news18-kannada Updated:October 26, 2020, 4:27 PM IST
Virat Kohli
ಸತತ ಗೆಲುವುಗಳಿಂದ ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಗ್ಗರಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಎಸ್ಕೆ ವಿರುದ್ದ ಅಬ್ಬರಿಸಿದ್ದ ಕೊಹ್ಲಿ ಪಡೆ 2ನೇ ಮ್ಯಾಚ್ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಅದರಲ್ಲೂ ಅತಿರಥ ಮಹಾರಥ ದಾಂಡಿಗರಿದ್ದರೂ ತಂಡದ ಮೊತ್ತವನ್ನು 150 ದಾಟಿಸಲಾಗಿರಲಿಲ್ಲ. 146 ರನ್ಗಳ ಸಾಧಾರಣ ಸವಾಲು ಪಡೆದ ಸಿಎಸ್ಕೆ ಉತ್ತಮ ಬ್ಯಾಟಿಂಗ್ ಮೂಲಕ 4ನೇ ಗೆಲುವು ದಾಖಲಿಸಿ ನಿಟ್ಟುಸಿರು ಬಿಟ್ಟಿತು.
ಚೆನ್ನೈ ಸೂಪರ್ ಕಿಂಗ್ಸ್ ಎದುರು 8 ವಿಕೆಟ್ಗಳ ಹೀನಾಯ ಸೋಲನುಭವಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅದರಲ್ಲೂ ಸೋಲಿಗೆ ಬೌಲರುಗಳ ಕೆಟ್ಟ ಪ್ರದರ್ಶನವೇ ಕಾರಣವಾಯ್ತು ಎಂದಿದ್ದಾರೆ. ಏಕೆಂದರೆ 2ನೇ ಇನಿಂಗ್ಸ್ ವೇಳೆ ಪಿಚ್ ಬ್ಯಾಟಿಂಗ್ಗೆ ಅನುಕೂಲಕರವಾಗಿರಲಿಲ್ಲ. ಆದರೆ ನಮ್ಮ ಬೌಲರ್ಗಳು ನೇರ ಮತ್ತು ನಿಖರತೆಯೊಂದಿಗೆ ಬೌಲಿಂಗ್ ಮಾಡಲಿಲ್ಲ ಎಂದು ಆರ್ಸಿಬಿ ನಾಯಕ ಹೇಳಿದರು.
ಅಷ್ಟೇ ಅಲ್ಲದೆ ಎದುರಾಳಿ ಬ್ಯಾಟ್ಸ್ಮನ್ಗಳು ಬೌಂಡರಿ ಬಾರಿಸುವಂತಹ ಸುಲಭ ಎಸೆತಗಳನ್ನು ಬೌಲರುಗಳ ಹೆಚ್ಚಾಗಿ ಹಾಕಿದ್ದರು. ಆದರೆ ಸಿಎಸ್ಕೆ ಬೌಲಿಂಗ್ ವೇಳೆ ಸ್ಟಂಪ್ಸ್ಗಳ ಮೇಲೆ ಗುರಿಯಿಟ್ಟಿತ್ತು. ಇದರಿಂದ ಹೆಚ್ಚಿನ ರನ್ ಪೇರಿಸಲಾಗಿರಲಿಲ್ಲ. ಆದರೆ ನಮ್ಮ ಬೌಲರುಗಳು ಕರಾರುವಾಕ್ ದಾಳಿ ನಡೆಸದಿರುವುದೇ ಸೋಲಿಗೆ ಕಾರಣವಾಯ್ತು ಎಂದು ಕೊಹ್ಲಿ ತಿಳಿಸಿದ್ದಾರೆ.
KKR ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ಆರ್ಸಿಬಿ ಬೌಲರುಗಳು ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಲಯ ತಪ್ಪಿದ್ದರು. ಅದಲ್ಲೂ ಸಿರಾಜ್ ಹಾಗೂ ಮೋರಿಸ್ ದುಬಾರಿ ಎನಿಸಿಕೊಂಡರು. ಹಾಗೆಯೇ ಚಹಲ್, ಸೈನಿ, ಸುಂದರ್ ಉತ್ತಮವಾಗಿ ಬೌಲಿಂಗ್ ಮಾಡಿದರೂ ವಿಕೆಟ್ ಕಬಳಿಸಿ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದರು.
ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 4ನೇ ಸೋಲಾಗಿದ್ದು, ಇದಾಗ್ಯೂ ಅಂಕಪಟ್ಟಿಯಲ್ಲಿ 14 ಪಾಯಿಂಟ್ಸ್ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆರ್ಸಿಬಿಗೆ ಇನ್ನೂ 3 ಪಂದ್ಯಗಳು ಬಾಕಿಯಿದ್ದು, ಇದರಲ್ಲಿ ಒಂದು ಗೆದ್ದರೆ ಪ್ಲೇ ಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಬಹುದು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್
Published by:
zahir
First published:
October 26, 2020, 4:27 PM IST