IPL

  • associate partner
HOME » NEWS » Ipl » IPL 2020 ELIMINATOR SRH VS RCB PREVIEW ITS A SHOWDOWN BETWEEN 2016 FINALISTS VIRAT KOHLI VS DAVID WARNER VB

IPL 2020 Eliminator, SRH vs RCB: ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟ ಆರ್​ಸಿಬಿ: ಎಸ್​ಆರ್​ಹೆಚ್​ಗೆ ಸೋಲಿಣಿಸಲು ಕೊಹ್ಲಿ ಮಾಸ್ಟರ್ ಪ್ಲ್ಯಾನ್!

ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ ಕೂಡ ತಮ್ಮ ಘನತೆಗೆ ತಕ್ಕಂತೆ ಆಡುತ್ತಿಲ್ಲ. ಇನ್ನೂ ಎಬಿಡಿ ನಿರ್ಗಮನದ ಬಳಿಕ ತಂಡದಲ್ಲಿ ದೊಡ್ಡ ರನ್ ಕಲೆಹಾಕುವ ಸಾಮರ್ಥ್ಯ ಯಾರಲ್ಲೂ ಇಲ್ಲ.

news18-kannada
Updated:November 6, 2020, 1:50 PM IST
IPL 2020 Eliminator, SRH vs RCB: ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟ ಆರ್​ಸಿಬಿ: ಎಸ್​ಆರ್​ಹೆಚ್​ಗೆ ಸೋಲಿಣಿಸಲು ಕೊಹ್ಲಿ ಮಾಸ್ಟರ್ ಪ್ಲ್ಯಾನ್!
SRH vs RCB
  • Share this:
ಅಬುಧಾಬಿ (ನ. 06): ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಇಲ್ಲಿನ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಅಗ್ನಿಪರೀಕ್ಷೆ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೆಣೆಸಾಡಲಿದೆ. ಸೋತ ತಂಡ ಸಂಪೂರ್ಣ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೆ ಇದು ಡು ಆರ್ ಡೈ ಆಗಿದ್ದು, ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆಯಿದೆ.

ಸತತ 4 ಪಂದ್ಯ ಸೋತರೂ ರನ್​ರೇಟ್ ಆಧಾರದ ಮೇಲೆ 3 ವರ್ಷಗಳ ಬಳಿಕ ಪ್ಲೇ - ಆಫ್​ ತಲುಪಿರುವ ಆರ್​ಸಿಬಿ ತಂಡಕ್ಕೆ ಹೈದರಾಬಾದ್ ನಿಜಕ್ಕೂ ಕಠಿಣ ಸವಾಲೊಡ್ಡಲಿದೆ. ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುವ ಮೂಲಕವೇ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದವು. ಅದರಲ್ಲಿ ಆರ್​ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ಅಂತಿಮ ಹಂತದಲ್ಲಿ ಆರ್​ಸಿಬಿ ಸತತ ಸೋಲುಂಡರೆ, ಹೈದರಾಬಾದ್ ಗೆಲುವು ನಾಗಾಲೋಟ ಕಂಡಿತು.

IPL 2020: ಕೊನೆಯ ಬಾರಿ RCB ಪ್ಲೇ ಆಫ್ ಪ್ರವೇಶಿಸಿದ್ದು ಯಾವಾಗ?: ಆ ಪಂದ್ಯ ಏನಾಗಿತ್ತು?: ಇಲ್ಲಿದೆ ಮಾಹಿತಿ




ಆರ್​ಸಿಬಿಗೆ ಉತ್ತಮ ಆರಂಭ ಒದಗಿಸುವಲ್ಲಿ ಓಪನರ್​ಗಳು ಸಹಾಯ ಮಾಡುತ್ತಿಲ್ಲ. ದೇವದತ್ ಪಡಿಕ್ಕಲ್ ಉತ್ತಮ ಲಯದಲ್ಲಿದ್ದರೆ, ಜೋಶ್ ಫಿಲಿಪ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ ಕೂಡ ತಮ್ಮ ಘನತೆಗೆ ತಕ್ಕಂತೆ ಆಡುತ್ತಿಲ್ಲ. ಇನ್ನೂ ಎಬಿಡಿ ನಿರ್ಗಮನದ ಬಳಿಕ ತಂಡದಲ್ಲಿ ದೊಡ್ಡ ರನ್ ಕಲೆಹಾಕುವ ಸಾಮರ್ಥ್ಯ ಯಾರಲ್ಲೂ ಇಲ್ಲ. ಕ್ರಿಸ್ ಮೊರೀಸ್ ಬ್ಯಾಟಿಂಗ್- ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದಾರೆ.

IPL 2020: ಹಳೆಯ ಸೋಲಿನ ನೋವು: ಸೇಡು ತೀರಿಸುವ ತವಕದಲ್ಲಿ ಕೊಹ್ಲಿ ಪಡೆ..!

ಮೊಹಮ್ಮದ್ ಸಿರಾಜ್, ಇಸುರು ಉದಾನ ಪಂದ್ಯದಿಂದ ಪಂದ್ಯಕ್ಕೆ ದುಬಾರಿಯಾಗುತ್ತಿದ್ದಾರೆ. ನವ್​ದೀಪ್ ಸೈನಿ ಕೂಡ ಇಂಜುರಿಯಿಂದ ಇನ್ನೂ ಸರಿಯಾಗಿ ಕಮ್​ಬ್ಯಾಕ್ ಮಾಡಿಲ್ಲ. ಯಜುವೇಂದ್ರ ಚಹಾಲ್ ಹಾಗೂ ವಾಷಿಂಗ್ಟನ್ ಸುಂದರ್ ಮಾತ್ರ ಪಂದ್ಯವನ್ನು ಕಂಟ್ರೋಲ್ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.

ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿರುವುದರಿಂದ ಕೊಹ್ಲಿ ಮಾಸ್ಟರ್ ಪ್ಲ್ಯಾನ್ ಮಾಡಲಿದ್ದಾರೆ. ತಂಡದ ಬ್ಯಾಟಿಂಗ್ ಆರ್ಡರ್​ನಲ್ಲಿ ಬದಲಾವಣೆ ಆಗುವ ಅಂದಾಜಿದೆ. ಓಪನರ್ ಆಗಿ ಸ್ವತಃ ಕೊಹ್ಲಿಯೇ ಕಣಕ್ಕಿಳಿಯಬಹುದು. ಫಿಲಿಪ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಹೊರಬಹುದು.

ಇತ್ತ ಹೈದರಾಬಾದ್​ಗೆ ಓಪನರ್​ಗಳೇ ಇಡೀ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಕಳೆದ ಪಂದ್ಯದಲ್ಲೇ ಸಾಭೀತಾಗಿತ್ತು. ಆರ್​ಸಿಬಿ ಗೆಲ್ಲಬೇಕಾದರೆ ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹ ವಿಕೆಟ್ ಬೇಗನೆ ಮುಖ್ಯವಾಗಿ ಕೀಳಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ, ಪ್ರಿಯಂ ಗರ್ಗ್ ಹಾಗೂ ಜೇಸನ್ ಹೋಲ್ಡರ್ ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಶಕ್ತಿ ಹೊಂದಿದ್ದಾರೆ.

ಬೌಲಿಂಗ್​ನಲ್ಲೂ ಹೈದರಾಬಾದ್ ಶಕ್ತಿಯುತವಾಗಿದೆ. ಸಂದೀಪ್ ಶರ್ಮಾ ಪವರ್ ಪ್ಲೇನಲ್ಲಿ ವಿಕೆಟ್ ಟೇಕರ್ ಆಗಿ ಗುರುತಿಸಿಕೊಂಡಿದ್ದಾರೆ. ಇವರ ಜೊತೆಗೆ ನಟರಾಜನ್, ರಶೀದ್ ಖಾನ್ ಹಾಗೂ ಜೇಸನ್ ಹೋಲ್ಡರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

SRH vs RCB: ಇಂದು ವಾರ್ನರ್​ ಬಳಗ ಎದುರಿಸಲಿದೆ ಕೊಹ್ಲಿ ಪಡೆ; ಆರ್​ಸಿಬಿ ತಂಡದಲ್ಲಿ ಎರಡು ಮಹತ್ವದ ಬದಲಾವಣೆ

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 16 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು 7 ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
Published by: Vinay Bhat
First published: November 6, 2020, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories