IPL 2020 Final, MI vs DC: ಅಯ್ಯರ್-ಪಂತ್ ಭರ್ಜರಿ ಜೊತೆಯಾಟ: ಮುಂಬೈಗೆ 157 ರನ್ಸ್ ಟಾರ್ಗೆಟ್
IPL 2020 Final, Mumbai Indians vs Delhi Capitals Live Score: ಈ ಸಂದರ್ಭ ಒಂದಾದ ರಿಷಭ್ ಪಂತ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ತಂಡದ ರನ್ ಗತಿಯನ್ನು ನಿಧಾನವಾಗಿ ಏರಿಸಲು ಶ್ರಮಪಟ್ಟ ಈ ಜೋಡಿ ಸೆಟ್ ಆದ ನಂತರ ಆರ್ಭಟಿಸಲು ಶುರುಮಾಡಿದರು.
news18-kannada Updated:November 10, 2020, 9:15 PM IST

MI vs DC Live Score Updates
- News18 Kannada
- Last Updated: November 10, 2020, 9:15 PM IST
ದುಬೈ (ನ. 10): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಮೊತ್ತ ಕಲೆಹಾಕಿದೆ. ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಡೆಲ್ಲಿ 20 ಓವರ್ಗಳಲ್ಲಿ 156 ರನ್ ಬಾರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್ನ ಮೊದಲ ಎಸೆತದಲ್ಲೇ ಟ್ರೆಂಟ್ ಬೌಲ್ಡ್ ಬೌಲಿಂಗ್ನಲ್ಲಿ ಮಾರ್ಕಸ್ ಸ್ಟಾಯಿನಿಸ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸದರು. ಬೌಲ್ಟ್ 2ನೇ ಓವರ್ನಲ್ಲಿ ಅಜಿಂಕ್ಯಾ ರಹಾನೆ(2) ಬ್ಯಾಟ್ ಕೆಳಗಿಟ್ಟರು. ಜಯಂತ್ ಯಾದವ್ ಸ್ಪಿನ್ ಮೋಡಿಗೆ ಶಿಖರ್ ಧವನ್(15) ಬೌಲ್ಡ್ ಆದರು. ಈ ಸಂದರ್ಭ ಒಂದಾದ ರಿಷಭ್ ಪಂತ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ತಂಡದ ರನ್ ಗತಿಯನ್ನು ನಿಧಾನವಾಗಿ ಏರಿಸಲು ಶ್ರಮಪಟ್ಟ ಈ ಜೋಡಿ ಸೆಟ್ ಆದ ನಂತರ ಆರ್ಭಟಿಸಲು ಶುರುಮಾಡಿದರು. ಅದರಂತೆ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, ಬಳಿಕ ಹೆಚ್ಚುಹೊತ್ತು ನಿಲ್ಲದ ಪಂತ್ 38 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಬಾರಿಸಿ 56 ರನ್ಗೆ ಹೊರನಡೆದರು. ಈ ಜೋಡಿ ಬರೋಬ್ಬರಿ 96 ರನ್ಗಳ ಜೊತೆಯಾಟ ಆಡಿತು.
ಶಿಮ್ರೋನ್ ಹೆಟ್ಮೇರ್ ಕೇವಲ 5 ರನ್ಗೆ ಔಟ್ ಆದರು. ಈ ನಡುವೆ ಅಯ್ಯರ್ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಮುಂಬೈ ಬೌಲರ್ಗಳ ಅತ್ಯುತ್ತಮ ಪ್ರದರ್ಶನದ ನಡುವೆಯೂ ಅಯ್ಯರ್ ರನ್ ಏರಿಸಲು ಹೋರಾಟ ನಡೆಸಿದರು. ಅಯ್ಯರ್ 50 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 65 ರನ್ ಬಾರಿಸಿದರು.
ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತರೆ, ನಥನ್ ಕಲ್ಟರ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಪ್ರವೀಣ್ ದುಬೆ, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ನಥನ್ ಕಲ್ಟರ್ ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್ನ ಮೊದಲ ಎಸೆತದಲ್ಲೇ ಟ್ರೆಂಟ್ ಬೌಲ್ಡ್ ಬೌಲಿಂಗ್ನಲ್ಲಿ ಮಾರ್ಕಸ್ ಸ್ಟಾಯಿನಿಸ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸದರು. ಬೌಲ್ಟ್ 2ನೇ ಓವರ್ನಲ್ಲಿ ಅಜಿಂಕ್ಯಾ ರಹಾನೆ(2) ಬ್ಯಾಟ್ ಕೆಳಗಿಟ್ಟರು. ಜಯಂತ್ ಯಾದವ್ ಸ್ಪಿನ್ ಮೋಡಿಗೆ ಶಿಖರ್ ಧವನ್(15) ಬೌಲ್ಡ್ ಆದರು.
WATCH - Pant launches Krunal for 2 sixes
— IndianPremierLeague (@IPL) November 10, 2020
One straight down the ground and the other hit over mid-wicket. A couple of @RishabhPant17 classics for maximums.
📹📹https://t.co/RfzOCOFPHV #Final #Dream11IPL