• Home
 • »
 • News
 • »
 • ipl
 • »
 • IPL 2020, RCB: ಕಣ್ಣಲ್ಲಿ ನೀರು ತರಿಸುತ್ತೆ ಆರ್​ಸಿಬಿ ಹಂಚಿಕೊಂಡ ಈ ಕೊನೆಯ ವಿಡಿಯೋ..!

IPL 2020, RCB: ಕಣ್ಣಲ್ಲಿ ನೀರು ತರಿಸುತ್ತೆ ಆರ್​ಸಿಬಿ ಹಂಚಿಕೊಂಡ ಈ ಕೊನೆಯ ವಿಡಿಯೋ..!

RCB

RCB

Royal Challengers Bangalore: ಯುಎಇಯಿಂದ ತಾಯ್ನಾಡಿಗೆ ತೆರಳುವ ಮುನ್ನ ಇಡೀ ಆರ್​ಸಿಬಿ ತಂಡ ಡ್ರೆಸ್ಸಿಂಗ್ ರೂಮ್​ನಲ್ಲಿ ಸಮಾಲೋಚನೆ ನಡೆಸಿ ಒಬ್ಬರಿಗೊಬ್ಬರು ತಬ್ಬಿಕೊಂಡು ಬೀಳ್ಕೊಟ್ಟರು.

 • Share this:

  ಈ ಸಲವಾದರೂ ಆರ್​ಸಿಬಿ ಕಪ್ ಗೆಲ್ಲಲಿ ಎಂಬ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಪ್ಲೇ ಆಫ್ ಹಂತಕ್ಕೆ ಲಗ್ಗೆಯಿಟ್ಟರೂ ಎಲಿಮಿನೀಟರ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ 13ನೇ ಆವೃತ್ತಿಯ ಐಪಿಎಲ್​ನಿಂದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇಷ್ಟಾದರೂ ಅಭಿಮಾನಿಗಳ ಅಭಿಮಾನ ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಲ ಕಪ್ ನಮ್ದೆ ಘೋಷವಾಕ್ಯ ಟ್ರೆಂಡ್ ಆಗಿದೆ. ಈ ಮೂಲಕ ಆರ್​ಸಿಬಿಗೆ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಶಕ್ತಿ ಇಲ್ಲದಿದ್ದರೂ ಅಭಿಮಾನಿಗಳ ಶಕ್ತಿ ಎಂದೆಂದಿಗೂ ಇದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.


  ಆರ್​ಸಿಬಿ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೆ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಕ್ರಿಕೆಟಿಗರು ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಇತ್ತ ಆರ್​ಸಿಬಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಟೂರ್ನಿಯ ಕೆಲ ಅದ್ಭುತ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದು ಕಣ್ಣಲ್ಲಿ ನೀರು ತರಿಸುವಂತಿದೆ.


  ಯುಎಇಯಿಂದ ತಾಯ್ನಾಡಿಗೆ ತೆರಳುವ ಮುನ್ನ ಇಡೀ ಆರ್​ಸಿಬಿ ತಂಡ ಡ್ರೆಸ್ಸಿಂಗ್ ರೂಮ್​ನಲ್ಲಿ ಸಮಾಲೋಚನೆ ನಡೆಸಿ ಒಬ್ಬರಿಗೊಬ್ಬರು ತಬ್ಬಿಕೊಂಡು ಬೀಳ್ಕೊಟ್ಟರು.


  Devdutt Padikkal: ದೇವದತ್​ ಪಡಿಕ್ಕಲ್​ ಆ ಒಂದು ಕ್ಯಾಚ್​ ಹಿಡಿದಿದ್ದರೆ ಪಂದ್ಯದ ಗತಿಯೇ ಬದಲಾಗುತ್ತಿತ್ತು….  ವಿರಾಟ್ ಕೊಹ್ಲಿ ಕೂಡ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ. 'ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಮ್ಮ ಪಾಲಿಗೆ ಏರಿಳಿತಗಳಾಗಿವೆ. ಒಂದು ತಂಡವಾಗಿ ಇದು ನಮಗೆ ಅದ್ಭುತ ಜರ್ನಿ. ಹೌದು, ನಾವು ಅಂದುಕೊಂಡಂತೆ ಆಗಲಿಲ್ಲ. ಆದರೆ, ಇಡೀ ತಂಡದ ಬಗ್ಗೆ ಹೆಮ್ಮೆ ಇದೆ. ನಮಗೆ ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ನಮ್ಮನ್ನು ಮತ್ತಷ್ಟು ಬಲಪಡಿಸುತ್ತದೆ. ಆದಷ್ಟು ಬೇಗ ನಿಮ್ಮೆಲ್ಲರನ್ನೂ ನೋಡುತ್ತೇನೆ' ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.  ಇನ್ನೂ ಇಂಗ್ಲೆಂಡ್ ಮಹಿಳಾ ತಂಡದ‌ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಕೂಡ ಆರ್‌ಸಿಬಿಯ ದೊಡ್ಡ ಅಭಿಮಾನಿಯಾಗಿದ್ದು ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ನಾವು ಮತ್ತೊಂದು ಗೇಮ್ ಅನ್ನು ನರಕ ಮಾಡಿಕೊಂಡು ಟೂರ್ನಿಯಿಂದ ಹೊರ ಬಿದ್ದಿದ್ದೇವೆ. ಮುಂದೆ ಎಂದಾದರು ನಾವು ಕಪ್ ಗೆಲ್ಲುತ್ತೇವಾ?' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.


  SRH vs RCB: ಹೈದರಾಬಾದ್-ಆರ್​ಸಿಬಿ ನಡುವಣ ಪಂದ್ಯದ ಕೆಲವು ರೋಚಕ ಕ್ಷಣಗಳು ಇಲ್ಲಿವೆ  ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್(56) ಹಾಗೂ ಆ್ಯರೋನ್ ಫಿಂಚ್(32) ರನ್ ಗಳಿಸಿದ್ದು ಬಿಟ್ಟರೆ ಮತ್ತೆಲ್ಲ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಆರ್​ಸಿಬಿ 20 ಓವರ್​ಗೆ 131 ರನ್ ಗಳಿಸಿತಷ್ಟೆ.


  ಸುಲಭ ಟಾರ್ಗೆಟ್ ಬೆನ್ನಟ್ಟಿದ ಎಸ್​ಆರ್​​ಹೆಚ್ ಕೂಡ ಆರಂಭದಲ್ಲಿ ಮುಗ್ಗರಿಸಿತಾದರೂ ನಂತರದಲ್ಲಿ ಕ್ರೀಸ್ ಕಚ್ಚಿ ಆಡಿದ ಕೇನ್ ವಿಲಿಯಮ್ಸನ್ ಭರ್ಜರಿ ಅರ್ಧಶತಕ ಸಿಡಿಸಿ ಜೇಸನ್ ಹೋಲ್ಡರ್ ಜೊತೆಗೂಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಈ ಮೂಲಕ ಹೈದರಾಬಾದ್ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಆರ್​ಸಿಬಿ ಕಪ್ ಗೆಲ್ಲುವ ಕನಸು ನುಚ್ಚುನೂರಾಯಿತು.

  Published by:Vinay Bhat
  First published: