IPL 2020: ಸೋಲಿನ ಬೆನ್ನಲ್ಲೇ CSK ಗೆ ಶಾಕ್: ಮುಂದಿನ ಪಂದ್ಯಗಳಿಗೆ ಸ್ಟಾರ್ ಆಟಗಾರ ಡೌಟ್..!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದ ಸಿಎಸ್​ಕೆ ಕೊನೆಯ ಓವರ್​ನಲ್ಲಿ ಎಡವಿತ್ತು. ಅಂತಿಮ ಓವರ್​ನಲ್ಲಿ ಗೆಲ್ಲಲು 17 ರನ್​ಗಳ ಅವಶ್ಯಕತೆಯಿತ್ತು.

CSK

CSK

  • Share this:
    IPLನ 13ನೇ ಸೀಸನ್​ನಲ್ಲಿ ಪ್ಲೇ ಆಫ್​ ತಲುಪಲು ಹೆಣಗಾಡುತ್ತಿರುವ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೇ ಆಡಿರುವ 9 ಪಂದ್ಯಗಳಲ್ಲಿ 6 ರಲ್ಲಿ ಸೋತಿರುವ ಸಿಎಸ್​ಕೆ ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದರ ಬೆನ್ನಲ್ಲೇ ತಂಡದ ಸ್ಟಾರ್ ಆಲ್​ರೌಂಡರ್ ಡ್ವೇನ್ ಬ್ರಾವೋ ಗಾಯಗೊಂಡಿರುವುದು ಧೋನಿಯ ಪಾಳಯದ ಚಿಂತೆಯನ್ನು ಹೆಚ್ಚಿಸಿದೆ.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದ ಸಿಎಸ್​ಕೆ ಕೊನೆಯ ಓವರ್​ನಲ್ಲಿ ಎಡವಿತ್ತು. ಅಂತಿಮ ಓವರ್​ನಲ್ಲಿ ಗೆಲ್ಲಲು 17 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಬ್ರಾವೋ ಬದಲಿಗೆ ರವೀಂದ್ರ ಜಡೇಜಾ ಅವರಿಗೆ ಧೋನಿ ಓವರ್​ ನೀಡಿದ್ದರು. ಪರಿಣಾಮ ಅಕ್ಷರ್ ಪಟೇಲ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸುವ ಮೂಲಕ ಡೆಲ್ಲಿ ಭರ್ಜರಿ ಜಯ ತಂದುಕೊಟ್ಟಿದ್ದರು.

    ಈ ಸೋಲಿನ ಬೆನ್ನಲ್ಲೇ ಬ್ರಾವೋಗೆ ಓವರ್ ನೀಡದಿರುವ ಬಗ್ಗೆ ಪ್ರಶ್ನೆಗಳೆದ್ದಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಧೋನಿ, ಪಂದ್ಯದ ಮಧ್ಯೆದಲ್ಲೇ ಬ್ರಾವೋ ಗಾಯಗೊಂಡು ಮೈದಾನ ತೊರೆದಿದ್ದರು. ಅವರು ಬೌಲಿಂಗ್ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಕರಣ್ ಶರ್ಮಾ ಹಾಗೂ ಜಡೇಜಾ, ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

    ಈ ಸೋಲಿನ ಬಗ್ಗೆ ಮಾತನಾಡಿರುವ ಸಿಎಸ್​ಕೆ ಕೋಚ್ ಸ್ಟೀವನ್ ಫ್ಲೆಮಿಂಗ್, ಬ್ರಾವೋ ಗಾಯಗೊಂಡಿರುವುದು ನಮ್ಮ ದುರಾದೃಷ್ಟ. ಹೀಗಾಗಿ ಕೊನೆಯ ಓವರ್ ಬೌಲ್ ಮಾಡಲಾಗಲಿಲ್ಲ. ಜಡೇಜಾ ಅಂತಿಮ ಓವರ್ ಎಸೆಯಲು ಸಿದ್ಧರಿರಲಿಲ್ಲ. ಆದರೂ ಅನಿವಾರ್ಯ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಯಿತು ಎಂದಿದ್ದಾರೆ.

    ಅಲ್ಲದೆ, ಬ್ರಾವೋ ಅವರು ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಅಂತಿಮ ಓವರ್​ನಲ್ಲಿ ಬೌಲಿಂಗ್ ಮಾಡಲಾಗದ ಬಗ್ಗೆ ಅವರಲ್ಲೂ ಬೇಸರವಿದೆ. ಅವರನ್ನು ನಾವು ಕೊನೆಯ ಓವರ್ ಸ್ಪೆಷಲಿಸ್ಟ್ ಆಗಿ ಬಳಸುತ್ತಿದ್ದೆವು. ಆದರೀಗ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಫಿಟ್​ನೆಸ್ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸದ್ಯ ಬ್ರಾವೋಗೆ ಉಂಟಾಗಿರುವ ಸಮಸ್ಯೆ ಮೈದಾನದಿಂದ ದೂರವಿಡುವಷ್ಟು ಗಂಭೀರವಾಗಿದೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.

    ಸದ್ಯ ಬ್ರಾವೋ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗಿದ್ದು, ಇದರಿಂದ ಅವರು ಮುಂದಿನ ಕೆಲ ದಿನಗಳು ಅಥವಾ ಒಂದೆರಡು ವಾರಗಳು ಮೈದಾನದಿಂದ ದೂರ ಉಳಿಯಬೇಕಾಗಿ ಬರಬಹುದು. ಈ ಬಗ್ಗೆ ಇನ್ನೆರಡು ದಿನಗಳೊಳಗೆ ವರದಿ ಬರಲಿದೆ ಎಂದು ಸಿಎಸ್​ಕೆ ಕೋಚ್ ತಿಳಿಸಿದ್ದಾರೆ.

    ಬಲ ತೊಡೆ ಸ್ನಾಯುಗಳ ಸೆಳೆತದಿಂದ ಬಳಲುತ್ತಿರುವ ಬ್ರಾವೋ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಿಂದ ದೂರ ಉಳಿದಿದ್ದರು. ಇದಾಗ್ಯೂ ತಂಡಕ್ಕೆ ಮರಳಿದರೂ, ಬೌಲಿಂಗ್ ಮತ್ತು ಬ್ಯಾಟಿಂಗ್​​ನಲ್ಲಿ ವಿಂಡೀಸ್ ಆಲ್​ರೌಂಡರ್​​ನ ಹಳೇ ಖದರ್ ಕಾಣಿಸಿರಲಿಲ್ಲ. ಇದಕ್ಕೆ ಕಾರಣ ಬ್ರಾವೋ ಸಂಪೂರ್ಣ ಫಿಟ್ ಆಗಿರಲಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು.

    ಅತ್ತ ಕೆರಬಿಯನ್ ಪ್ರೀಮಿಯರ್ ಲೀಗ್​ನಲ್ಲೂ ಸ್ನಾಯು ಸೆಳೆತಕ್ಕೀಡಾಗಿದ್ದ ಬ್ರಾವೋ ಫೈನಲ್​ನಲ್ಲಿ ಆಡಿದರೂ ಬೌಲಿಂಗ್ ಮಾಡಿರಲಿಲ್ಲ. ಇದೀಗ ಮತ್ತೊಮ್ಮೆ ಅದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸಿಎಸ್​ಕೆ ತಂಡದ ಮುಂದಿನ ಪಂದ್ಯಗಳಿಂದಲೂ ಬ್ರಾವೋ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಇನ್ನು ಚೆನ್ನೈ ತಂಡಕ್ಕೆ 5 ಪಂದ್ಯಗಳು ಮಾತ್ರ ಉಳಿದಿದ್ದು, ಒಂದು ವಾರದಲ್ಲಿ 3 ಪಂದ್ಯಗಳನ್ನಾಡಲಿದೆ. ಒಂದು ವೇಳೆ ಬ್ರಾವೋಗೆ ವಾರಗಳ ಕಾಲ ವಿಶ್ರಾಂತಿ ನೀಡಲು ವೈದ್ಯರು ಸೂಚಿಸಿದ್ರೆ ಸಿಎಸ್​ಕೆ ತಂಡದ ಫಲಿತಾಂಶದ ಮೇಲೆ ಸ್ಟಾರ್ ಆಲ್​ರೌಂಡರ್​ ಅನುಪಸ್ಥಿತಿ ಪ್ರಭಾವ ಬೀರಲಿದೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
    Published by:zahir
    First published: