IPL

  • associate partner
HOME » NEWS » Ipl » IPL 2020 DC VS MI LIVE CRICKET SCORE DELHI CAPITALS VS MUMBAI INDIANS DC 110 9 MI GOOD START VB

DC vs MI, IPL 2020 Live Score: ಗೆಲುವಿನತ್ತ ಮುಂಬೈ ಇಂಡಿಯನ್ಸ್

IPL 2020, Delhi Capitals vs Mumbai Indians Live Score: ಉಭಯ ತಂಡಗಳು ಈರೆಗೆ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 13 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 12 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ.

news18-kannada
Updated:October 31, 2020, 6:08 PM IST
DC vs MI, IPL 2020 Live Score: ಗೆಲುವಿನತ್ತ ಮುಂಬೈ ಇಂಡಿಯನ್ಸ್
DC vs MI Live Score Updates
  • Share this:
ದುಬೈ(ಅ. 31): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಧಾರಣ ಮೊತ್ತ ಕಲೆಹಾಕಿದೆ. ಜಸ್​ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್​ ಬೆಂಕಿಯ ಚೆಂಡಿಗೆ ತತ್ತರಿಸಿದ ಅಯ್ಯರ್ ಪಡೆ 20 ಓವರ್​ಗಳಲ್ಲಿ ಕೇವಲ 110 ರನ್ ಗಳಿಸಿದೆ.

ಸದ್ಯ ಸುಲಭ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಭರ್ಜರಿ ಆರಂಭ ಪಡೆದುಕೊಂಡಿದೆ. ಓಪನರ್​ಗಳಾದ ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಟ್ರೆಂಟ್ ಬೌಲ್ಟ್ ಬೌಲಿಂಗ್​ನಲ್ಲಿ ಶಿಖರ್ ಧವನ್ ಶೂನ್ಯಕ್ಕೆ ನಿರ್ಗಮಿಸಿದರೆ, ಕಮ್​ಬ್ಯಾಕ್ ಮಾಡಲು ಮತ್ತೆ ಎಡವಿದ ಪೃಥ್ವಿ ಶಾ 10 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಜೊತೆಗೂಡಿ 35 ರನ್​ಗಳ ಕಾಣಿಕೆ ನೀಡಿದರಷ್ಟೆ. ಅಯ್ಯರ್ 25 ರನ್​ಗೆ ಔಟ್ ಆದರೆ, ಪಂತ್ 21 ರನ್ ಗಳಿಸಿ ನಿರ್ಗಮಿಸಿದರು. ಮಾರ್ಕಸ್ ಸ್ಟಾಯಿನಿಸ್ 2 ರನ್​ಗೆ ಬ್ಯಾಟ್ ಕೆಳಗಿಟ್ಟರು. ಶಿಮ್ರೋನ್ ಹೆಟ್ಮೇರ್ 11 ಹಾಗೂ ಹರ್ಷಲ್ ಪಟೇಲ್ 5 ರನ್ ಗಳಿಸಿ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದರು.

ಬಳಿಕ ಬಂದ ಬ್ಯಟ್ಸ್​ಮನ್​ಗಳು ಯಾರು ತಂಡದ ರನ್ ಗತಿ ಏರಿಸಲು ಹೋರಾಟ ನಡೆಸಲಿಲ್ಲ. ಅಂತಿಮವಾಗಿ ಡೆಲ್ಲಿ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತಷ್ಟೆ, ಮುಂಬೈ ಪರ ಬುಮ್ರಾ ಹಾಗೂ ಬೌಲ್ಟ್​ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ನಥನ್ ಕಲ್ಟರ್ ಹಾಗೂ ರಾಹುಲ್ ಚಹಾರ್ 1 ವಿಕೆಟ್ ಪಡೆದರು.

ಮುಂಬೈ ಖಾಯಂ ನಾಯಕ ರೋಹಿತ್ ಶರ್ಮಾ ಇಂಜುರಿಯಿಂದ ಗುಣಮುಖರಾಗದ ಕಾರಣ ಇಂದಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ.

ಮುಂಬೈ ಇಂಡಿಯನ್ಸ್‌: ಕ್ವಿಂಟನ್‌ ಡಿ ಕಾಕ್‌(ವಿ.ಕೀ), ಇಶಾನ್ ಕಿಶನ್, ಸೂರ್ಯಕುಮಾರ್‌ ಯಾದವ್‌, ಸೌರಭ್ ತಿವಾರಿ, ಕೀರನ್‌ ಪೊಲಾರ್ಡ್‌ (ನಾಯಕ), ಕ್ರುನಾಲ್‌ ಪಾಂಡ್ಯ, ರಾಹುಲ್‌ ಚಹರ್, ನಥನ್ ಕಲ್ಟರ್ ನೈಲ್, ಜಯಂತ್ ಯಾದವ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್‌ ಬೌಲ್ಟ್‌.

ಇತ್ತ ಡೆಲ್ಲಿ ತಂಡದಲ್ಲೂ ಪ್ರಮುಖ ಬದಲಾವಣೆ ಮಾಡಲಾಗಿದೆ. ಕನ್ನಡಿದ ಪ್ರವೀಣ್ ದುಬೆ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವಿನ್, ಪ್ರವೀಣ್ ದುಬೆ, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.
Published by: Vinay Bhat
First published: October 31, 2020, 5:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories