IPL 2020 DC VS KXIP: ಇಂದು ಡೆಲ್ಲಿ- ಪಂಜಾಬ್​ ನಡುವೆ ಹಣಾಹಣಿ; ಯಾವ ತಂಡ ಸ್ಟ್ರಾಂಗ್? ಇಲ್ಲಿದೆ ವಿವರ

ಇಂದಿನ ಪಂದ್ಯ ನಡೆಯುವ ದುಬೈ ಮೈದಾನ ಬ್ಯಾಟಿಂಗ್​ ಪಿಚ್​ ಎಂದು ಹೇಳುತ್ತಿದೆ ಪಿಚ್​ ವರದಿ. ಹೀಗಾಗಿ, ಮೊದಲು ಬ್ಯಾಟಿಂಗ್​​ ಮಾಡಿದವರು ದೊಡ್ಡ ಮೊತ್ತದ ಟಾರ್ಗೆಟ್​ ನೀಡಲೇಬೇಕು.

IPL 2020

IPL 2020

  • Share this:
ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್​) 13ನೇ ಆವೃತ್ತಿಯ 2ನೇ ಪಂದ್ಯದಲ್ಲಿ ಕನ್ನಡಿಗ ಕೆಎಲ್​ ರಾಹುಲ್​ ನೇತೃತ್ವದ ಕಿಂಗ್ಸ್​ ಇಲವೆನ್​ ಪಂಜಾಬ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಸೆಣೆಸಾಟ ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ  ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಪಂದ್ಯ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ. ಈ ಎರಡೂ ತಂಡಗಳು ಕಳೆದ 12 ಆವೃತ್ತಿಯಲ್ಲಿ ಒಮ್ಮೆಯೂ ಕಪ್​ ಎತ್ತಿಲ್ಲ. ಹೀಗಾಗಿ, ಈ ಬಾರಿ ಕಪ್​ ಎತ್ತಲೇ ಬೇಕು ಎನ್ನುವ ಉದ್ದೇಶದಿಂದ ಇಬ್ಬರೂ ಕಣಕ್ಕೆ ಇಳಿಯುತ್ತಿದ್ದಾರೆ. ಎರಡೂ ತಂಡಗಳ ಬಲ ನೋಡುವುದಾದರೆ ಮೇಲ್ನೋಟಕ್ಕೆ ಕಿಂಗ್ಸ್​ ಇಲವೆನ್​ ತಂಡ ಬಲಿಷ್ಠವಾಗಿ ಕಾಣುತ್ತದೆ. ಕೆಎಲ್​ ರಾಹುಲ್​ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ಅವರಿಗೆ ಸಿಕ್ಕ ಅನುಭವ, ಹಿರಿಯ ಆಟಗಾರರ ಮಾರ್ಗದರ್ಶನ ಐಪಿಎಲ್​ನಲ್ಲಿ ಸಾಕಷ್ಟು ಸಹಕಾರಿಯಾಗಲಿದೆ. ಇನ್ನು, ಬ್ಯಾಟಿಂಗ್​ ಹಾಗೂ ಕೀಪಿಂಗ್​ನಲ್ಲಿ ರಾಹುಲ್​ ಉತ್ತಮ ಪ್ರದರ್ಶ ನೀಡುತ್ತಿದ್ದಾರೆ.  ಬ್ಯಾಟಿಂಗ್​ನಲ್ಲಿ ಪಂಜಾಬ್​ ಬಲಿಷ್ಠವಾಗಿದೆ.

ಕೆಎಲ್​ ರಾಹುಲ್​, ಹೊಡಿಬಡಿ ಆಟಗಾರ ಕ್ರಿಸ್​ ಗೇಲ್​,  ಗ್ಲೆನ್​ ಮ್ಯಾಕ್ಸ್​ವೆಲ್​ ತಂಡಕ್ಕೆ ದೊಡ್ಡ ಆಧಾರವಾಗಿದ್ದಾರೆ. ಇನ್ನು, ಬಾಲಿಂಗ್​ನಲ್ಲೂ ಪಂಜಾಬ್​ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಕಾರಣ, ವೇಗಿ ಮೊಗ್ಮದ್​​ ಶಮಿ, ಮುಜೀಬ್​ ಉರ್​ ರೆಹ್ಮಾನ್​, ಜೇಮ್ಸ್​ ನೀಶಮ್ ತಂಡದಲ್ಲಿದ್ದಾರೆ. ಹೀಗಾಗಿ, ಎರಡೂ ವಿಭಾಗದಲ್ಲಿ ಪಂಜಾಬ್​ ಬಲಿಷ್ಠವಾಗಿದೆ.

ಇನ್ನು, ದೆಹಲಿ ತಂಡ ಕೂಡ ಉತ್ತಮವಾಗಿದೆ. ಆರ್​ ಅಶ್ವಿನ್​, ಶಿಖರ್​ ಧವನ್​, ಇಶಾಂತ್​ ಶರ್ಮಾ, ಅಜಿಂಕ್ಯಾ ರಹಾನೆಯಂಥ ಅನುಭವಿಗಳು ತಂಡದಲ್ಲಿದ್ದಾರೆ. ಇದರ ಜೊತೆ ರಿಷಭ್ ಪಂತ್​, ಶ್ರೇಯಸ್​ ಅಯ್ಯರ್​, ಪೃಥ್ವಿ ಶಾ ತಂಡದ ಬಲವನ್ನು ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ರಾಯುಡು ಭರ್ಜರಿ ಆಟ, ಧೋನಿ ಪಡೆ ಶುಭಾರಂಭ: ಮುಂಬೈ ವಿರುದ್ಧ ಚೆನ್ನೈಗೆ 5 ವಿಕೆಟ್​ಗಳ ಜಯ

ಹೆಚ್ಚು ಗೆದ್ದೋರ್​ ಯಾರು?:

12 ಆವೃತ್ತಿಗಳಲ್ಲಿ ಪಂಜಾಬ್​ ಹಾಗೂ ಡೆಲ್ಲಿ 24 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ 13 ಪಂದ್ಯವನ್ನು ಪಂಜಾಬ್​ ಗೆದ್ದಿದ್ದರೆ, 10 ಪಂದ್ಯವನ್ನು ಡೆಲ್ಲಿ ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿತ್ತು.

ಪಿಚ್​ ಹೇಗಿದೆ?:

ಇಂದಿನ ಪಂದ್ಯ ನಡೆಯುವ ದುಬೈ ಮೈದಾನ ಬ್ಯಾಟಿಂಗ್​ ಪಿಚ್​ ಎಂದು ಹೇಳುತ್ತಿದೆ ಪಿಚ್​ ವರದಿ. ಹೀಗಾಗಿ, ಮೊದಲು ಬ್ಯಾಟಿಂಗ್​​ ಮಾಡಿದವರು ದೊಡ್ಡ ಮೊತ್ತದ ಟಾರ್ಗೆಟ್​ ನೀಡಲೇಬೇಕು.
Published by:Rajesh Duggumane
First published: