IPL 2020, CSK vs SRH: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಧೋನಿ ಪಡೆಗೆ ಇಂದು​​ ಹೈದರಾಬಾದ್ ಸವಾಲು

ಈವರೆಗೆ ಉಭಯ ತಂಡಗಳು ಐಪಿಎಲ್​ನಲ್ಲಿ ಒಟ್ಟು 13 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 10 ಪಂದ್ಯಗಳಲ್ಲಿ ಗೆಲುವು ಕಂಡು ಮೇಲುಗೈ ಸಾಧಿಸಿದ್ದರೆ, ಸನ್ ​ರೈಸರ್ಸ್​ ತಂಡ ಕೇವಲ 3 ಪಂದ್ಯಗಳಲ್ಲಿ ಜಯ ಕಂಡಿದೆ.

MS Dhoni

MS Dhoni

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಈ ಬಾರಿಯ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನದೊಂದಿಗೆ ಟೂರ್ನಿ ಆರಂಭಿಸಿದೆ. ಆಡಿರುವ ಮೂರು ಪಂದ್ಯಗಳ ಪೈಕಿ ಮೊದಲ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದ್ದು ಬಿಟ್ಟರೆ ನಂತರ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಇಂದು ನಡೆಯಲಿರುವ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯ ಧೋನಿ ಪಡೆಗೆ ಮುಖ್ಯವಾಗಿದೆ. ಸಿಎಸ್​ಕೆ ಗೆಲುವಿನ ಲಯಕ್ಕೆ ಮರಳಬೇಕಿದೆ.

  ಶುಕ್ರವಾರ ನಡೆಯಲಿರುವ ಐಪಿಎಲ್-13ರ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಧೋನಿ ಪಡೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಸೋಲು-ಗೆಲುವಿನಲ್ಲಿ ಸಮಾನದುಃಖಿಗಳಾಗಿರುವ ಉಭಯ ತಂಡಗಳು ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿವೆ.

  KXIP vs MI: ಮುಂಬೈ ಇಂಡಿಯನ್ಸ್ ಮುಂದೆ ಮಂಡಿಯೂರಿದ ಪಂಜಾಬ್ ಕಿಂಗ್ಸ್​

  ಐಪಿಎಲ್ ಇತಿಹಾಸದಲ್ಲಿ ಅಪರೂಪಕ್ಕೆಂಬಂತೆ ಕೊನೇ ಸ್ಥಾನಕ್ಕೆ ಕುಸಿದಿರುವ ಎಂಎಸ್ ಧೋನಿ ಪಡೆ, ಈ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಕಾಣುವ ಹಂಬಲದಲ್ಲಿದೆ. ಈ ಪಂದ್ಯದಲ್ಲಿ ಸೋತ ತಂಡ ಕೊನೇ ಸ್ಥಾನ ಪಡೆಯಲಿದೆ.

  ಐಪಿಎಲ್ ಇತಿಹಾಸದಲ್ಲೇ ಬಲಿಷ್ಠ ತಂಡವೆಂದು ಗುರುತಿಸಿಕೊಂಡಿದ್ದ ಸಿಎಸ್​ಕೆ ಕಳೆದ 2 ಪಂದ್ಯಗಳಿಂದ ನೀರಸ ಪ್ರದರ್ಶನ ತೋರುತ್ತಿದೆ. ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್ ಫಾರ್ಮ್​ ಕಳೆದುಕೊಂಡಿದ್ದು ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗುತ್ತಿದ್ದಾರೆ.

  ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಫಾಫ್ ಡುಪ್ಲೆಸಿಸ್ ತಮ್ಮ ಕೈಲಾದಷ್ಟು ಹೋರಾಟ ನಡೆಸುತ್ತಿದ್ದಾರಷ್ಟೆ. ನಾಯಕ ಧೋನಿಯನ್ನು ಹೊರತುಪಡಿಸಿ ಯಾವೊಬ್ಬ ಆಟಗಾರರೂ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ತೋರುತ್ತಿಲ್ಲ.

  Rohit Sharma: ದಾಖಲೆಯೊಂದಿಗೆ IPL ರನ್ ಸರದಾರರ ಪಟ್ಟಿಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ

  ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಅಂಬಟಿ ರಾಯುಡು ಕೂಡ ಇಂಜುರಿಗೆ ತುತ್ತಾಗಿರುವುದು ತಂಡಕ್ಕೆ ಹಿನ್ನೆಡೆಯಾಗಿದೆ. ಇತ್ತ ಬೌಲಿಂಗ್​ನಲ್ಲೂ ಸಿಎಸ್​ಕೆ ಆಟಗಾರರು ಸುಧಾರಿಸಬೇಕಿದೆ. ಜಡೇಜಾ, ಪೀಯೂಷ್‌ ಚಾವ್ಲಾ , ದೀಪಕ್‌ ಚಹಾರ್‌ ದುಬಾರಿಯಾಗುತ್ತಿದ್ದಾರೆ. ಹೀಗಾಗಿ ಬೌಲಿಂಗ್​ನಲ್ಲಿ ಇಂದಿನ ಪಂದ್ಯಕ್ಕೆ ಬದಲಾವಣೆ ಖಚಿತವಾಗಿದೆ. ಇಮ್ರಾನ್ ತಾಹೀರ್ ಕಣಕ್ಕಿಳಿಯಬಹುದು.

  ಇತ್ತ ಹೈದರಾಬಾದ್‌ ತಂಡದಲ್ಲೂ ಕೂಡ ಬ್ಯಾಟಿಂಗ್‌ ವೈಫ‌ಲ್ಯ ಎದ್ದು ಕಾಣುತ್ತಿದೆ. ಜಾನಿ ಬೈರ್ ‌ಸ್ಟೋವ್, ವಾರ್ನರ್‌, ಕೇನ್‌ ವಿಲಿಯಮ್ಸನ್‌ ಹೊರತುಪಡಿಸಿ ಉಳಿದ ಆಟಗಾರರು ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ಮನೀಷ್‌ ಪಾಂಡೆ ಕೂಡ ಕಳೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದರು. ರಶೀದ್ ಖಾನ್ ಬಿಟ್ಟು ಉಳಿದ ಹೈದರಾಬಾದ್ ಬೌಲರ್​ಗಳು ದುಬಾರಿಯಾಗುತ್ತಿದ್ದು, ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

  ಈವರೆಗೆ ಉಭಯ ತಂಡಗಳು ಐಪಿಎಲ್​ನಲ್ಲಿ ಒಟ್ಟು 13 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 10 ಪಂದ್ಯಗಳಲ್ಲಿ ಗೆಲುವು ಕಂಡು ಮೇಲುಗೈ ಸಾಧಿಸಿದ್ದರೆ, ಸನ್ ​ರೈಸರ್ಸ್​ ತಂಡ ಕೇವಲ 3 ಪಂದ್ಯಗಳಲ್ಲಿ ಜಯ ಕಂಡಿದೆ.

  ಚೆನ್ನೈ ಸಂಭಾವ್ಯ ತಂಡ: ಮುರಳಿ ವಿಜಯ್/ಋತುರಾಜ್ ಗಾಯಕ್ವಾಡ್, ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೀ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್/ಡ್ವೈನ್ ಬ್ರಾವೊ, ಪೀಯುಷ್ ಚಾವ್ಲಾ, ದೀಪಕ್ ಚಹರ್, ಇಮ್ರಾನ್ ತಾಹಿರ್.

  ಹೈದರಾಬಾದ್ ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್/ವಿಜಯ್ ಶಂಕರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಖಲೀಲ್ ಅಹಮದ್.
  Published by:Vinay Bhat
  First published: