IPL 2020: ಕೊಹ್ಲಿ, ರೋಹಿತ್​ಗಿಂತ ಮೊದಲೇ ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್

ವಾರ್ನರ್ ಅವರು ಐಪಿಎಲ್​ನಲ್ಲಿ ಈವರೆಗೆ 132 ಪಂದ್ಯಗಳಿಂದ 4 ಶತಕ ಹಾಗೂ 46 ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ 50 ಬಾರಿ 50+ ರನ್ ಬಾರಿಸಿ ನೂತನ ಸಾಧನೆ ಮಾಡಿದ್ದಾರೆ.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

 • Share this:
  ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿತು. ಬ್ಯಾಟಿಂಗ್​ನಲ್ಲಿ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋ ಮಿಂಚಿದರೆ, ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಸನ್​ರೈಸರ್ಸ್​ 69 ರನ್​ಗಳ ಜಯ ಕಂಡಿತು. ನಿಕೋಲಸ್ ಪೂರನ್ ಏಕಾಂಗಿ ಹೋರಾಟ ಪಂಜಾಬ್ ತಂಡಕ್ಕೆ ಯಾವುದೇ ಪ್ರಯೋಜನ ನೀಡಲಿಲ್ಲ.

  ಸನ್​ರೈಸರ್ಸ್​ ಹೈದರಾಬಾದ್ ತಂಡ 201 ರನ್​ಗಳ ಬೃಹತ್ ಮೊತ್ತ ಕಲೆಹಾಕಲು ಕಾರಣ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​​ಸ್ಟೋ. 160 ರನ್​ಗಳ ಅಮೋಘ ಜೊತೆಯಾಟ ಆಡಿದ ಈ ಜೋಡಿ ದಾಖಲೆ ಬರೆಯಿತು. 55 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಿಡಿಸಿ ಬೈರ್​ಸ್ಟೋ 97 ರನ್​ಗೆ ಔಟ್ ಆದರೆ, ವಾರ್ನರ್ 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 52 ರನ್​ ಗಳಿಸಿದರು.

  RR vs DC: ಇಂದು ರಾಜಸ್ಥಾನ್​-ಡೆಲ್ಲಿ ಮುಖಾಮುಖಿ; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತಾರಾ ಕ್ಯಾಪಿಟಲ್ಸ್​?

  ಈ ಮೂಲಕ ವಾರ್ನರ್ ಅವರು ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಮಾಡಿದರು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಈವರೆಗೆ ಅತಿ ಹೆಚ್ಚು ಬಾರಿ 50+ ರನ್ ಕಲೆಹಾಕಿದ ಬ್ಯಾಟ್ಸ್​ಮನ್​ ಎಂದ ಸಾಧನೆ ಮಾಡಿದರು.

  ವಾರ್ನರ್ ಅವರು ಐಪಿಎಲ್​ನಲ್ಲಿ ಈವರೆಗೆ 132 ಪಂದ್ಯಗಳಿಂದ 4 ಶತಕ ಹಾಗೂ 46 ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ 50 ಬಾರಿ 50+ ರನ್ ಬಾರಿಸಿ ನೂತನ ಸಾಧನೆ ಮಾಡಿದ್ದಾರೆ. 2ನೇ ಸ್ಥಾನದಲ್ಲಿರುವ ವಿರಾಟ್​ ಕೊಹ್ಲಿ 42( 37 ಅರ್ಧಶತಕ, 5 ಶತಕ), ಸುರೇಶ್​ ರೈನಾ 39 (38 ಅರ್ಧಶತಕ ಹಾಗೂ 1 ಶತಕ), ರೋಹಿತ್ ಶರ್ಮಾ 39( 38 ಅರ್ಧಶತಕ ಹಾಗೂ 1 ಶತಕ) ನಂತರದ ಸ್ಥಾನದಲ್ಲಿದ್ದಾರೆ.

  KL Rahul: ಚೊಚ್ಚಲ ನಾಯಕತ್ವದಲ್ಲೇ ಎಡವಿದ್ರಾ ರಾಹುಲ್: ಗೇಲ್ ಬಿಟ್ಟು‌ ಮ್ಯಾಕ್ಸ್‌ವೆಲ್ ಆಡಿಸಿದ್ದು ಸರಿಯೇ?

  ನಿನ್ನೆಯ ಪಂದ್ಯದಲ್ಲಿ ಹೈದರಾಬಾದ್ ನೀಡಿದ್ದ202 ರನ್​ಗಳ ಗುರಿ ಬೆನ್ನತ್ತಿದ ಕಿಂಗ್ಸ್‌ ಇಲೆವೆನ್ ಪಂಜಾಬ್‌ ಆರಂಭದಲ್ಲೇ ತನ್ನ ಇನ್‌ಫಾರ್ಮ್‌ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್‌ ಅವರನ್ನು ರನ್‌ಔಟ್‌ ಔಟ್‌ ಮೂಲಕ ಕಳೆದುಕೊಂಡಿತು. ಇದರೊಂದಿಗೆ ಪಂಜಾಬ್‌ ತನ್ನ ಪತನದ ಹಾದಿ ತುಳಿದು, 16.5 ಓವರ್‌ಗಳಲ್ಲಿ 12 ರನ್‌ಗಳಿಗೆ ಆಲ್‌ಔಟ್‌ ಆಯಿತು.

  ಏಕಾಂಗಿ ಹೋರಾಟ ನಡೆಸಿದ ನಿಕೋಲಸ್‌ ಪೂರನ್‌, 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರಲ್ಲದೆ 7 ಸಿಕ್ಸರ್‌ಗಳ ಬಲದಿಂದ 37 ಎಸೆತಗಳಲ್ಲಿ 77 ರನ್‌ ಸಿಡಿಸಿದರು. ಇದು ತಂಡದ ಸೋಲಿನ ಅಂತರವನ್ನು ತಗ್ಗಿಸುವುದಕ್ಕಷ್ಟೇ ನೆರವಾಯಿತು. ಪೂರನ್‌ ಹೊರತಾಗಿ ಪಂಜಾಬ್‌ ತಂಡದ ಉಳಿದ ಯಾವ ಬ್ಯಾಟ್ಸ್‌ಮನ್‌ಗಳು ಕೂಡ 15 ರನ್‌ಗಳ ಗಡಿ ದಾಟಲಿಲ್ಲ.
  Published by:Vinay Bhat
  First published: