IPL

  • associate partner
HOME » NEWS » Ipl » IPL 2020 DC VS SRH QUALIFIER 2 DELHI CAPITALS VS SUNRISERS HYDERABAD IPL PLAYOFFS LIVE SCORECARD DC 288 3 VB

DC vs SRH Qualifier 2, IPL 2020: ಡೆಲ್ಲಿ ಬ್ಯಾಟ್ಸ್​ಮನ್​ಗಳ ಅಬ್ಬರ: ಹೈದರಾಬಾದ್​ಗೆ 190 ರನ್ಸ್ ಟಾರ್ಗೆಟ್

IPL 2020 Playoffs, Delhi Capitals vs Sunrisers Hyderabad: ಓಪನರ್ ಆಗಿ ಕಣಕ್ಕಿಳಿದಿರುವ ಮಾರ್ಕಸ್ ಸ್ಟಾಯಿನಿಸ್ ಹಾಗೂ ಶಿಖರ್ ಧವನ್ ಭಿರುಸಿನ ಬ್ಯಾಟಿಂಗ್ ನಡೆಸಿದರು. ಪರಿಣಾಮ ಮೊದಲ 6 ಓವರ್​ನಲ್ಲಿ 65 ರನ್ ಮೂಡಿಬಂತು.

news18-kannada
Updated:November 8, 2020, 9:18 PM IST
DC vs SRH Qualifier 2, IPL 2020: ಡೆಲ್ಲಿ ಬ್ಯಾಟ್ಸ್​ಮನ್​ಗಳ ಅಬ್ಬರ: ಹೈದರಾಬಾದ್​ಗೆ 190 ರನ್ಸ್ ಟಾರ್ಗೆಟ್
DC
  • Share this:
ಅಬುಧಾಬಿ (ನ. 08) ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ 13ನೇ ಆವೃತ್ತಿ ಐಪಿಎಲ್​ನ 2ನೇ ಕ್ವಾಮಿಫೈಯರ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಮೊತ್ತ ಕಲೆಹಾಕಿದೆ. ಶಿಖರ್ ಧವನ್ ಅವರ ಆಕರ್ಷಕ ಅರ್ಧಶತಕ ಹಾಗೂ ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟಾಯಿನಿಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್​ಗಳಲ್ಲಿ 189 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ ಆಗಿ ಕಣಕ್ಕಿಳಿದಿರುವ ಮಾರ್ಕಸ್ ಸ್ಟಾಯಿನಿಸ್ ಹಾಗೂ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪರಿಣಾಮ ಮೊದಲ 6 ಓವರ್​ನಲ್ಲಿ 65 ರನ್ ಮೂಡಿಬಂತು. ಇವರಿಬ್ಬರ ಭರ್ಜರಿ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ರಶೀದ್ ಖಾನ್.

27 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 28 ರನ್ ಗಳಿಸಿದ್ದ ಸ್ಟಾಯಿನಿಸ್ 9ನೇ ಓವರ್​ನಲ್ಲಿ ಔಟ್ ಆದರು. ಈ ಜೋಡಿ ಮೊದಲ ವಿಕೆಟ್​ಗೆ 86 ರನ್​ಗಳ ಕಾಣಿಕೆ ನೀಡಿದರು. ನಾಯಕ ಶ್ರೇಯಸ್ ಅಯ್ಯರ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 20 ಎಸೆತಗಳಲ್ಲಿ 21 ರನ್ ಗಳಿಸಿ ಔಟ್ ಆದರು.

ಈ ನಡುವೆ ಧವನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಅಯ್ಯರ್ ನಿರ್ಗಮನದ ಬಳಿಕ ಧವನ್ ಜೊತೆಯಾದ ಶಿಮ್ರೋನ್ ಹೆಟ್ಮೇರ್ ಅಮೋಘ ಆಟ ಪ್ರದರ್ಶಿಸಿದರು. ಹಿಂದಿನ ರನ್ ಗತಿಯನ್ನ ಕಾಪಾಡಿಕೊಂಡು ಬ್ಯಾಟ್ ಬೀಸಿದ ಈ ಜೋಡಿ 52 ರನ್ ಕಲೆಹಾಕಿತು.

ಧವನ್ 50 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ 78 ರನ್ ಗಳಿಸಿದರೆ, ಹೆಟ್ಮೇರ್ 22 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 42 ರನ್ ಚಚ್ಚಿದರು. ಅಂತಿಮವಾಗಿ ಡೆಲ್ಲಿ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಎಸ್​ಆರ್​ಹೆಚ್ ಪರ ಜೇನಸ್ ಹೋಲ್ಡರ್, ಸಂದೀಪ್ ಶರ್ಮಾ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಶ್ರೀವತ್ಸ್ ಗೋಸ್ವಾಮಿ (ವಿ.ಕೀ), ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ಜೇಸನ್ ಹೋಲ್ಡರ್, ಪ್ರಿಯಂ ಗರ್ಗ್, ಶಹ್ಬಾಜ್ ನದೀಂ, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.

ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಪ್ರವೀನ್ ದುಬೆ, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.
Published by: Vinay Bhat
First published: November 8, 2020, 9:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories