IPL

  • associate partner

IPL 2020: ಸೋಲಿನ ಸುಳಿಯಲ್ಲಿ ಸಿಲುಕಿರುವ ಧೋನಿಗೆ ಸಲಹೆ ನೀಡಿದ ಅಗರ್ಕರ್‌..!

ಈ ಬಾರಿಯ ಟೂರ್ನಿಯಲ್ಲಿ ಹಲವು ಬಾರಿ ಬ್ಯಾಟಿಂಗ್ ಕ್ರಮಾಂಕ ಬದಲಿಸಿದ್ದ ಎಂಎಸ್ ಧೋನಿ, 10 ಪಂದ್ಯಗಳಿಂದ ಗಳಿಸಿರುವುದು ಕೇವಲ 164 ರನ್​ಗಳು ಮಾತ್ರ.

news18-kannada
Updated:October 21, 2020, 9:41 PM IST
IPL 2020: ಸೋಲಿನ ಸುಳಿಯಲ್ಲಿ ಸಿಲುಕಿರುವ ಧೋನಿಗೆ ಸಲಹೆ ನೀಡಿದ ಅಗರ್ಕರ್‌..!
ms dhoni
  • Share this:
10 ಬಾರಿ ಪ್ಲೇ ಆಫ್ ಪ್ರವೇಶಿಸಿದ ತಂಡ...8 ಬಾರಿ ಐಪಿಎಲ್ ಫೈನಲ್ ಆಡಿದ ಟೀಮ್, ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವನ್ನು ಮುನ್ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್​ನಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಸೋತು ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿದೆ. ಇದಾಗ್ಯೂ ಮುಂದಿನ 4 ಪಂದ್ಯಗಳಲ್ಲಿ ಭರ್ಜರಿ ರನ್​ ರೇಟ್​ನೊಂದಿಗೆ ಗೆಲುವು ದಾಖಲಿಸಿದ್ರೆ ಮಾತ್ರ ಸಿಎಸ್​ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶಗಳು ದೊರೆಯಬಹುದು.

ಇತ್ತ ಸತತ ಸೋಲು ಹಾಗೂ ವೈಫಲ್ಯದಿಂದ ಬಳಲುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಗೆ ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್ ಅಜಿತ್ ಅಗರ್ಕರ್ ಮುಂದಿನ ಪಂದ್ಯದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮಾಧ್ಯಮ ಚರ್ಚೆಯೊಂದರಲ್ಲಿ ಮಾತನಾಡಿದ ಅಗರ್ಕರ್, ಈ ಸೀಸನ್​ನಲ್ಲಿ ಸಿಎಸ್‌ಕೆ ಮತ್ತು ಧೋನಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಬದಲಾವಣೆ ಅಗತ್ಯ ಎಂದರು.ಅದರಲ್ಲೂ ಸಿಎಸ್​ಕೆ ನಾಯಕನ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ನನ್ನ ಅಭಿಪ್ರಾಯದಂತೆ ಧೋನಿ ಯಾವತ್ತೂ 5ನೇ ಕ್ರಮಾಂಕಕ್ಕಿಂತ ಕೆಳಗೆ ಬ್ಯಾಟಿಂಗ್ ಮಾಡಬಾರದು. ತಂಡದ ಸನ್ನಿವೇಶ ಏನೇ ಇದ್ದರೂ ಅವರು ಐದನೇ ಕ್ರಮಾಂಕಕ್ಕಿಂತ ಕೆಳಗೆ ಬ್ಯಾಟ್ ಬೀಸುವುದು ಸೂಕ್ತವಲ್ಲ. ವಿಶ್ವ ಕ್ರಿಕೆಟ್​ನಲ್ಲಿ ಆಡಿ ಅನುಭವ ಭಂಡಾರ ಹೊಂದಿರುವ ಧೋನಿಗೆ ಸನ್ನಿವೇಶವನ್ನು ಹೇಗೆ ನಿರ್ವಹಿಸಬೇಕೆಂದು ಗೊತ್ತಿದೆ. ಹೀಗಾಗಿ ಇನ್ನುಳಿದ ಭಾಗದಲ್ಲಿ ಅದನ್ನು ಬಳಸಿಕೊಂಡು ಕಂಬ್ಯಾಕ್ ಮಾಡಬೇಕು ಎಂದು ಅಗರ್ಕರ್ ಸಲಹೆ ನೀಡಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಹಲವು ಬಾರಿ ಬ್ಯಾಟಿಂಗ್ ಕ್ರಮಾಂಕ ಬದಲಿಸಿದ್ದ ಎಂಎಸ್ ಧೋನಿ, 10 ಪಂದ್ಯಗಳಿಂದ ಗಳಿಸಿರುವುದು ಕೇವಲ 164 ರನ್​ಗಳು ಮಾತ್ರ. ಹೀಗಾಗಿ ಅಗರ್ಕರ್ ಸಲಹೆಯಂತೆ ಮುಂದಿನ ಪಂದ್ಯದಲ್ಲಿ 5ನೇ ಕ್ರಮಾಂಕದೊಳಗೆ ಧೋನಿ ಬ್ಯಾಟಿಂಗ್​ಗೆ ಇಳಿಯಲಿದ್ದಾರಾ ಕಾದು ನೋಡಬೇಕಿದೆ.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
Published by: zahir
First published: October 21, 2020, 9:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading