IPL

  • associate partner
HOME » NEWS » Ipl » IPL 2020 DINESH KARTHIK EOIN MORGAN APPOINTED KKR CAPTAIN AFTER DINESH KARTHIK STEPS ASIDE VB

Dinesh Karthik: ಕೆಕೆಆರ್ ತಂಡಕ್ಕೆ ದೊಡ್ಡ ಆಘಾತ: ನಾಯಕತ್ವದಿಂದ ಕೆಳಗಿಳಿದ ದಿನೇಶ್ ಕಾರ್ತಿಕ್

ಕಾರ್ತಿಕ್ ಅವರು 2018 ರಲ್ಲಿ ಕೆಕೆಆರ್ ತಂಡಕ್ಕೆ ನಾಯಕನಾಗಿ ಆಯ್ಕೆ ಆದರು. ಈ ಸಂದರ್ಭ ತಂಡ ನಾಕೌಟ್ ತಲುಪಿತ್ತು. ಇನ್ನೂ 2019ರ ಸೀಸನ್​ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಡಪಬೇಕಾಯಿತು.

news18-kannada
Updated:October 16, 2020, 2:43 PM IST
Dinesh Karthik: ಕೆಕೆಆರ್ ತಂಡಕ್ಕೆ ದೊಡ್ಡ ಆಘಾತ: ನಾಯಕತ್ವದಿಂದ ಕೆಳಗಿಳಿದ ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್
  • Share this:
ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಐಪಿಎಲ್​ನಲ್ಲಿ ಇಂದು ನಡೆಯಲಿರುವ 32ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಾದಾಟ ನಡೆಸಲಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನ ಕೆಕೆಆರ್​ಗೆ ದೊಡ್ಡ ಆಘಾತ ಉಂಟಾಗಿದೆ. ತಂಡದ ನಾಯಕ ದಿನೇಶ್ ಕಾರ್ತಿಕ್ ತಮ್ಮ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. 2019 ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಇಂಗ್ಲೆಂಡ್​ನ ಇಯಾನ್ ಮಾರ್ಗನ್ ಅವರು ಕೆಕೆಆರ್ ತಂಡವನ್ನು ಮುನ್ನಡೆಸಲಿ ಎಂದು ಕಾರ್ತಿಕ್ ಹೇಳಿದ್ದಾರೆ.

ಈ ಬಗ್ಗೆ ಕೆಕೆಆರ್ ಫ್ರಾಂಚೈಸಿ ಖಚಿತ ಪಡಿಸಿದ್ದು, ಬ್ಯಾಟಿಂಗ್​ ಕಡೆ ಹೆಚ್ಚು ಗಮನ ಹರಿಸುವ ಸಲುವಾಗಿ ದಿನೇಶ್ ಕಾರ್ತಿಕ್ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹಾಗೂ ಅನುಭವಿ ಆಟಗಾರ ಇಯಾನ್ ಮಾರ್ಗನ್ ಅವರಿಗೆ ಕೆಕೆಆರ್ ಕ್ಯಾಪ್ಟನ್ ಪಟ್ಟ ನೀಡಲಾಗಿದೆ ಎಂದು ಹೇಳಿದೆ.
ಈ ಬಾರಿಯ ಐಪಿಎಲ್​ನಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದ ಜೊತೆ ಬ್ಯಾಟಿಂಗ್​ನಲ್ಲೂ ವೈಫಲ್ಯ ಅನುಭಿಸಿದ್ದಾರೆ. ಕೆಕೆಆರ್ ಈವರೆಗೆ ಆಡಿರುವ 7 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿ 3ರಲ್ಲಿ ಸೋಲು ಕಂಡಿದೆ.ಕಳೆದ 3 ಪಂದ್ಯಗಳ ಪೈಕಿ 2ರಲ್ಲಿ ಅಂತಿಮ ಹಂತದಲ್ಲಿ ಜಯ ದಾಖಲಿಸಿದ ಕೆಕೆಆರ್, ಆರ್‌ಸಿಬಿ ಎದುರು ಹೀನಾಯವಾಗಿ ಸೋಲು ಕಂಡಿತು. ಅಲ್ಲದೆ ಕೋಲ್ಕತ್ತಾ ತಂಡ ಅಂತಿಮ ಹಂತದಲ್ಲಿ ಜಯ ಸಾಧಿಸಿದ್ದೇ ಹೆಚ್ಚು. ದೊಡ್ಡ ಅಂತರದ ಗೆಲುವು ಇನ್ನೂ ಕಂಡಿಲ್ಲ.

IPL 2020, MI vs KKR: ಅಗ್ರಸ್ಥಾನದತ್ತ ಮುಂಬೈ ಕಣ್ಣು: ಕೆಕೆಆರ್​ಗೆ ಬೇಕಿದೆ ದೊಡ್ಡ ಗೆಲುವು

ಇತ್ತ ಕಾರ್ತಿಕ್ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಆಡಿದ 7 ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಿದ್ದಾರಷ್ಟೆ. ಇದರಲ್ಲಿ ಒಂದು ಅರ್ಧಶತಕ ಸೇರಿದೆ. ಹೀಗಾಗಿ ನಾನು ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡುವ ಸಲುವಾಗಿ ನಾಯಕತ್ವದಿಂದ ಕೆಳಗಿಳಿಯುತ್ತೇನೆ ಎಂದು ಹೇಳಿದ್ದಾರೆ.

ಕಾರ್ತಿಕ್ ಅವರು 2018 ರಲ್ಲಿ ಕೆಕೆಆರ್ ತಂಡಕ್ಕೆ ನಾಯಕನಾಗಿ ಆಯ್ಕೆ ಆದರು. ಈ ಸಂದರ್ಭ ತಂಡ ನಾಕೌಟ್ ತಲುಪಿತ್ತು. ಇನ್ನೂ 2019ರ ಸೀಸನ್​ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಡಪಬೇಕಾಯಿತು.
Published by: Vinay Bhat
First published: October 16, 2020, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories