IPL

  • associate partner

IPL 2020, DC vs CSK: ಧವನ್ ಶತಕದ ವೈಭವ, ಹೀರೋ ಆದ ಅಕ್ಷರ್: ರೋಚಕ ಪಂದ್ಯದಲ್ಲಿ ಡೆಲ್ಲಿಗೆ ಜಯ

IPL 2020, Delhi Capitals vs Chennai Super Kings: ಅಂತಿಮ ಹಂತದಲ್ಲಿ ಧವನ್ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಆದರೆ, ಚೆನ್ನೈ ಬೌಲರ್​ಗಳ ಅದ್ಭುತ ಪ್ರದರ್ಶನದಿಂದ ಕೊನೆಯ ಓವರ್​ನಲ್ಲಿ ಗೆಲ್ಲಲು 17 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಕ್ರೀಸ್​ಗೆ ಬಂದ ಅಕ್ಷರ್ ಪಟೇಲ್​ ಪಂದ್ಯದ ಗತಿಯನ್ನೇ ಬದಲಾಯಿಸಿದರು.

news18-kannada
Updated:October 17, 2020, 11:22 PM IST
IPL 2020, DC vs CSK: ಧವನ್ ಶತಕದ ವೈಭವ, ಹೀರೋ ಆದ ಅಕ್ಷರ್: ರೋಚಕ ಪಂದ್ಯದಲ್ಲಿ ಡೆಲ್ಲಿಗೆ ಜಯ
ಶಿಖರ್ ಧವನ್
  • Share this:
ಶಾರ್ಜಾ (ಅ. 17): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿ ಐಪಿಎಲ್​ನ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಶಿಖರ್ ಧವನ್ ಅವರ ವೈಭವದ ಶತಕ ಹಾಗೂ ಅಕ್ಷರ್ ಪಟೇಲ್ ಅವರ ಕೊನೆಯ ಓವರ್​ನ ಬ್ಯಾಟಿಂಗ್ ನೆರವಿನಿಂದ ಅಯ್ಯರ್ ಪಡೆ 5 ವಿಕೆಟ್​ಗಳ ಜಯ ಸಾಧಿಸಿದೆ. ಇದರೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಸಿಎಸ್​ಕೆ 6ನೇ ಸೋಲು ಕಂಡಿದೆ.

ಚೆನ್ನೈ ನೀಡಿದ್ದ 180 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಇನ್ನಿಂಗ್ಸ್​ನ 2ನೇ ಎಸೆತದಲ್ಲೇ ಸೊನ್ನೆ ಸುತ್ತಿದರೆ, ಅಜಿಂಕ್ಯ ರಹಾನೆ 8 ರನ್​ಗೆ ಔಟ್ ಆಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು.

RR vs RCB: ಎಬಿಡಿ ಅಬ್ಬರದ ಮುಂದೆ ಮರೆಯದಿರಿ ಚೊಚ್ಚಲ ಪಂದ್ಯದಲ್ಲೇ ಆರ್​ಸಿಬಿ ಹುಡುಗನ ರೋಚಕ ಕ್ಯಾಚ್

ಈ ಸಂದರ್ಭ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಉತ್ತಮ ಜೊತೆಯಾಟ ಆಡಿದರು. ಸಿಎಸ್​ಕೆ ಬೌಲರ್​ಗಳನ್ನು ಕಾಡಿದ ಈ ಜೋಡಿ ತಂಡಕ್ಕೆ ಆಸರೆಯಾಯಿತು. 68 ರನ್​ಗಳ ಕಾಣಿಕೆ ನೀಡಿತು. ಆದರೆ, ಇಂಜುರಿಯಿಂದ ಬಳಲುತ್ತಿದ್ದ ಅಯ್ಯರ್ 23 ಎಸೆತಗಳಲ್ಲಿ 23 ರನ್ ಬಾರಿಸಿ ಔಟ್ ಆದರು. ಬಳಿಕ ಅರ್ಧಶತಕ ಸಿಡಿಸಿದ್ದ ಧವನ್ ಜೊತೆಯಾದ ಮಾರ್ಕಸ್ ಸ್ಟಾಯಿನಿಸ್ 24 ರನ್ ಸಿಡಿಸಿ ಔಟ್ ಆದರು.

ಅಂತಿಮ ಹಂತದಲ್ಲಿ ಧವನ್ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಆದರೆ, ಚೆನ್ನೈ ಬೌಲರ್​ಗಳ ಅದ್ಭುತ ಪ್ರದರ್ಶನದಿಂದ ಕೊನೆಯ ಓವರ್​ನಲ್ಲಿ ಗೆಲ್ಲಲು 17 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಕ್ರೀಸ್​ಗೆ ಬಂದ ಅಕ್ಷರ್ ಪಟೇಲ್​ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೇವಲ 5 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿ ಅಜೇಯ 21 ರನ್ ಚಚ್ಚಿ ತಂಡಕ್ಕೆ ಗೆಲುವು ತಂದಿಟ್ಟರು.

ಧವನ್ 58 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 101 ರನ್ ಗಳಿಸಿದರು. ಡೆಲ್ಲಿ 19.5 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ಕಂಡಿತು. ಚೆನ್ನೈ ಪರ ದೀಪಲ್ ಚಹಾರ್ 2 ವಿಕೆಟ್ ಕಿತ್ತರೆ, ಸ್ಯಾಮ್ ಕುರ್ರನ್, ಶಾರ್ದೂಲ್ ಠಾಕೂರ್ ಹಾಗೂ ಡ್ವೇನ್ ಬ್ರಾವೋ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಆರಂಭದಲ್ಲೇ ಸ್ಯಾಮ್ ಕುರ್ರನ್(0) ವಿಕೆಟ್ ಕಳೆದುಕೊಂಡಿತು. ಬಳಿಕ ಜೊತೆಯಾದ ಶೇನ್ ವಾಟ್ಸನ್ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಈ ಜೋಡಿ 67 ಎಸೆತಗಳಲ್ಲಿ 87 ರನ್​ಗಳ ಕಾಣಿಕೆ ನೀಡಿತು.ಚೆನ್ನಾಗಿಯೆ ಆಡುತ್ತಿದ್ದ ವಾಟ್ಸನ್ 28 ಎಸೆತಗಳಲ್ಲಿ 36 ರನ್​ಗೆ ಔಟ್ ಆದರು. ಡುಪ್ಲೆಸಿಸ್ 47 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ 58 ರನ್ ಗಳಿಸಿದರು. ಎಂ ಎಸ್ ಧೋನಿ 3 ರನ್​ಗೆ ಬ್ಯಾಟ್ ಕೆಳಗಿಟ್ಟರು.





IPL 2020, RR vs RCB: ಸೋಲುವ ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಡಿವಿಲಿಯರ್ಸ್​: ಆರ್​ಸಿಬಿಗೆ 7 ವಿಕೆಟ್​ಗಳ ಭರ್ಜರಿ ಜಯ

ಕೊನೆಹಂತದಲ್ಲಿ ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಬ್ಯಾಟ್ ಬೀಸಿ ತಂಡದ ಮೊತ್ತವನ್ನು ಏರಿಸಿದರು. ಸ್ಫೋಟಕ ಆಟವಾಡಿದ ಈ ಜೋಡಿ 21 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟ ಆಡಿತು. ರಾಯುಡು 25 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಬಾರಿಸಿ ಅಜೇಯ 45 ರನ್ ಚಚ್ಚಿದರೆ, ಜಡೇಜಾ 13 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ ಅಜೇಯ 33 ರನ್ ಗಳಿಸಿದರು.

ಅಂತಿಮವಾಗಿ ಚೆನ್ನೈ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಡೆಲ್ಲಿ ಪರ ಅನ್ರಿಕ್ ನಾರ್ಟ್ಜೆ 2 ವಿಕೆಟ್ ಕಿತ್ತರೆ, ಕಗಿಸೊ ರಬಾಡ ಹಾಗೂ ತುಷಾರ್ ದೇಶಪಾಂಡೆ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: October 17, 2020, 11:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading