DC vs RCB, IPL 2020: ಡೆಲ್ಲಿಗೆ ಭರ್ಜರಿ ಜಯ: ಸೋತರೂ ಪ್ಲೇ ಆಫ್​ಗೆ ಲಗ್ಗೆಯಿಟ್ಟ ಆರ್​ಸಿಬಿ

IPL 2020, Delhi Capitals vs Royal Challengers Bangalore: ಈ ಸಂದರ್ಭ ಒಂದಾದ ಶಿಖರ್ ಧವನ್ ಹಾಗೂ ಅಜಿಂಕ್ಯಾ ರಹಾನೆ ಭರ್ಜರಿ ಜೊತೆಯಾಟ ಆಡಿದರು. ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ಬರೋಬ್ಬರಿ 88 ರನ್​ಗಳ ಜೊತೆಯಾಟ ಆಡಿ ತಂಡದ ಗೆಲುವನ್ನ ಹತ್ತಿರ ಮಾಡಿತು.

DC

DC

 • Share this:
  ಅಬುಧಾಬಿ (ನ. 02): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 55ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ರಹಾನೆ-ಧವನ್ ಆಕರ್ಷಕ ಅರ್ಧಶತಕದ ನೆರವಿನಿಂದ ಅಯ್ಯರ್ ಪಡೆ 6 ವಿಕೆಟ್​ಗಳ ಜಯದೊಂದಿಗೆ ಪ್ಲೇ ಆಫ್​ಗೆ ಪ್ರವೇಶ ಪಡೆದಿದೆ. ಇತ್ತ ಆರ್​ಸಿಬಿ ಮತ್ತೆ ಕಳಪೆ ಪ್ರದರ್ಶನ ತೋರಿ ಸೋಲುಂಡಿತಾದರೂ ಪ್ಲೇ ಆಫ್ ಪ್ರವೇಶಿಸಿದೆ.

  ಆರ್​​ಸಿಬಿ ನೀಡಿದ್ದ 153 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ 2ನೇ ಓವರ್​ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಪೃಥ್ವಿ ಶಾ(9) ಕ್ಲೀನ್ ಬೌಲ್ಡ್ ಆದರು.

  ಈ ಸಂದರ್ಭ ಒಂದಾದ ಶಿಖರ್ ಧವನ್ ಹಾಗೂ ಅಜಿಂಕ್ಯಾ ರಹಾನೆ ಭರ್ಜರಿ ಜೊತೆಯಾಟ ಆಡಿದರು. ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ಬರೋಬ್ಬರಿ 88 ರನ್​ಗಳ ಜೊತೆಯಾಟ ಆಡಿ ತಂಡದ ಗೆಲುವನ್ನ ಹತ್ತಿರ ಮಾಡಿತು. ಅದರಲ್ಲೂ ಧವನ್ ಫಾರ್ಮ್​ಗೆ ಮರಳಿ ಆಕರ್ಷಕ ಅರ್ಧಶತಕ ಬಾರಿಸಿದರು. ಅರ್ಧಶತಕದ ಬಳಿಕ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ಧವನ್ 41 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 54 ರನ್ ಗಳಿಸಿ ಔಟ್ ಆದರು.

  ನಾಯಕ ಶ್ರೇಯಸ್ ಅಯ್ಯರ್ ಆಟ ಕೇವಲ 7 ರನ್​ಗೆ ಅಂತ್ಯವಾಯಿತು. ರಹಾನೆ ಆಕರ್ಷಕ ಅರ್ಧಶಕ ಬಾರಿಸಿ ಅಯ್ಯರ್ ಬೆನ್ನಲ್ಲೇ ನಿರ್ಗಮಿಸಿದರು. ರಹಾನೆ 46 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 60 ರನ್ ಗಳಿಸಿದರು.

  ಅಂತಿಮ ಹಂತದಲ್ಲಿ ರಿಷಭ್ ಪಂತ್(ಅಜೇಯ 8) ಹಾಗೂ ಮಾರ್ಕಸ್ ಸ್ಟಾಯಿನಿಸ್(ಅಜೇಯ 10) ಜೊತೆಯಾಗಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

  ಡೆಲ್ಲಿ 19 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಜೊತೆಗೆ ಎರಡನೇ ತಂಡವಾಗಿ ಪ್ಲೇ ಆಫ್​ಗೂ ಲಗ್ಗೆಯಿಟ್ಟಿತು. ಆರ್​​ಸಿಬಿ ಪರ ಶಹ್ಬಾಜ್ ಅಹ್ಮದ್ 2, ಮೊಹಮ್ಮದ್ ಸಿರಾಜ್ ಹಾಗೂ ಸುಂದರ್ ತಲಾ 1 ವಿಕೆಟ್ ಪಡೆದರು.

  ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ನಿಧಾನಗತಿಯಲ್ಲಿ ರನ್ ಕಲೆಹಾಕಲು ಪ್ರಾರಂಭಿಸಿದ ಓಪನರ್​ಗಳು 5ನೇ ಓವರ್​ನಲ್ಲಿ ಜೋಶ್ ಫಿಲಿಪ್(12) ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಒಂದಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಜೊತೆಯಾಟ ಆಡಿದರು.

  ಆರಂಭಿಕ ಆಘಾತದಿಂದ ತಂಡವನ್ನು ಪಾರುಮಾಡಿದ ಈ ಜೋಡಿ 57 ರನ್​ಗಳ ಕಾಣಿಕೆ ನೀಡಿತು. ಆದರೆ, ಅಶ್ವಿನ್ ಬೌಲಿಂಗ್​ನಲ್ಲಿ ಸಿಕ್ಸ್​ ಸಿಡಿಸಲು ಎಡವಿದ ಕೊಹ್ಲಿ 24 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಬಾರಿಸಿ 29 ರನ್​ಗೆ ಔಟ್ ಆದರು. ಬಳಿಕ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್​ 19 ಎಸೆತಗಳಲ್ಲಿ 30 ರನ್ ಚಚ್ಚಿದರು.

  ಆಕರ್ಷಕ ಅರ್ಧಶತಕ ಸಿಡಿಸಿ ಪಡಿಕ್ಕಲ್ ಔಟ್ ಆದರು. 41 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 50 ರನ್ ಗಳಿಸಿದರು. ಕ್ರಿಸ್ ಮೊರೀಸ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ ಸೊನ್ನೆ ಸುತ್ತಿದರು. ಕೊನೆಯ ಹಂತದಲ್ಲಿ ಎಬಿಡಿ ಹಾಗೂ ಶಿವಂ ದುಬೆ ತಂಡದ ರನ್ ಗತಿ ಏರಿಸಲು ಸಹಾಯ ಮಾಡಿದರು. ಅದರಲ್ಲೂ ಎಬಿಡಿ ಎಂದಿನಂತೆ ಸ್ಫೋಟಕ ಆಟವಾಡಿದರು. ದುಬೆ 11 ಎಸೆತಗಳಲ್ಲಿ 17 ರನ್ ಗಳಿಸಿದರು. ಎಬಿಡಿ ಕೇವಲ 21 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ನೊಂದಿಗೆ 35 ರನ್ ಚಚ್ಚಿದರು.

  ಅಂತಿಮವಾಗಿ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಡೆಲ್ಲಿ ಪರ ಆನ್ರಿಚ್ ನಾರ್ಟ್ಜೆ​ 3, ಕಗಿಸೊ ರಬಾಡ 2 ವಿಕೆಟ್ ಕಿತ್ತರೆ, ಆರ್. ಅಶ್ವಿನ್ 1 ವಿಕೆಟ್ ಪಡೆದರು.
  Published by:Vinay Bhat
  First published: