆ ಒಂದು ಸಂದರ್ಭದಲ್ಲಿ ಕೆಕೆಆರ್ ಸತತ ಸೋಲುಗಳ ಮೂಲಕ ಐಪಿಎಲ್​ನ ಅತ್ಯಂತ ಕಳಪೆ ತಂಡ ಎಂದು ಗುರುತಿಸಿಕೊಂಡಿತ್ತು. ಆದರೆ ಗೌತಮ್ ಗಂಭೀರ್ ಕೆಕೆಆರ್ ತಂಡದ ನಾಯಕರಾದ ಬಳಿಕ​ 2012 ರಲ್ಲಿ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಅಲ್ಲಿಯವರೆಗೂ ಸಾಧಾರಣ ತಂಡ ಎಂದು ಗುರುಸಿಕೊಂಡಿದ್ದ ಕೆಕೆಆರ್ ಇಮೇಜ್ ಬದಲಾಯಿತು.

    2013ರಲ್ಲೂ ಉತ್ತಮ ಪ್ರದರ್ಶನ ನೀಡಿದರೂ ಅಂತಿಮ ಹಂತಕ್ಕೆ ತಲುಪಲಾಗಿರಲಿಲ್ಲ. ಆದರೆ 2014 ರಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ ಮತ್ತೊಮ್ಮೆ ಮಿಂಚಿದ್ದರು. ಇದೀಗ ಮತ್ತೊಮ್ಮೆ ಕೆಕೆಆರ್ ತಂಡ ಕಳಪೆ ಪ್ರದರ್ಶನದೊಂದಿಗೆ ಸುದ್ದಿಯಲ್ಲಿದೆ. ಅದರೊಂದಿಗೆ ಟೂರ್ನಿ ಮಧ್ಯದಲ್ಲೇ ನಾಯಕನ ಬದಲಾವಣೆ ಕೂಡ ಆಗಿದೆ. ಹೀಗಾಗಿಯೇ ಗೌತಮ್ ಗಂಭೀರ್ ಅವರು ಒಂದು ತಂಡವನ್ನು ಕಟ್ಟಲು ವರುಷಗಳು ಬೇಕು. ಆದರೆ ಅದನ್ನು ನಿರ್ನಾಮ ಮಾಡಲು ನಿಮಿಷಗಳು ಸಾಕು ಎಂಬಾರ್ಥದಲ್ಲಿ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
    Published by:zahir
    First published: