IPL

  • associate partner
HOME » NEWS » Ipl » IPL 2020 DC VS SRH QUALIFIER 2 LIVE CRICKET SCORE DELHI CAPITALS VS SUNRISERS HYDERABAD IPL PLAYOFFS LIVE SCORECARD DHAWAN 50 DELHI ONE DOWN VB

DC vs SRH Qualifier 2, IPL 2020 Live Score: ಧವನ್ ಔಟ್: ಉತ್ತಮ ಮೊತ್ತದತ್ತ ಡೆಲ್ಲಿ

IPL 2020 Playoffs, Delhi Capitals vs Sunrisers Hyderabad Live Score: ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 17 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ 11 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

news18-kannada
Updated:November 8, 2020, 9:10 PM IST
DC vs SRH Qualifier 2, IPL 2020 Live Score: ಧವನ್ ಔಟ್: ಉತ್ತಮ ಮೊತ್ತದತ್ತ ಡೆಲ್ಲಿ
DC vs SRH Live Score Updates
  • Share this:
ಅಬುಧಾಬಿ (ನ. 08) ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ 13ನೇ ಆವೃತ್ತಿಯ ಐಪಿಎಲ್​ನ ಮಹತ್ವದ ಪಂದ್ಯ ನಡೆಯುತ್ತಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು 2ನೇ ಕ್ವಾಮಿಫೈಯರ್​ನಲ್ಲಿ ಮುಖಾಮುಖಿ ಆಗುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್​ಗೇರಲಿದೆ.

ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ ಆಗಿ ಕಣಕ್ಕಿಳಿದಿರುವ ಮಾರ್ಕಸ್ ಸ್ಟಾಯಿನಿಸ್ ಹಾಗೂ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪರಿಣಾಮ ಮೊದಲ 6 ಓವರ್​ನಲ್ಲಿ 65 ರನ್ ಮೂಡಿಬಂತು. ಇವರಿಬ್ಬರ ಭರ್ಜರಿ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ರಶೀದ್ ಖಾನ್.

27 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 28 ರನ್ ಗಳಿಸಿದ್ದ ಸ್ಟಾಯಿನಿಸ್ 9ನೇ ಓವರ್​ನಲ್ಲಿ ಔಟ್ ಆದರು. ಈ ಜೋಡಿ ಮೊದಲ ವಿಕೆಟ್​ಗೆ 86 ರನ್​ಗಳ ಕಾಣಿಕೆ ನೀಡಿದರು. ನಾಯಕ ಶ್ರೇಯಸ್ ಅಯ್ಯರ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 20 ಎಸೆತಗಳಲ್ಲಿ 21 ರನ್ ಗಳಿಸಿ ಔಟ್ ಆದರು. ಈ ನಡುವೆ ಧವನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಸದ್ಯ ಕ್ರೀಸ್​ನಲ್ಲಿ ಧವನ್ ಹಾಗೂ ಶಿಮ್ರೋನ್ ಹೆಟ್ಮೇರ್ ಇದ್ದಾರೆ.

ಇಂದಿನ ಪಂದ್ಯಕ್ಕೆ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆ 2 ಮಾಡಲಾಗಿದ್ದು ಪ್ರವೀಣ್ ದುಬೆ ಮತ್ತು ಶಿಮ್ರೋನ್ ಹೆಟ್ಮೇರ್ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇತ್ತ ಎಸ್​ಆರ್​ಹೆಚ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡವೇ ಕಣಕ್ಕಿಳಿಯುತ್ತಿದೆ.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಶ್ರೀವತ್ಸ್ ಗೋಸ್ವಾಮಿ (ವಿ.ಕೀ), ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ಜೇಸನ್ ಹೋಲ್ಡರ್, ಪ್ರಿಯಂ ಗರ್ಗ್, ಶಹ್ಬಾಜ್ ನದೀಂ, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.

ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಪ್ರವೀನ್ ದುಬೆ, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.





ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಫೈನಲ್​ ಏರುವ ತವಕದಲ್ಲಿರುವ ಡೆಲ್ಲಿಗೆ ಈ ಪಂದ್ಯ ಬಹುಮುಖ್ಯವಾಗಿದ್ದು ತಪ್ಪುಗಳನ್ನು ಸರಿಪಡಿಸಿ ಕಣಕ್ಕಿಳಿಯಬೇಕಿದೆ. ಕಳೆದ ಕೆಲವು ಪಂದ್ಯಗಳಿಂದ ಸೋಲನ್ನೇ ಕಾಣುತ್ತಿರುವ ಡೆಲ್ಲಿ ತಂಡದಲ್ಲಿ ಬ್ಯಾಟ್ಸ್​ಮನ್​ಗಳ ವೈಫಲ್ಯ ಎದ್ದು ಕಾಣುತ್ತಿದೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ದುರ್ಬಲ ತಂಡವಾಗಿ ಗೋಚರಿಸುತ್ತಿದೆ. ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಜಿಂಕ್ಯಾ ರಹಾನೆ ಹೀಗೆ ಟಾಪ್ ಕ್ಲಾಸ್ ಅನುಭವಿ ಆಟಗಾರರಿದ್ದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ಡೆಲ್ಲಿ ವಿಫಲವಾಗಿದೆ.

ಇತ್ತ ಪ್ರಚಂಡ ಫಾರ್ಮ್​ನಲ್ಲಿರುವ ಎಸ್​ಆರ್​ಹೆಚ್ ಕೊನೆಯ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಬೀಗಿದೆ. ಲೀಗ್ ಹಂತದ ಎರಡೂ ಮುಖಾಮುಖಿಗಳಲ್ಲಿ ಅಯ್ಯರ್ ವಿರುದ್ಧ ವಾರ್ನರ್ ಬಳಗ ಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲೂ ಗೆದ್ದು 2016ರ ಬಳಿಕ ಮತ್ತೊಮ್ಮೆ ಫೈನಲ್‌ಗೇರುವ ತವಕದಲ್ಲಿದೆ.

ನಾಯಕ ಡೇವಿಡ್ ವಾರ್ನರ್, ಮನೀಶ್ ಪಾಂಡೆ ಉತ್ತಮ ಲಯದಲ್ಲಿದ್ದಾರೆ. ಕೇನ್ ವಿಲಿಯಮ್ಸನ್ ಕೂಡ ಫಾರ್ಮ್​ಗೆ ಬಂದಿದ್ದು ಕಳೆದ ಆರ್​ಸಿಬಿ ವಿರುದ್ಧ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅಂತಿಮ ಹಂತದಲ್ಲಿ ಜೇಸನ್ ಹೋಲ್ಡರ್ ಆಲ್ರೌಂಡರ್ ಪ್ರದರ್ಶನ ತಂಡಕ್ಕೆ ನೆರವಾಗುತ್ತಿದೆ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 17 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ 11 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
Published by: Vinay Bhat
First published: November 8, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories