news18-kannada Updated:November 10, 2020, 5:16 PM IST
kieron pollard
ಕೀರನ್ ಪೊಲಾರ್ಡ್...ಮುಂಬೈ ಇಂಡಿಯನ್ಸ್ ಪಾಲಿನ ಆಪತ್ಭಾಂಧವ. ತಮ್ಮ ಅದ್ಭುತ ಆಲ್ರೌಂಡರ್ ಆಟದ ಮೂಲಕ ಈಗಾಗಲೇ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಪೊಲಾರ್ಡ್ ಪ್ರಮುಖ ಪಾತ್ರವಹಿಸುವ ನಿರೀಕ್ಷಿಯಿದೆ. ಅತ್ತ ಇದೇ ಪಂದ್ಯದ ಮೂಲಕ ಹೊಸ ಸಾಧನೆ ಮಾಡುವ ಅವಕಾಶವೊಂದು ಬಲಗೈ ದಾಂಡಿಗನ ಮುಂದಿದೆ. ಇದಕ್ಕಾಗಿ ವಿಂಡೀಸ್ ಬ್ಯಾಟ್ಸ್ಮನ್ ಕೇವಲ 2 ಸಿಕ್ಸರ್ ಸಿಡಿಸಿದ್ರ ಸಾಕು.
ಹೌದು, ಕೀರನ್ ಪೊಲಾರ್ಡ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2 ಸಿಕ್ಸರ್ ಸಿಡಿಸಿದ್ರೆ ಐಪಿಎಲ್ನಲ್ಲಿ 200 ಸಿಕ್ಸರ್ ಬಾರಿಸಿದ ಸಾಧನೆ ಮಾಡಲಿದ್ದಾರೆ. ಸದ್ಯ 198 ಸಿಕ್ಸರ್ ಬಾರಿಸಿರುವ ಪೊಲಾರ್ಡ್ ಇಂದಿನ ಪಂದ್ಯದಲ್ಲಿ 2 ಭರ್ಜರಿ ಸಿಕ್ಸ್ ಸಿಡಿಸಿದರೆ ಐಪಿಎಲ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ 6ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಈಗಾಗಲೇ 5 ಬ್ಯಾಟ್ಸ್ಮನ್ಗಳು ಐಪಿಎಲ್ನಲ್ಲಿ 200 ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ್ದಾರೆ. ಅವರೆಂದರೆ...
ಕ್ರಿಸ್ ಗೇಲ್- (349 ಸಿಕ್ಸ್)
ಎಬಿ ಡಿವಿಲಿಯರ್ಸ್- (235)
ಎಂಎಸ್ ಧೋನಿ- (216),
ರೋಹಿತ್ ಶರ್ಮಾ- (209)ವಿರಾಟ್ ಕೊಹ್ಲಿ- (201)
ಇದರ ಜೊತೆಗೆ 200 ಬೌಂಡರಿ ಬಾರಿಸಿದ ಐಪಿಎಲ್ ಆಟಗಾರ ಎನಿಸಿಕೊಳ್ಳಲು 6 ಫೋರ್ಗಳ ಅವಶ್ಯಕತೆಯಿದ್ದು, ಇದನ್ನೂ ಕೂಡ ಪೊಲಾರ್ಡ್ ಫೈನಲ್ ಪಂದ್ಯದಲ್ಲಿ ಸಾಧಿಸುತ್ತಾರಾ ಕಾದು ನೋಡಬೇಕಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
Published by:
zahir
First published:
November 10, 2020, 5:16 PM IST