• ಹೋಂ
  • »
  • ನ್ಯೂಸ್
  • »
  • IPL
  • »
  • IPL 2020: ಐಪಿಎಲ್ ಇತಿಹಾಸದಲ್ಲೇ ಯಾವ ತಂಡ ಮಾಡದ ಸಾಧನೆಗೈದ ಡೆಲ್ಲಿ ಕ್ಯಾಪಿಟಲ್ಸ್

IPL 2020: ಐಪಿಎಲ್ ಇತಿಹಾಸದಲ್ಲೇ ಯಾವ ತಂಡ ಮಾಡದ ಸಾಧನೆಗೈದ ಡೆಲ್ಲಿ ಕ್ಯಾಪಿಟಲ್ಸ್

Delhi Capitals

Delhi Capitals

2011-2013 ರ ನಡುವಿನ ಐಪಿಎಲ್​ನಲ್ಲಿ 10 ತಂಡಗಳು ಭಾಗವಹಿಸಿದ್ದವು. ಈ ವೇಳೆ ಡೆಲ್ಲಿ ತಂಡವು 9ನೇ ಹಾಗೂ 10ನೇ  ಸ್ಥಾನ ಪಡೆದುಕೊಂಡಿತ್ತು.

  • Share this:

ಸೋಮವಾರ ಅಬುಧಾಬಿಯ ಶೇಖ್​ ಝಾಯೆದ್ ಸ್ಡೇಡಿಯಂನಲ್ಲಿ ನಡೆದ ಐಪಿಎಲ್​ನ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸಿದೆ. ಅದು ಕೂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನದೊಂದಿಗೆ ಎಂಬುದು ವಿಶೇಷ. ಇದರೊಂದಿಗೆ ಐಪಿಎಲ್​ನಲ್ಲಿ ಅಪರೂಪದ ದಾಖಲೆಯನ್ನು ಬರೆದ ಏಕೈಕ ತಂಡ ಎಂಬ ಕೀರ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ಭಾಜನವಾಗಿದೆ.


ಹೌದು, ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಅಂಕ ಪಟ್ಟಿಯ ಎಲ್ಲಾ ಶ್ರೇಯಾಂಕವನ್ನು ಅಲಂಕರಿಸಿದ ತಂಡ ಎಂಬ ಹೆಗ್ಗಳಿಕೆ ಡೆಲ್ಲಿ ಪಾಲಾಗಿದೆ. 2008 ರ ಚೊಚ್ಚಲ ಐಪಿಎಲ್​ನಲ್ಲಿ 4ನೇ ಸ್ಥಾನ ಪಡೆದಿದ್ದ ಡೆಲ್ಲಿ, 2009 ರಲ್ಲಿ 1ನೇ ಅಲಂಕರಿಸಿತ್ತು. 2010 ರಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದೊಂದಿಗೆ ಟೂರ್ನಿ ಅಂತ್ಯಗೊಳಿಸಿದರೆ, 2011 ರಲ್ಲಿ 10ನೇ ಅಲಂಕರಿಸಿತ್ತು. 2012 ರಲ್ಲಿ ಮತ್ತೆ 4ನೇ ಸ್ಥಾನ ಪಡೆದ ಡೆಲ್ಲಿ ತಂಡ, 2013 ರಲ್ಲಿ 9ನೇ ಸ್ಥಾನದೊಂದಿಗೆ ವಿದಾಯ ಹೇಳಿತ್ತು. ಇನ್ನು 2014 ರಲ್ಲಿ 8ನೇ ಸ್ಥಾನ ಪಡೆದರೆ, 2015 ರಲ್ಲಿ 7ನೇ ಸ್ಥಾನಗಳಿಸಲಷ್ಟೇ ಶಕ್ತರಾದರು.


2016 ಮತ್ತು 2017 ರಲ್ಲಿ 6ನೇ ಸ್ಥಾನ ಪಡೆದ ಡೆಲ್ಲಿ ತಂಡವು 2018 ರಲ್ಲಿ 8ನೇ ಸ್ಥಾನದೊಂದಿಗೆ ಟೂರ್ನಿಯನ್ನು ಮುಗಿಸಿತ್ತು. 2019 ರಲ್ಲಿ 3ನೇ ಸ್ಥಾನದೊಂದಿಗೆ ಪ್ಲೇ ಆಫ್ ಆಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2020 ರ ಐಪಿಎಲ್​ನಲ್ಲಿ 2ನೇ ಸ್ಥಾನ ಅಲಂಕರಿಸುವ ಮೂಲಕ ಲೀಗ್ ಹಂತದ ಪಂದ್ಯಗಳನ್ನು ಮುಗಿಸಿದೆ. ಅಂದಹಾಗೆ 2011-2013 ರ ನಡುವಿನ ಐಪಿಎಲ್​ನಲ್ಲಿ 10 ತಂಡಗಳು ಭಾಗವಹಿಸಿದ್ದವು. ಈ ವೇಳೆ ಡೆಲ್ಲಿ ತಂಡವು 9ನೇ ಹಾಗೂ 10ನೇ  ಸ್ಥಾನ ಪಡೆದುಕೊಂಡಿತ್ತು.


ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅಂಕಪಟ್ಟಿಯ ಎಲ್ಲಾ ಶ್ರೇಯಾಂಕದಲ್ಲೂ ಸ್ಥಾನ ಪಡೆದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಡೆಲ್ಲಿ ಕ್ಯಾಪಿಟಲ್ಸ್ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಕ್ವಾಲಿಫಯರ್ ಪಂದ್ಯವನ್ನು ಆಡಲಿರುವ ಡೆಲ್ಲಿ ಕ್ಯಾಪಿಟಲ್ಸ್ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸುವ ಇರಾದೆಯಲ್ಲಿದೆ.
POINTS TABLE:SCHEDULE TIME TABLE:ORANGE CAP:PURPLE CAP:RESULT DATA:MOST SIXES:ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ

First published: