DC vs MI, IPL 2020 Live Score: ಬುಮ್ರಾ-ಬೌಲ್ಟ್​ ಬೌಲಿಂಗ್ ದಾಳಿಗೆ ಡೆಲ್ಲಿ ತತ್ತರ: 110-9

IPL 2020, Delhi Capitals vs Mumbai Indians Live Score: ಉಭಯ ತಂಡಗಳು ಈರೆಗೆ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 13 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 12 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ.

DC vs MI Live Score Updates

DC vs MI Live Score Updates

 • Share this:
  ದುಬೈ(ಅ. 31): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಧಾರಣ ಮೊತ್ತ ಕಲೆಹಾಕಿದೆ. ಜಸ್​ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್​ ಬೆಂಕಿಯ ಚೆಂಡಿಗೆ ತತ್ತರಿಸಿದ ಅಯ್ಯರ್ ಪಡೆ 20 ಓವರ್​ಗಳಲ್ಲಿ ಕೇವಲ 110 ರನ್ ಗಳಿಸಿದೆ.

  ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಟ್ರೆಂಟ್ ಬೌಲ್ಟ್ ಬೌಲಿಂಗ್​ನಲ್ಲಿ ಶಿಖರ್ ಧವನ್ ಶೂನ್ಯಕ್ಕೆ ನಿರ್ಗಮಿಸಿದರೆ, ಕಮ್​ಬ್ಯಾಕ್ ಮಾಡಲು ಮತ್ತೆ ಎಡವಿದ ಪೃಥ್ವಿ ಶಾ 10 ರನ್​ಗೆ ಬ್ಯಾಟ್ ಕೆಳಗಿಟ್ಟರು.

  ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಜೊತೆಗೂಡಿ 35 ರನ್​ಗಳ ಕಾಣಿಕೆ ನೀಡಿದರಷ್ಟೆ. ಅಯ್ಯರ್ 25 ರನ್​ಗೆ ಔಟ್ ಆದರೆ, ಪಂತ್ 21 ರನ್ ಗಳಿಸಿ ನಿರ್ಗಮಿಸಿದರು. ಮಾರ್ಕಸ್ ಸ್ಟಾಯಿನಿಸ್ 2 ರನ್​ಗೆ ಬ್ಯಾಟ್ ಕೆಳಗಿಟ್ಟರು. ಶಿಮ್ರೋನ್ ಹೆಟ್ಮೇರ್ 11 ಹಾಗೂ ಹರ್ಷಲ್ ಪಟೇಲ್ 5 ರನ್ ಗಳಿಸಿ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದರು.

  ಬಳಿಕ ಬಂದ ಬ್ಯಟ್ಸ್​ಮನ್​ಗಳು ಯಾರು ತಂಡದ ರನ್ ಗತಿ ಏರಿಸಲು ಹೋರಾಟ ನಡೆಸಲಿಲ್ಲ. ಅಂತಿಮವಾಗಿ ಡೆಲ್ಲಿ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತಷ್ಟೆ, ಮುಂಬೈ ಪರ ಬುಮ್ರಾ ಹಾಗೂ ಬೌಲ್ಟ್​ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ನಥನ್ ಕಲ್ಟರ್ ಹಾಗೂ ರಾಹುಲ್ ಚಹಾರ್ 1 ವಿಕೆಟ್ ಪಡೆದರು.

  ಮುಂಬೈ ಖಾಯಂ ನಾಯಕ ರೋಹಿತ್ ಶರ್ಮಾ ಇಂಜುರಿಯಿಂದ ಗುಣಮುಖರಾಗದ ಕಾರಣ ಇಂದಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ.

  ಮುಂಬೈ ಇಂಡಿಯನ್ಸ್‌: ಕ್ವಿಂಟನ್ಡಿ ಕಾಕ್‌(ವಿ.ಕೀ), ಇಶಾನ್ ಕಿಶನ್, ಸೂರ್ಯಕುಮಾರ್ಯಾದವ್, ಸೌರಭ್ ತಿವಾರಿ, ಕೀರನ್ಪೊಲಾರ್ಡ್‌ (ನಾಯಕ), ಕ್ರುನಾಲ್ಪಾಂಡ್ಯ, ರಾಹುಲ್ಚಹರ್, ನಥನ್ ಕಲ್ಟರ್ ನೈಲ್, ಜಯಂತ್ ಯಾದವ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ಬೌಲ್ಟ್‌.

  ಇತ್ತ ಡೆಲ್ಲಿ ತಂಡದಲ್ಲೂ ಪ್ರಮುಖ ಬದಲಾವಣೆ ಮಾಡಲಾಗಿದೆ. ಕನ್ನಡಿದ ಪ್ರವೀಣ್ ದುಬೆ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ.

  ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವಿನ್, ಪ್ರವೀಣ್ ದುಬೆ, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.

  ಹಾಲಿ ಚಾಂಪಿಯನ್ ಮುಂಬೈ ತಂಡ ಈಗಾಗಲೆ ಪ್ಲೇಆಫ್ ಖಾತ್ರಿಪಡಿಸಿಕೊಂಡಿದೆ. ಇತ್ತ ಆರಂಭದಲ್ಲಿ ಜಯದ ನಾಗಲೋಟ ಕಂಡಿದ್ದ ಡೆಲ್ಲಿ ಸದ್ಯ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ. ಪ್ಲೇ ಆಫ್ ಖಚಿತ ಪಡಿಸಿಕೊಳ್ಳಲು ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

  ಪ್ರಮುಖವಾಗಿ ಡೆಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ಅಜಿಂಕ್ಯಾ ರಹಾನೆ ಸಂಪೂರ್ಣ ಫಾರ್ಮ್​ ಕಳೆದುಕೊಂಡಿದ್ದಾರೆ. ಧವನ್ ಕೂಡ ಬೇಗನೆ ಔಟ್ ಆಗುತ್ತಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕನ ಆಟವಾಡುತ್ತಿಲ್ಲ. ರಿಷಭ್ ಪಂತ್ ಕಳೆದ ಪಂದ್ಯದಲ್ಲಿ ಕೊಂಚ ಬ್ಯಾಟ್ ಬೀಸಿದ್ದರಷ್ಟೆ.

  ಕಳೆದ ಪಂದ್ಯದಲ್ಲಿ ಡೆಲ್ಲಿ ಬೌಲರ್​ಗಳು ಕೂಡ ದುಬಾರಿಯಾಗಿದ್ದರು. ಕಗಿಸೊ ರಬಾಡ, ನೋರ್ಟ್ಜೆ, ಅಕ್ಸರ್​​ ಪಟೇಲ್, ಆರ್.ಅಶ್ವಿನ್, ಸ್ಟೋಯ್ನಿಸ್​ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ.

  ಇತ್ತ ಮುಂಬೈ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಪ್ರಚಂಡ ಫಾರ್ಮ್​ನಲ್ಲಿದೆ. ಡಿ ಕಾಕ್, ಸೂರ್ಯಕುಮಾರ್ ಯಾದವ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದಾರೆ. ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ, ಟ್ರೆಂಟ್‌ ಬೌಲ್ಟ್, ಜೇಮ್ಸ್‌ ಪ್ಯಾಟಿನ್ಸನ್‌, ರಾಹುಲ್‌ ಚಹಾರ್‌ ಅದ್ಭುತವಾಗಿ ಸ್ಪೆಲ್​ ಮಾಡುತ್ತಿದ್ದಾರೆ.

  ಉಭಯ ತಂಡಗಳು ಇಲ್ಲಿಯವರೆಗೆ ಐಪಿಎಲ್​ನಲ್ಲಿ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 13 ಪಂದ್ಯಗಳಲ್ಲಿ ಮುಂಬೈ ತಂಡ ಗೆಲುವು ಕಂಡಿದ್ರೆ, 12 ಪಂದ್ಯಗಳಲ್ಲಿ ಡೆಲ್ಲಿ ತಂಡ ಜಯ ಸಾಧಿಸಿದೆ.
  Published by:Vinay Bhat
  First published: