ದುಬೈ (ನ. 10): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಅಮೋಘ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದೆ. ಬ್ಯಾಟ್ಸ್ಮನ್ಗಳ ಹಾಗೂ ಬೌಲರ್ಗಳ ಪ್ರಚಂಡ ಆಟದ ನೆರವಿನಿಂದ ಮುಂಬೈ 5 ವಿಕೆಟ್ಗಳ ಜಯ ಸಾಧಿಸಿ ಐಪಿಎಲ್ ಇತಿಹಾಸದಲ್ಲಿ ಐದನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡು ಸಾಧನೆ ಮಾಡಿದೆ. ಇತ್ತ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸು ತೊಟ್ಟಿದ್ದ ಡೆಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಡೆಲ್ಲಿ ನೀಡಿದ್ದ 157 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್ಗಳಾದ ಕ್ವಿಂಟನ್ ಡಿಕಾಕ್ ಹಾಗೂ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮೊದಲ 4 ಓವರ್ನಲ್ಲೇ 45 ರನ್ ಚಚ್ಚಿದರು. ಆದರೆ, 5ನೇ ಓವರ್ನಲ್ಲಿ ಕೀಪರ್ಗೆ ಕ್ಯಾಚಿತ್ತು ಡಿಕಾಕ್(20) ಔಟ್ ಆದರು.
ರೋಹಿತ್ ಜೊತೆ ಚೆನ್ನಾಗಿಯೆ ಆಡುತ್ತಿದ್ದ ಸೂರ್ಯಕುಮಾರ್(19) ರನೌಟ್ಗೆ ಬಲಿಯಾದರು. ಬಳಿಕ ಇಶಾನ್ ಕಿಶನ್ ಜೊತೆಯಾದ ರೋಹಿತ್ ನಾಯಕನ ಆಟವಾಡಿದರು, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ರೋಹಿತ್ 51 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಬಾರಿಸಿ 68 ರನ್ ಚಚ್ಚಿದರು. ಇವರಿಗೆ ಉತ್ತಮ ಸಾತ್ ನೀಡಿದ ಕಿಶನ್ 19 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸಿದರು. ಪರಿಣಾಮ ಮುಂಬೈ 18.4 ಓವರ್ನಲ್ಲೇ 5 ವಿಕೆಟ್ ನಷ್ಟಕ್ಕೆ 157 ರನ್ ಬಾರಿಸುವ ಮೂಲಕ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
A well made half-century for @ImRo45 in his 200th outing in the IPL.
He also breaches the 3000-run mark as Captain.#Dream11IPL #Final pic.twitter.com/siJMPAWEWW
— IndianPremierLeague (@IPL) November 10, 2020
ಈ ಸಂದರ್ಭ ಒಂದಾದ ರಿಷಭ್ ಪಂತ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ತಂಡದ ರನ್ ಗತಿಯನ್ನು ನಿಧಾನವಾಗಿ ಏರಿಸಲು ಶ್ರಮಪಟ್ಟ ಈ ಜೋಡಿ ಸೆಟ್ ಆದ ನಂತರ ಆರ್ಭಟಿಸಲು ಶುರುಮಾಡಿದರು. ಅದರಂತೆ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, ಬಳಿಕ ಹೆಚ್ಚುಹೊತ್ತು ನಿಲ್ಲದ ಪಂತ್ 38 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಬಾರಿಸಿ 56 ರನ್ಗೆ ಹೊರನಡೆದರು. ಈ ಜೋಡಿ ಬರೋಬ್ಬರಿ 96 ರನ್ಗಳ ಜೊತೆಯಾಟ ಆಡಿತು.
WATCH - Pant launches Krunal for 2 sixes
One straight down the ground and the other hit over mid-wicket. A couple of @RishabhPant17 classics for maximums.
📹📹https://t.co/RfzOCOFPHV #Final #Dream11IPL
— IndianPremierLeague (@IPL) November 10, 2020
ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತರೆ, ನಥನ್ ಕಲ್ಟರ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ