IPL 2020: ಮೇಜರ್ ಸರ್ಜರಿಗೆ CSK ಚಿಂತನೆ : 7 ಆಟಗಾರರು ತಂಡದಿಂದ ಔಟ್, ಧೋನಿಗೆ ಹೊಸ ಜವಾಬ್ದಾರಿ..!

MS Dhoni: 2018 ರಲ್ಲಿ ಹಲವು ಹಿರಿಯ ಆಟಗಾರರು ಸಿಎಸ್​ಕೆ ಜೊತೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಅದು ಈ ಸೀಸನ್​ನೊಂದಿಗೆ ಮುಕ್ತಾಯವಾಗಲಿದೆ.  ಅವರನ್ನು ಮತ್ತೆ ತಂಡದಲ್ಲಿ ಉಳಿಸಿಕೊಳ್ಳುವುದು ಡೌಟ್. ಈ ಪಟ್ಟಿಯಲ್ಲಿರುವ ಆಟಗಾರರು ಯಾರೆಂದರೆ...

Dhoni

Dhoni

 • Share this:
  3 ಬಾರಿಯ ಚಾಂಪಿಯನ್, 5 ಬಾರಿ ಫೈನಲಿಸ್ಟ್, 10 ಸಲ ಪ್ಲೇ ಆಫ್ ಹಂತಕ್ಕೇರಿದ ತಂಡ..ಎಸ್, ಐಪಿಎಲ್ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಿಂದೆಂದೂ ತೋರದ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ರಲ್ಲಿ ಜಯಿಸಿ ಅಂಕ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿದೆ. ಉಳಿದಿರುವ 4 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ದೊರೆಯಬಹುದು. ಆದರೆ ಪ್ರಸ್ತುತ ತಂಡ ಪ್ರದರ್ಶನ ಗಮನಿಸಿದ್ರೆ ಅದು ಕನಸಿನ ಮಾತು ಎಂದೇ ಹೇಳಬಹುದು.

  ಆಟಗಾರರ ಕಳಪೆ ಪ್ರದರ್ಶನ ಮತ್ತು ಸತತ ಸೋಲುಗಳಿಂದ ಇತ್ತ ಸಿಎಸ್​ಕೆ ಟೀಮ್ ಮ್ಯಾನೇಜ್ಮೆಂಟ್ ಕೂಡ ಅಸಮಾಧಾನಗೊಂಡಿದೆ. ಹೀಗಾಗಿಯೇ ಈಗಲೇ ಹೊಸ ತಂಡವೊಂದನ್ನು ರೂಪಿಸಲು ಭರ್ಜರಿ ಪ್ಲ್ಯಾನ್ ಸಿದ್ಧ ಮಾಡಿಕೊಳ್ಳುತ್ತಿದೆ. ಹೌದು, 12 ವರ್ಷಗಳ ಹಿಂದೆ ಅಂದರೆ 2007 ರಲ್ಲಿ ಟಿ20 ವಿಶ್ವಕಪ್ ಗೆದ್ದ ನಾಯಕ ಧೋನಿ ಹಾಗೂ ಯುವ ಪಡೆಯೊಂದಿಗೆ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಿದ್ದ ಸಿಎಸ್​ಕೆ ಫ್ರಾಂಚೈಸಿ ಮತ್ತೊಮ್ಮೆ ಅಂತಹದ್ದೇ ಯುವ ಪಡೆಯನ್ನು ರೂಪಿಸಲು ಚಿಂತಿಸಿದೆ ಎಂದು ವರದಿಯಾಗಿದೆ.

  ಏಕೆಂದರೆ ಪ್ರಸ್ತುತ ತಂಡದಲ್ಲಿರುವ ಹಿರಿಯ ಆಟಗಾರರಿಂದ ಯಾವುದೇ ರೀತಿಯ ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. ಅನುಭವಿಗಳೆಂದೂ ತಂಡದಲ್ಲಿ ಸ್ಥಾನ ನೀಡಲಾಗಿದ್ದರೂ ಎದುರಾಳಿ ತಂಡದ ಯುವ ಆಟಗಾರರ ಮುಂದೆ ಗಟ್ಟಿಯಾಗಿ ನೆಲೆಯೂರುವಲ್ಲಿ ವಿಫಲರಾಗಿದ್ದಾರೆ. ಮೂರು ವರ್ಷಗಳ ಹಿಂದೆಯೇ ಸಿಎಸ್​ಕೆ ತಂಡದಲ್ಲಿ ಹಿರಿಯ ಆಟಗಾರರು ತುಂಬಿ ತುಳುಕುತ್ತಿತ್ತು. ಇದೇ ಕಾರಣದಿಂದ ತಂಡಕ್ಕೆ ಡ್ಯಾಡೀಸ್ ಆರ್ಮಿ ಎಂಬ ಹೆಸರು ಲಭಿಸಿತ್ತು. ಇದಾಗ್ಯೂ ಭರ್ಜರಿ ಪ್ರದರ್ಶನ ನೀಡಿದ ಧೋನಿ ಪಡೆ 2018 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಹಾಗೆಯೇ 2019 ರಲ್ಲಿ ಫೈನಲ್​ಗೇರಿತು. ಇದೇ ವಿಶ್ವಾಸದಲ್ಲಿ ಈ ಬಾರಿ ಕೂಡ ಹಿರಿಯ ಆಟಗಾರರನ್ನೇ ಸಿಎಸ್​ಕೆ ಉಳಿಸಿಕೊಂಡಿತ್ತು. ಆದರೆ ಫ್ರಾಂಚೈಸಿಯ ಈ ಲೆಕ್ಕಚಾರಗಳು ತಲೆಕೆಳಗಾಗಿದೆ.

  ಸಿಎಸ್​ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ತಂಡದ ಆಟಗಾರರಲ್ಲಿ ಗೆಲ್ಲುವ ಸತ್ವ ಮುಗಿದಿದೆ. ಅಂಕಪಟ್ಟಿಯಲ್ಲಿ ನಮ್ಮ ಸ್ಥಾನ ನ್ಯಾಯೋಚಿತವಾಗಿದೆ. ಹಿರಿಯರನ್ನೇ ಒಳಗೊಂಡ ತಂಡದೊಂದಿಗೆ ಪ್ರತಿ ವರ್ಷ ಅದ್ಭುತ ಫಲಿತಾಂಶವನ್ನು ನೀಡಲಾಗುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಅಲ್ಲದೆ ಈ ಬಗ್ಗೆ ನಾನು ಸಿಎಸ್​ಕೆ ಮ್ಯಾನೇಜ್ಮೆಂಟ್ ಈ ಹಿಂದೆಯೇ ತಿಳಿಸಿದ್ದೆ ಎಂದಿದ್ದರು.

  ಹೀಗಾಗಿ ಈಗಲೇ ತಂಡದಲ್ಲಿ ಮಾಡಬೇಕಾದ ಮೇಜರ್ ಸರ್ಜರಿ ಬಗ್ಗೆ ಸಿಎಸ್​ಕೆ ಮ್ಯಾನೇಜ್ಮೆಂಟ್ ರೂಪು ರೇಷೆಗಳನ್ನು ಸಿದ್ಧಪಡಿಸುತ್ತಿದೆ. ಅದರಂತೆ 2021ರ ಐಪಿಎಲ್​ನಲ್ಲಿ 35 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರನ್ನು ಕೈಬಿಡಲು ಮುಂದಾಗಿದೆ. ಹಾಗೆಯೇ ಒಂದಷ್ಟು ಯುವ ಆಟಗಾರರಿಗೆ ಚಾನ್ಸ್ ನೀಡಿ ಮುಂದಿನ ಸೀಸನ್​ಗಳಲ್ಲಿ ಬಲಿಷ್ಠ ತಂಡವೊಂದನ್ನು ರೂಪಿಸಲು ಪ್ಲ್ಯಾನ್ ಮಾಡಿಕೊಂಡಿದೆ.

  2018 ರಲ್ಲಿ ಹಲವು ಹಿರಿಯ ಆಟಗಾರರು ಸಿಎಸ್​ಕೆ ಜೊತೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಅದು ಈ ಸೀಸನ್​ನೊಂದಿಗೆ ಮುಕ್ತಾಯವಾಗಲಿದೆ.  ಅವರನ್ನು ಮತ್ತೆ ತಂಡದಲ್ಲಿ ಉಳಿಸಿಕೊಳ್ಳುವುದು ಡೌಟ್. ಈ ಪಟ್ಟಿಯಲ್ಲಿರುವ ಆಟಗಾರರು ಯಾರೆಂದರೆ...

  ಹರ್ಭಜನ್ ಮತ್ತು ರೈನಾ ಈಗಾಗಲೇ ಸಿಎಸ್​ಕೆ ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೆ ಅವರೊಂದಿಗಿನ ಒಪ್ಪಂದವನ್ನು ಅಂತ್ಯಗೊಳಿಸಲಾಗಿದೆ. ಹೀಗಾಗಿ ಈ ಇಬ್ಬರು ಆಟಗಾರರು ಮುಂದಿನ ಸೀಸನ್​ನಲ್ಲಿ ಚೆನ್ನೈ ಪರ ಆಡುವುದಿಲ್ಲ ಎಂದೇ ಹೇಳಬಹುದು.

  ಇನ್ನು ಶೇನ್ ವಾಟ್ಸನ್, ಕೇದಾರ್ ಜಾಧವ್, ಪಿಯೂಷ್ ಚಾವ್ಲಾ ತಂಡದಿಂದ ಕೈ ಬಿಡುವುದು ಬಹುತೇಕ ಖಚಿತವಾಗಿದೆ. ಹಾಗೆಯೇ 42 ವರ್ಷದ ಇಮ್ರಾನ್ ತಾಹಿರ್ ಅವರ ಸಿಎಸ್​ಕೆ ಜೊತೆಗಿನ ಐಪಿಎಲ್ ಕೆರಿಯರ್​ ಕೂಡ ಅಂತ್ಯವಾಗಲಿದೆ. ಇನ್ನು ಅಂಬಾಟಿ ರಾಯುಡು,  ಡ್ವೇನ್ ಬ್ರಾವೊ ಹಾಗೂ ಫಾಫ್ ಡು ಪ್ಲೆಸಿಸ್ ಅವರನ್ನು ವಯಸ್ಸಿನ ಕಾರಣದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ.

  ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ವಿಫಲರಾಗಿರುವ 39 ವರ್ಷದ ಸಿಎಸ್​ಕೆ ನಾಯಕ ಧೋನಿ ಮುಂದಿನ ಬಾರಿ ಆಡಲಿದ್ದಾರೆ ಎಂಬುದು ಅನುಮಾನ. ಆಡುವ ಬಳಗದಿಂದ ದೂರ ಉಳಿದು, 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮೆಂಟರ್ ಆಗಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಕೂಡ ಹುಟ್ಟಿಕೊಂಡಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಧೋನಿ ಹೊಸ ಜವಾಬ್ದಾರಿಯೊಂದಿಗೆ ಸಿಎಸ್​ಕೆ ಪಾಳಯದಲ್ಣಿ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಡ್ಯಾಡೀಸ್ ಆರ್ಮಿ ಎಂಬ ಪಟ್ಟದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸಿಎಸ್​ಕೆ ತಂಡ ಮೇಜರ್ ಸರ್ಜರಿಯೊಂದಿಗೆ ಯುವ ಪಡೆಯೊಂದಿಗೆ ಮುಂದಿನ ಬಾರಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
  Published by:zahir
  First published: