IPL 2020, CSK vs RR: ಇಂದು ಚೆನ್ನೈ-ರಾಜಸ್ಥಾನ್ ನಡುಗೆ ಬಿಗ್ ಫೈಟ್: ಗೆದ್ದವರಿಗಷ್ಟೆ ಉಳಿಗಾಲ

ಕಳೆದ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ತೊಟ್ಟಿದ್ದ ಸ್ಟಾರ್ ಸ್ಪಿನ್ನರ್ ಇಮ್ರಾನ್ ತಾಹಿರ್ ಇಂದು ಕಣಕ್ಕಿಳಿಯುವ ಅಂದಾಜಿದೆ. ಡ್ವೇನ್ ಬ್ರಾವೋ ಗಾಯಕ್ಕೆ ತುತ್ತಾದ ಕಾರಣ ಇವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

CSK vs RR

CSK vs RR

 • Share this:
  13ನೇ ಆವೃತ್ತಿಯ ಐಪಿಎಲ್​ನಲ್ಲಿ ಇಂದು ನಡೆಯಲಿರುವ 37ನೇ ಪಂದ್ಯದಲ್ಲಿ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಉಭಯ ತಂಡಗಳಿಗೆ ಗೆದ್ದರಷ್ಟೇ ಉಳಿಗಾಲ. ಹೀಗಾಗಿ ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆಯಿದೆ.

  ಚೆನ್ನೈ-ರಾಜಸ್ಥಾನ್ ಸೋಲು-ಗೆಲುವನ್ನು ಈವರೆಗೆ ಸಮಾನವಾಗಿ ಹಂಚಿಕೊಂಡಿದೆ. ಎರಡೂ ತಂಡಗಳು ಇಲ್ಲಿಯವರಗೆ ಒಟ್ಟು ಒಂಭತ್ತು ಪಂದ್ಯಗಳನ್ನಾಡಿದ್ದು, 6 ಪಂದ್ಯಗಳಲ್ಲಿ ಸೊಲು ಕಂಡಿದ್ದರೆ, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಪಾಯಿಂಟ್ ಪಟ್ಟಿಯಲ್ಲಿ 7 ಮತ್ತು 8ನೇ ಸ್ಥಾನದಲ್ಲಿವೆ. ಪ್ಲೇ ಆಫ್​ ಆಸೆ ಜೀವಂತವಾಗಿರಿಸಿಕೊಳ್ಳಲು ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿವೆ.

  ಐಪಿಎಲ್​ನಲ್ಲಿ ಎರಡು ಸೂಪರ್​ ಓವರ್ ಆದಾಗ ಪಾಲಿಸಬೇಕು ಕೆಲ ಕಟ್ಟುನಿಟ್ಟಿನ ನಿಯಮಗಳು; ಏನವು?

  ಕಳೆದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಅಂತಿಮ ಹಂತದಲ್ಲಿ ಸೋತಿತ್ತು. ಅಲ್ಲದೆ ಧೋನಿ ಪಡೆಗೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿದೆ. ಡ್ವೇನ್ ಬ್ರಾವೋ ಕೆಲ ವಾರಗಳ ಕಾಲ ತಂಡಕ್ಕೆ ಅಲಭ್ಯರಾಗಿದ್ದಾರೆ. ತಂಡ ಉತ್ತಮ ಆರಂಭ ಪಡೆದುಕೊಳ್ಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸುವ ಆಟಗಾರರು ಯಾರೂ ಇಲ್ಲ. ಸ್ವತಃ ನಾಯಕನೇ ಪ್ರತಿ ಪಂದ್ಯದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ.

  ಇನ್ನೂ ಕಳೆದ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ತೊಟ್ಟಿದ್ದ ಸ್ಟಾರ್ ಸ್ಪಿನ್ನರ್ ಇಮ್ರಾನ್ ತಾಹಿರ್ ಇಂದು ಕಣಕ್ಕಿಳಿಯುವ ಅಂದಾಜಿದೆ. ಡ್ವೇನ್ ಬ್ರಾವೋ ಗಾಯಕ್ಕೆ ತುತ್ತಾದ ಕಾರಣ ಇವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

  ಇತ್ತ ರಾಜಸ್ಥಾನ್ ರಾಯಲ್ಸ್ ಕೂಡ ಇದೇ ಸಮಸ್ಯೆ ಎದುರಿಸುತ್ತಿದೆ. ಕಳೆದ ಪಂದ್ಯದಲ್ಲಿ ಓಪನರ್ ಆಗಿ ಬಂದ ರಾಬಿನ್ ಉತ್ತಪ್ಪ ಕೊಂಚ ಯಶಸ್ಸು ಕಂಡಿದ್ದರು. ಉಳಿದಂತೆ ಸ್ಮಿತ್, ಬೆನ್ ಸ್ಟೋಕ್ಸ್​, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್ ಹೀಗೆ ಸ್ಟಾರ್ ಬ್ಯಾಟ್ಸ್​ಮನ್​ಗಳೇ ತಂಡದ ಗೆಲುವಿಗೆ ಹೋರಾಟ ನಡೆಸುತ್ತಿಲ್ಲ.

  ಧೋನಿ ಮಾಡಿದಾಗ ಹೊಗಳುತ್ತೀರಾ, ಈಗೇಕೆ ಸುಮ್ಮನಿದ್ದೀರಾ?; ರಾಹುಲ್​ ರನೌಟ್​ ಮಾಡಿದ ವಿಡಿಯೋ ವೈರಲ್

  ಬೌಲಿಂಗ್‌ನಲ್ಲಿ ಜಯದೇವ್ ಉನಾದ್ಕತ್ ದುಬಾರಿಯಾದ ಪರಿಣಾಮವೇ ಆರ್‌ಸಿಬಿ ಎದುರು ಗೆಲುವು ಕಡೇ ಕ್ಷಣದಲ್ಲಿ ತಪ್ಪಿತ್ತು. ಆರ್ಚರ್ ಸಾರಥ್ಯದ ಬೌಲಿಂಗ್ ಪಡೆಗೂ ಸಿಎಸ್‌ಕೆ ಕಟ್ಟಿಹಾಕುವುದೇ ದೊಡ್ಡ ಸವಾಲಾಗಿದೆ.

  ಎರಡು ತಂಡಗಳು ಐಪಿಎಲ್​ನಲ್ಲಿ ಈವರೆಗೆ ಒಟ್ಟು 23 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ 14 ಬಾರಿ ಗೆಲುವು ಪಡೆದಿದ್ದರೆ, ಉಳಿದ 9ರಲ್ಲಿ ರಾಜಸ್ಥಾನ​ ತಂಡ ಜಯ ಸಾಧಿಸಿದೆ.
  Published by:Vinay Bhat
  First published: