IPL 2020 LIVE Score, DC vs KKR: ಕೆಕೆಆರ್ 6 ವಿಕೆಟ್ ಪತನ: ಸೋಲಿನ ಸುಳಿಯಲ್ಲಿ ಕಾರ್ತಿಕ್ ಪಡೆ

IPL 2020, Delhi vs Kolkata Live Score: ಡೆಲ್ಲಿ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಇಂಜುರಿಗೆ ತುತ್ತಾಗಿದ್ದ ಆರ್. ಅಶ್ವಿನ್ ಗುಣಮುಖರಾಗಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು ಅಕ್ಷರ್ ಪಟೇಲ್ ಸ್ಥಾನ ಕಳೆದುಕೊಂಡಿದ್ದಾರೆ.

DC

DC

 • Share this:
  ಶಾರ್ಜಾ (ಅ. 03): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 16ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಪೃಥ್ವಿ ಶಾ, ನಾಯಕ ಶ್ರೇಯಸ್ ಅಯ್ಯರ್  ಹಾಗೂ  ರಿಷಭ್ ಪಂತ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡ ಕೆಕೆಆರ್ ತಂಡಕ್ಕೆ ಗೆಲ್ಲಲು 229 ರನ್​ಗಳ ಕಠಿಣ ಟಾರ್ಗೆಟ್ ನೀಡಿತು.

  ಸವಾಲಿನ ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲೇ ಸುನಿಲ್ ನರೈನ್(3) ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಶುಭ್ಮನ್ ಗಿಲ್ ಹಾಗೂ ನಿತೀಶ್ ರಾಣ ಜೊತೆಗೂಡಿ ತಂಡದ ರನ್ ಗತಿಯನ್ನು ಏರಿಸಿದರು. ಈ ಜೋಡಿ 64 ರನ್​ಗಳ ಕಾಣಿಕೆ ನೀಡಿದರು,

  ಆದರೆ, 28 ರನ್ ಗಳಿಸಿದ್ದಾಗ ಗಿಲ್ ಔಟ್ ಆದರೆ, ನಂತರ ಬಂದ ಆ್ಯಂಡ್ರೋ ರಸೆಲ್ ಮತ್ತೆ ನಿರಾಸೆ ಮೂಡಿಸಿ 13 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಬಳಿಕ ನಿತೀಶ್ ರಾಣ ಅವರು ನಾಯಕ ದಿನೇಶ್ ಕಾರ್ತಿಕ್ ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಆದರೆ, ಅರ್ಧಶತಕ ಬಾರಿಸಿದ ಬೆನ್ನಲ್ಲೆ ರಾಣ(58) ಔಟ್ ಆದರೆ, ಮುಂದಿನ ಎಸೆತದಲ್ಲೇ ಕಾರ್ತಿಕ್(6) ಕೂಡ ಪೆವಿಲಿಯನ್ ಸೇರಿಕೊಂಡರು.

  ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ತಂಡಕ್ಕೆ ರನ್ ತಂದುಕೊಟ್ಟರು.

  RCB vs RR: ವಿವಾದಕ್ಕೆ ಕಾರಣವಾಯ್ತು ಚಹಾಲ್ ಹಿಡಿದ ಆ ಒಂದು ಕ್ಯಾಚ್: ಇಲ್ಲಿದೆ ವಿಡಿಯೋ

  ಪವರ್ ಪ್ಲೇ ಓವರ್​ನಲ್ಲೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ, 6ನೇ ಓವರ್​ನಲ್ಲಿ ಚೆನ್ನಾಗಿಯೆ ಆಡುತ್ತಿದ್ದ ಧವನ್ 26 ರನ್ ಗಳಿಸಿ ಔಟ್ ಆದರು. ಬಳಿಕ ನಾಯಕ ಶ್ರೇಯಸ್ ಅಯ್ಯರ್ ಜೊತೆಗೂಡಿದ ಪೃಥ್ವಿ ಶಾ ಅಮೋಘ ಆಟವಾಡಿದರು. ಕೇವಲ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 66 ರನ್ ಚಚ್ಚಿದರು.

  ಶಾ ಔಟ್ ಆದ ಬಳಿಕ ಅಯ್ಯರ್ ಆರ್ಭಟಿಸಲು ಶುರುಮಾಡಿದರು. ರಿಷಭ್ ಪಂತ್ ಜೊತೆಗೂಡಿ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಮನಬಂದಂತೆ ಬ್ಯಾಟ್ ಬೀಸಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು. 72 ರನ್​ಗಳ ಬಿರುಸಿನ ಜೊತೆಯಾಟ ಆಡಿದರು.

  ಪಂತ್ ಕೇವಲ 17 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್  ಬಾರಿಸಿ 38 ರನ್ ಸಿಡಿಸಿದರು. ಅಯ್ಯರ್ ಕೇವಲ 38 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಜೇಯ 88 ರನ್ ಚಚ್ಚಿದರು.

  ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಬಾರಿಸಿತು. ಕೆಕೆಆರ್ ಪರ ಆ್ಯಂಡ್ರೋ ರಸೆಲ್ 2, ಕಮಲೇಶ್ ನಾಗರಕೋಟಿ ಹಾಗೂ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.

  RCB vs RR: ರಾಯಲ್ಸ್ ಎದುರು ಮಿಂಚಿದ ಚಾಲೆಂಜರ್ಸ್​: ಅಂಕಪಟ್ಟಿಯಲ್ಲಿ ಆರ್​ಸಿಬಿ ಟಾಪ್!

  ಇಂದಿನ ಪಂದ್ಯಕ್ಕೆ ಕೋಲ್ಕತ್ತಾ ಪರ ಕುಲ್ದೀಪ್ ಯಾದವ್ ಬದಲು ರಾಹುಲ್ ತ್ರಿಪಾಠಿ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತ ಡೆಲ್ಲಿ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ.

  ಇಂಜುರಿಗೆ ತುತ್ತಾಗಿದ್ದ ಆರ್. ಅಶ್ವಿನ್ ಗುಣಮುಖರಾಗಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು ಅಕ್ಷರ್ ಪಟೇಲ್ ಸ್ಥಾನ ಕಳೆದುಕೊಂಡಿದ್ದಾರೆ. ಇನ್ನೊಂದು ಬದಲಾವಣೆಯಲ್ಲಿ ಇಶಾಂತ್ ಶರ್ಮಾ ಬದಲು ಹರ್ಷಲ್ ಪಟೇಲ್ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

  ದೆಹಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ , ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಕಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ, ಅಮಿತ್ ಮಿಶ್ರಾ.

  ಕೋಲ್ಕತ್ತಾ ನೈಟ್ ರೈಡರ್ಸ್​: ಶುಭಮಾನ್ ಗಿಲ್, ಸುನೀಲ್ ನಾರಾಯಣ್, ನಿತೀಶ್ ರಾಣಾ, ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ನಾಯಕ, ವಿಕೀ), ಈಯಾನ್ ಮಾರ್ಗನ್, ರಾಹುಲ್ ತ್ರಿಪಾಠಿ, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ವರುಣ್ ಚಕ್ರವರ್ತಿ.
  Published by:Vinay Bhat
  First published: