IPL 2020: ರಾಹುಲ್‌ ಬದಲು ಆತನಿಗೆ ಮ್ಯಾನ್‌ ಆಫ್‌ ದಿ ಮ್ಯಾಚ್‌ ನೀಡಬೇಕಿತ್ತು: ಕ್ರಿಸ್ ಗೇಲ್

2ನೇ ಸೂಪರ್ ನಿಯಮದ ಪ್ರಕಾರ, ಮೊದಲ ಸೂಪರ್ ಓವರ್​ನಲ್ಲಿ ಔಟ್ ಆದ ಆಟಗಾರರು ಬ್ಯಾಟಿಂಗ್ ಮಾಡುವಂತಿಲ್ಲ. ಹಾಗೆಯೇ ಓವರ್ ಮಾಡಿದ ಬೌಲರ್ ಮತ್ತೆ ಚೆಂಡೆಸೆಯುವಂತಿಲ್ಲ.

Chris gayle

Chris gayle

  • Share this:
    ಐಪಿಎಲ್​ನ 36ನೇ ಪಂದ್ಯದಲ್ಲಿ ಸೂಪರ್ ಓವರ್ ಸೂಪರ್​ ಆಟದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ನಿಗದಿತ ಓವರ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ 51 ಎಸೆತಗಳಲ್ಲಿ 77 ರನ್ ಬಾರಿಸಿದ್ದ ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ ಕೆಎಲ್​ಆರ್ ಗಿಂತಲೂ ಈ ಪಂದ್ಯದಲ್ಲಿ ಮೊಹಮ್ಮದ್ ಶಮಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕಿತ್ತು ಎಂದು ಕಿಂಗ್ಸ್ ಇಲೆವೆನ್ ತಂಡದ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ಅಭಿಪ್ರಾಯಪಟ್ಟಿದ್ದಾರೆ.

    ಏಕೆಂದರೆ ಮುಂಬೈ ಇಂಡಿಯನ್ಸ್‌ ವಿರುದ್ಧ ಮೊದಲನೇ ಸೂಪರ್‌ ಓವರ್‌ನಲ್ಲಿ ಕೇವಲ 5 ರನ್‌ಗಳನ್ನು ನೀಡಿ ಸೂಪರ್ ಓವರ್​ನ್ನು ಟೈ ಮಾಡಿದ ಮೊಹಮ್ಮದ್‌ ಶಮಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರು ಎಂದು ಭಾವಿಸುವೆ. ಇದರಿಂದಾಗಿ ಪಂದ್ಯ ಮುಂದುವರೆದು ಗೆಲುವು ದಾಖಲಿಸಲು ಸಾಧ್ಯವಾಯಿತು ಎಂದು ಗೇಲ್ ತಿಳಿಸಿದರು.

    ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್‌ ಡಿ ಕಾಕ್‌ ಅವರಿಗೆ ಅದ್ಭುತವಾಗಿ ಬೌಲಿಂಗ್ ಮಾಡಿ ಕೇವಲ 5 ರನ್‌ಗಳಿಗೆ ತಂಡದ ಮೊತ್ತವನ್ನು ನಿಯಂತ್ರಿಸಿದರು. ಅಭ್ಯಾಸದ ವೇಳೆ ನಾನು ಶಮಿ ಎಸೆತಗಳನ್ನು ಎದುರಿಸಿದ್ದೇನೆ. ಅವರು ಅದ್ಭುತವಾಗಿ ಯಾರ್ಕರ್‌ಗಳು ಹಾಕುತ್ತಾರೆ. ಅದನ್ನು ಮುಂಬೈ ವಿರುದ್ಧ ಮತ್ತೊಮ್ಮೆ ಸಾಬೀತುಪಡಿಸಿದರು. ಅಲ್ಲದೆ ನಮ್ಮ ತಂಡಕ್ಕೆ ಎರಡನೇ ಅವಕಾಶವನ್ನು ಕಲ್ಪಿಸಿದರು. ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಶಮಿ ಸಲ್ಲಬೇಕಿತ್ತು ಎಂದು ಗೇಲ್ ಅಭಿಪ್ರಾಯಪಟ್ಟರು.

    ಭಾನುವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಉಭಯ ತಂಡಗಳು 176 ರನ್​ಗಳ ಸಮಬಲ ಸಾಧಿಸಿತು. ಈ ಹಿನ್ನೆಲೆಯಲ್ಲಿ ಸೂಪರ್ ಓವರ್ ಆಡಿಸಲಾಗಿತ್ತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ಜಸ್​ಪ್ರೀತ್ ಬುಮ್ರಾ ಓವರ್​ನಲ್ಲಿ ಕೇವಲ 5 ರನ್​ಗಳಿಸಲಷ್ಟೇ ಶಕ್ತವಾಯಿತು. 6 ಎಸೆತಗಳಲ್ಲಿ ಸಾಧಾರಣ ಗುರಿ ಪಡೆದ ಮುಂಬೈ ಇಂಡಿಯನ್ಸ್​ ಕೂಡ 5 ರನ್​ಗಳಿಸುವುದರೊಂದಿಗೆ ಸಮಬಲ ಸಾಧಿಸಿತು. ಮೊಹಮ್ಮದ್ ಶಮಿ ಭರ್ಜರಿ ಬೌಲಿಂಗ್ ಮುಂದೆ ರೋಹಿತ್ - ಡಿಕಾಕ್ ರನ್​ಗಳಿಸಲು ಪರದಾಡಿದರು. ಅಂತಿಮ ಎಸೆತದಲ್ಲಿ 2 ರನ್​ಗಳ ಅವಶ್ಯತೆಯಿದ್ದಾಗ ಕೆಎಲ್ ರಾಹುಲ್ ಡಿಕಾಕ್ ಅವರನ್ನು ಅದ್ಭುತವಾಗಿ ರನೌಟ್ ಮಾಡಿ ಸೂಪರ್ ಓವರ್ ಅನ್ನು ಸಹ ಟೈ ಆಗಿಸಿದರು.

    2ನೇ ಸೂಪರ್ ನಿಯಮದ ಪ್ರಕಾರ, ಮೊದಲ ಸೂಪರ್ ಓವರ್​ನಲ್ಲಿ ಔಟ್ ಆದ ಆಟಗಾರರು ಬ್ಯಾಟಿಂಗ್ ಮಾಡುವಂತಿಲ್ಲ. ಹಾಗೆಯೇ ಓವರ್ ಮಾಡಿದ ಬೌಲರ್ ಮತ್ತೆ ಚೆಂಡೆಸೆಯುವಂತಿಲ್ಲ. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಕಣಕ್ಕಿಳಿದರು. ಕ್ರಿಸ್ ಜೋರ್ಡನ್ ಎಸೆದ ಈ ಸೂಪರ್ ಓವರ್​ನಲ್ಲಿ ಮುಂಬೈ 11 ರನ್​ ಕಲೆಹಾಕಿತು.12 ರನ್​ಗಳ ಟಾರ್ಗೆಟ್ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೇಲ್ ಬ್ಯಾಟ್ ಬೀಸಿದರು. ಟ್ರೆಂಟ್ ಬೌಲ್ಟ್ ಮೊದಲ ಎಸೆತದಲ್ಲೇ ಗೇಲ್ ಸಿಕ್ಸರ್ ಸಿಡಿಸಿ, ಗೆಲುವಿನ ಅಂತರವನ್ನು ಕಡಿಮೆಗೊಳಿಸಿದರು. 2ನೇ ಎಸೆತದಲ್ಲಿ ಸಿಂಗಲ್ ಬಂದರೆ, 3ನೇ ಹಾಗೂ 4ನೇ ಎಸೆತಗಳಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಮಯಾಂಕ್ ಅಗರ್ವಾಲ್ ತಂಡಕ್ಕೆ ಸೂಪರ್ ಜಯ ತಂದುಕೊಟ್ಟರು.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
    Published by:zahir
    First published: