DC vs RCB, IPL 2020 Live Score: ಡೆಲ್ಲಿ 4 ವಿಕೆಟ್ ಪತನ: ರೋಚಕ ಘಟ್ಟದತ್ತ ಪಂದ್ಯ

IPL 2020, Delhi Capitals vs Royal Challengers Bangalore Live Score: ಉಭಯ ತಂಡಗಳು ಐಪಿಎಲ್​ನಲ್ಲಿ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್​ 09 ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.

DC vs RCB Live Score Updates

DC vs RCB Live Score Updates

  • Share this:
    ಅಬುಧಾಬಿ (ನ. 02): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸವಾಲಿನ ಮೊತ್ತ ಕಲೆಹಾಕಿದೆ. ದೇವದತ್ ಪಡಿಕ್ಕಲ್ ಅವರ ಆಕರ್ಷಕ ಅರ್ಧಶತಕ ಹಾಗೂ ಡಿವಿಲಿಯರ್ಸ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ 20 ಓವರ್​ಗಳಲ್ಲಿ 152 ರನ್ ಬಾರಿಸಿದೆ.

    ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಡೆಲ್ಲಿ 2ನೇ ಓವರ್​ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಪೃಥ್ವಿ ಶಾ(9) ಕ್ಲೀನ್ ಬೌಲ್ಡ್ ಆದರು.

    ಈ ಸಂದರ್ಭ ಒಂದಾದ ಶಿಖರ್ ಧವನ್ ಹಾಗೂ ಅಜಿಂಕ್ಯಾ ರಹಾನೆ ಭರ್ಜರಿ ಜೊತೆಯಾಟ ಆಡಿದರು. ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ಬರೋಬ್ಬರಿ 88 ರನ್​ಗಳ ಜೊತೆಯಾಟ ಆಡಿ ಗೆಲುವನ್ನ ಹತ್ತಿರ ಮಾಡಿತು ಅದರಲ್ಲೂ ಧವನ್ ಫಾರ್ಮ್​ಗೆ ಮರಳಿ ಆಕರ್ಷಕ ಅರ್ಧಶತಕ ಬಾರಿಸಿದರು. ಅರ್ಧಶತಕದ ಬಳಿಕ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ಧವನ್ 41 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 54 ರನ್ ಗಳಿಸಿದರು.

    ನಾಯಕ ಶ್ರೇಯಸ್ ಅಯ್ಯರ್ ಆಟ ಕೇವಲ 7 ರನ್​ಗೆ ಅಂತ್ಯವಾಯಿತು. ರಹಾನೆ ಆಕರ್ಷಕ ಅರ್ಧಶಕ ಬಾರಿಸಿ ಅಯ್ಯರ್ ಬೆನ್ನಲ್ಲೇ ನಿರ್ಗಮಿಸಿದರು. ರಹಾನೆ 46 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 60 ರನ್ ಗಳಿಸಿದರು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ನಿಧಾನಗತಿಯಲ್ಲಿ ರನ್ ಕಲೆಹಾಕಲು ಪ್ರಾರಂಭಿಸಿದ ಓಪನರ್​ಗಳು 5ನೇ ಓವರ್​ನಲ್ಲಿ ಜೋಶ್ ಫಿಲಿಪ್(12) ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಒಂದಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಜೊತೆಯಾಟ ಆಡಿದರು.

    ಆರಂಭಿಕ ಆಘಾತದಿಂದ ತಂಡವನ್ನು ಪಾರುಮಾಡಿದ ಈ ಜೋಡಿ 57 ರನ್​ಗಳ ಕಾಣಿಕೆ ನೀಡಿತು. ಆದರೆ, ಅಶ್ವಿನ್ ಬೌಲಿಂಗ್​ನಲ್ಲಿ ಸಿಕ್ಸ್​ ಸಿಡಿಸಲು ಎಡವಿದ ಕೊಹ್ಲಿ 24 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಬಾರಿಸಿ 29 ರನ್​ಗೆ ಔಟ್ ಆದರು. ಬಳಿಕ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್​ 19 ಎಸೆತಗಳಲ್ಲಿ 30 ರನ್ ಚಚ್ಚಿದರು.





    ಆಕರ್ಷಕ ಅರ್ಧಶತಕ ಸಿಡಿಸಿ ಪಡಿಕ್ಕಲ್ ಔಟ್ ಆದರು. 41 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 50 ರನ್ ಗಳಿಸಿದರು. ಕ್ರಿಸ್ ಮೊರೀಸ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ ಸೊನ್ನೆ ಸುತ್ತಿದರು. ಕೊನೆಯ ಹಂತದಲ್ಲಿ ಎಬಿಡಿ ಹಾಗೂ ಶಿವಂ ದುಬೆ ತಂಡದ ರನ್ ಗತಿ ಏರಿಸಲು ಸಹಾಯ ಮಾಡಿದರು. ಅದರಲ್ಲೂ ಎಬಿಡಿ ಎಂದಿನಂತೆ ಸ್ಫೋಟಕ ಆಟವಾಡಿದರು. ದುಬೆ 11 ಎಸೆತಗಳಲ್ಲಿ 17 ರನ್ ಗಳಿಸಿದರು. ಎಬಿಡಿ ಕೇವಲ 21 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ನೊಂದಿಗೆ 35 ರನ್ ಚಚ್ಚಿದರು.

    ಅಂತಿಮವಾಗಿ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಡೆಲ್ಲಿ ಪರ ಆನ್ರಿಚ್ ನಾರ್ಟ್ಜೆ​ 3, ಕಗಿಸೊ ರಬಾಡ 2 ವಿಕೆಟ್ ಕಿತ್ತರೆ, ಆರ್. ಅಶ್ವಿನ್ 1 ವಿಕೆಟ್ ಪಡೆದರು.

    ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಜೋಷ್ ಫಿಲಿಪ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿ.ಕೀ), ಶಿವಂ ದುಬೆ, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ಶಹ್ಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್.

    ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಡೆನಿಯಲ್ ಸ್ಯಾಮ್ಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.
    Published by:Vinay Bhat
    First published: