IPL

  • associate partner
HOME » NEWS » Ipl » IPL 2020 FINAL MI VS DC WHEN AND WHERE TO WATCH IPL 2020 FINAL LIVE MATCH TIMINGS PITCH REPORT PREDICTION RMD

IPL 2020 Final, MI vs DC: ಇಂದು ಮುಂಬೈ vs ಡೆಲ್ಲಿ ನಡುವೆ ಐಪಿಎಲ್​​ ಫೈನಲ್ ಪಂದ್ಯ​​; ಯಾವ ತಂಡ ಸ್ಟ್ರಾಂಗ್​?; ಇಲ್ಲಿದೆ ವಿವರ

IPL 2020 Final, Mumbai Indians vs Delhi Capitals Prediction: ಇನ್ನು ಡೆಲ್ಲಿ ಇದೇ ಮೊದಲ ಬಾರಿಗೆ ಫೈನಲ್​ಗೆ ಏರಿದ್ದು, ಕಪ್​ ಗೆಲ್ಲುವ ವಿಶ್ವಾಸದಲ್ಲಿದೆ. ತಂಡದಲ್ಲಿ ಹೆಚ್ಚಿನ ಬದಲಾವಣೆ ಆಗುವ ನಿರೀಕ್ಷೆ ಇಲ್ಲ.

news18-kannada
Updated:November 10, 2020, 11:20 AM IST
IPL 2020 Final, MI vs DC: ಇಂದು ಮುಂಬೈ vs ಡೆಲ್ಲಿ ನಡುವೆ ಐಪಿಎಲ್​​ ಫೈನಲ್ ಪಂದ್ಯ​​; ಯಾವ ತಂಡ ಸ್ಟ್ರಾಂಗ್​?; ಇಲ್ಲಿದೆ ವಿವರ
IPL 2020
  • Share this:
ಕಳೆದ 52 ದಿನಗಳಿಂದ ವೀಕ್ಷಕರನ್ನು ರಂಜಿಸುತ್ತಾ ಬಂದಿರುವ ಚುಟುಕು ಕ್ರಿಕೆಟ್​ ತಂಡದ ಫೈನಲ್​ ಮ್ಯಾಚ್​ ಇಂದು ನಡೆಯಲಿದೆ. ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಇಂದು ಕಾದಾಡಲಿವೆ. ಇಂದಿನ ಮ್ಯಾಚ್​ ಗೆದ್ದರೆ ಸತತ ಎರಡನೇ ಬಾರಿಗೆ ಕಪ್​ ಗೆದ್ದ ಖ್ಯಾತಿ ಮುಂಬೈ ಇಂಡಿಯನ್ಸ್​​ಗೆ ಸಿಗಲಿದೆ. ಇನ್ನು  ಡೆಲ್ಲಿ ಜಯ ಸಾಧಿಸಿದರೆ ಮೊದಲ ಬಾರಿಗೆ ಕಪ್​ ಎತ್ತಿದಂತಾಗುತ್ತದೆ.

ರೋಹಿತ್​ ಶರ್ಮಾ ಮುಂಬೈ ತಂಡವನ್ನು ಮುನ್ನಡೆಸಿದರೆ ಶ್ರೇಯಸ್​ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಇಬ್ಬರೂ ಮುಂಬೈ ಮೂಲದವರೇ ಅನ್ನೋದು ವಿಶೇಷ. ಈ ಆವೃತ್ತಿಯಲ್ಲಿ ಮುಂಬೈ ಹಾಗೂ ಡೆಲ್ಲಿ ಎರಡು ಲೀಗ್​​ ಪಂದ್ಯ ಹಾಗೂ ಕ್ವಾಲಿಫೈಯರ್​​​ನಲ್ಲಿ ಮುಖಾಮುಖಿ ಆಗಿದ್ದವು. ಈ ವೇಳೆ ಮೂರು ಪಂದ್ಯಗಳಲ್ಲಿ ಮುಂಬೈ ಗೆದ್ದು ಬೀಗಿದೆ.

ಟೂರ್ನಿ ಉದ್ದಕ್ಕೂ ಮುಂಬೈ ಸ್ಥಿರ ನಿರ್ವಹಣೆ ತೋರಿದೆ. ಹೀಗಾಗಿ, ಮೊದಲ ಕ್ವಾಲಿಫೈಯರ್​ ತಂಡವನ್ನೇ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ರೋಹಿತ್​ ಶರ್ಮಾ ಬ್ಯಾಟ್​ನಿಂದ ಅಷ್ಟಾಗಿ ರನ್​ ಬರದೇ ಇರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟ್ರೆಂಟ್​ ಬೌಲ್ಟ್​ ಗಾಯಗೊಂಡಿದ್ದರು. ಆದರೆ, ಸೋಮವಾರ ಅವರು ನೆಟ್​ನಲ್ಲಿ ಅಭ್ಯಾಸ ನಡೆಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.


ಇನ್ನು ಡೆಲ್ಲಿ ಇದೇ ಮೊದಲ ಬಾರಿಗೆ ಫೈನಲ್​ಗೆ ಏರಿದ್ದು, ಕಪ್​ ಗೆಲ್ಲುವ ವಿಶ್ವಾಸದಲ್ಲಿದೆ. ತಂಡದಲ್ಲಿ ಹೆಚ್ಚಿನ ಬದಲಾವಣೆ ಆಗುವ ನಿರೀಕ್ಷೆ ಇಲ್ಲ.

ಭಾರತೀಯ ಕಾಲಮಾನ ರಾತ್ರಿ 7.30 ಕ್ಕೆ ಪಂದ್ಯ ಆರಂಭಗೊಳ್ಳಲಿದೆ.
Published by: Rajesh Duggumane
First published: November 10, 2020, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories