ದುಬೈ (ನ. 10): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಮೊತ್ತ ಕಲೆಹಾಕಿದೆ. ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಡೆಲ್ಲಿ 20 ಓವರ್ಗಳಲ್ಲಿ 156 ರನ್ ಬಾರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್ನ ಮೊದಲ ಎಸೆತದಲ್ಲೇ ಟ್ರೆಂಟ್ ಬೌಲ್ಡ್ ಬೌಲಿಂಗ್ನಲ್ಲಿ ಮಾರ್ಕಸ್ ಸ್ಟಾಯಿನಿಸ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸದರು. ಬೌಲ್ಟ್ 2ನೇ ಓವರ್ನಲ್ಲಿ ಅಜಿಂಕ್ಯಾ ರಹಾನೆ(2) ಬ್ಯಾಟ್ ಕೆಳಗಿಟ್ಟರು. ಜಯಂತ್ ಯಾದವ್ ಸ್ಪಿನ್ ಮೋಡಿಗೆ ಶಿಖರ್ ಧವನ್(15) ಬೌಲ್ಡ್ ಆದರು.
ಈ ಸಂದರ್ಭ ಒಂದಾದ ರಿಷಭ್ ಪಂತ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ತಂಡದ ರನ್ ಗತಿಯನ್ನು ನಿಧಾನವಾಗಿ ಏರಿಸಲು ಶ್ರಮಪಟ್ಟ ಈ ಜೋಡಿ ಸೆಟ್ ಆದ ನಂತರ ಆರ್ಭಟಿಸಲು ಶುರುಮಾಡಿದರು. ಅದರಂತೆ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, ಬಳಿಕ ಹೆಚ್ಚುಹೊತ್ತು ನಿಲ್ಲದ ಪಂತ್ 38 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಬಾರಿಸಿ 56 ರನ್ಗೆ ಹೊರನಡೆದರು. ಈ ಜೋಡಿ ಬರೋಬ್ಬರಿ 96 ರನ್ಗಳ ಜೊತೆಯಾಟ ಆಡಿತು.
ಶಿಮ್ರೋನ್ ಹೆಟ್ಮೇರ್ ಕೇವಲ 5 ರನ್ಗೆ ಔಟ್ ಆದರು. ಈ ನಡುವೆ ಅಯ್ಯರ್ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಮುಂಬೈ ಬೌಲರ್ಗಳ ಅತ್ಯುತ್ತಮ ಪ್ರದರ್ಶನದ ನಡುವೆಯೂ ಅಯ್ಯರ್ ರನ್ ಏರಿಸಲು ಹೋರಾಟ ನಡೆಸಿದರು. ಅಯ್ಯರ್ 50 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 65 ರನ್ ಬಾರಿಸಿದರು.
ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತರೆ, ನಥನ್ ಕಲ್ಟರ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದರು.
ಇಂದಿನ ಪಂದ್ಯಕ್ಕೆ ಮುಂಬೈ ತಂಡದಲ್ಲಿ ಟ್ರೆಂಟ್ ಬೌಲ್ಟ್ ಹಾಗೂ ಜಯಂತ್ ಯಾದವ್ ಕಣಕ್ಕಿಳಿದಿದ್ದಾರೆ. ಇತ್ತ ಡೆಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಆಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಪ್ರವೀಣ್ ದುಬೆ, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.
ಮುಂಬೈ ಇಂಡಿಯನ್ಸ್: ಕ್ವಿಂಟನ್
ಡಿ ಕಾಕ್ (
ವಿ.
ಕೀ),
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್
ಯಾದವ್
, ಕೀರನ್
ಪೊಲಾರ್ಡ್,
ಕ್ರುನಾಲ್
ಪಾಂಡ್ಯ,
ಹಾರ್ದಿಕ್ ಪಾಂಡ್ಯ, ನಥನ್ ಕಲ್ಟರ್ ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
ಮುಂಬೈ ತಂಡ ಶ್ರೇಯಸ್ ಪಡೆಯನ್ನು ಎರಡು ಬಾರಿ ಲೀಗ್ ಹಂತದಲ್ಲಿ ಮತ್ತು ಒಮ್ಮೆ ಪ್ಲೇ ಆಫ್ಸ್ನಲ್ಲಿ ಸೋಲಿಸಿ ಮುನ್ನಡೆ ಸಾಧಿಸಿದ್ದು, ಫೈನಲ್ನಲ್ಲಿ ಹಾಟ್ ಫೇವರಿಟ್ ಆಗಿ ಅಖಾಡಕ್ಕೆ ಇಳಿಯುತ್ತಿದೆ. ಆದರೆ, 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ಡೆಲ್ಲಿ ತಂಡವನ್ನು ಕಡೆಗಣಿಸುವಂತಿಲ್ಲ.
ಶಿಖರ್ ಧವನ್ ಫಾರ್ಮ್ಗೆ ಮರಳಿರುವುದು ಒಂದುಕಡೆಯಾದರೆ ಇವರ ಜೊತೆ ಓಪನರ್ ಆಗಿ ಯಶಸ್ಸು ಕಂಡ ಮಾರ್ಕಸ್ ಸ್ಟಾಯಿನಿಸ್ ಮೇಲೆ ಬೆಟ್ಟದಂತಹ ನಿರೀಕ್ಷೆಯಿದೆ. ನಾಯಕ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್ ಯಾವುದೇ ಸಂದರ್ಭದಲ್ಲಿ ಸಿಡಿಯುವ ಸಾಮರ್ಥ್ಯ ಹೊಂದಿದ್ದಾರೆ.
ಕಗಿಸೊ ರಬಾಡ ಮಾರಕ ದಾಳಿಗೆ ಎದುರಾಳಿಗರು ನಡುಗುವುದು ಖಚಿತ. ಆರ್. ಅಶ್ವಿನ್ ಸ್ಪಿನ್ ಮೋಡಿ ಕೂಡ ವರ್ಕ್ ಆಗುತ್ತಿದೆ. 13 ವರ್ಷಗಳ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಗೇರಿದ ಸಾಧನೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಇತಿಹಾಸ ಸೃಷ್ಟಿಸುತ್ತ ನೋಡಬೇಕಿದೆ.
ಇತ್ತ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಪ್ರಚಂಡ ಫಾರ್ಮ್ನಲ್ಲಿರುವ ಮುಂಬೈ ಇಂಡಿಯನ್ಸ್ಗೆ ಅನುಭವಿ ಆಟಗಾರರೇ ಆಸ್ತಿ. ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸುವಲ್ಲಿ ಎಡವುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಆಟಗಾರರ ದಂಡೇ ಇದೆ. ಡಿಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಪಾಂಡ್ಯ ಬ್ರದರ್ಸ್, ಕೀರೊನ್ ಪೊಲಾರ್ಡ್ ಎಲ್ಲರೂ ಇನ್ ಫಾರ್ಮ್ ಬ್ಯಾಟ್ಸ್ಮನ್ಗಳು.
ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 15 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.