CSK vs RR, IPL 2020: ಚೆನ್ನೈ ಮತ್ತೆ ಕಳಪೆ ಬ್ಯಾಟಿಂಗ್: ರಾಜಸ್ಥಾನಕ್ಕೆ 126 ರನ್ಸ್ ಟಾರ್ಗೆಟ್

IPL 2020, Chennai Super Kings vs Rajasthan Royals: ಕಳೆದ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿದ್ದ ಅಂಬಟಿ ರಾಯುಡು ಈ ಬಾರಿ ಕೇವಲ 13 ರನ್​ಗೆ ಸುಸ್ತಾದರು. ಈ ಮೂಲಕ 56 ರನ್ ಆಗುವ ಹೊತ್ತಿಗೆ ಚೆನ್ನೈ ತಂಡ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡಿತು.

CSK vs RR

CSK vs RR

 • Share this:
  ಅಬುಧಾಬಿ (ಅ. 19): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಐಪಿಎಲ್ 13ನೇ ಆವೃತ್ತಿಯ 37ನೇ ಪಂದ್ಯ ನಡೆಯುತ್ತಿದ್ದು, ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ​ ಸಾಧಾರಣ ಮೊತ್ತ ಕಲೆಹಾಕಿದೆಯಷ್ಟೆ. ನಾಯಕ ಎಂ ಎಸ್ ಧೋನಿ ಹಾಗೂ ರವೀಂದ್ರ ಜಡೇಜಾ ಜೊತೆಯಾಟದ ನೆರವಿನಿಂದ ಸಿಎಸ್​ಕೆ 20 ಓವರ್​ಗಳಲ್ಲಿ 125 ರನ್ ಗಳಿಸಿದೆ.

  ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್​ ಆಗಿ ಸ್ಯಾಮ್ ಕುರ್ರನ್ ಜೊತೆ ಕಣಕ್ಕಿಳಿದ ಫಾಪ್ ಡುಪ್ಲೆಸಿಸ್ ಕೇವಲ 10 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ನಂತರ ಬಂದ ಶೇನ್ ವಾಟ್ಸನ್ ಕೂಡ 8 ರನ್​ಗೆ ಬ್ಯಾಟ್ ಕೆಳಗಿಟ್ಟರು. ಕುರ್ರನ್ 25 ಎಸೆತಗಳಲ್ಲಿ 22 ರನ್ ಬಾರಿಸಿ ನಿರ್ಗಮಿಸಿದರು.

  ಕಳೆದ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿದ್ದ ಅಂಬಟಿ ರಾಯುಡು ಈ ಬಾರಿ ಕೇವಲ 13 ರನ್​ಗೆ ಸುಸ್ತಾದರು. ಈ ಮೂಲಕ 56 ರನ್ ಆಗುವ ಹೊತ್ತಿಗೆ ಚೆನ್ನೈ ತಂಡ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಒಂದಾದ ರವೀಂದ್ರ ಜಡೇಜಾ ಹಾಗೂ ನಾಯಕ ಎಂ ಎಸ್ ಧೋನಿ ಎಚ್ಚರಿಕೆಯ ಆಟ ಪ್ರದರ್ಶಿಸಿದರು.

  ವಿಕೆಟ್ ಕಳೆದುಕೊಳ್ಳದಂತೆ ರನ್ ಕಲೆಹಾಕಿದ ಈ ಜೋಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಅರ್ಧಶತಕದ ಜೊತೆಯಾಟ ಆಡಿತು. ಆದರೆ, 18ನೇ ಓವರ್​ನಲ್ಲಿ 2 ರನ್ ಕಲೆಹಾಕಲೋಗಿ ಧೋನಿ ರನೌಟ್​ಗೆ ಬಲಿಯಾದರು. ಎಂಎಸ್​ಡಿ 28 ಎಸೆತಗಳಲ್ಲಿ 28 ರನ್ ಗಳಿಸಿದರು.

  ಕೊನೆ ಹಂತದಲ್ಲಿ ಜಡೇಜಾ ಒಂದಿಷ್ಟು ರನ್ ಕಲೆಹಾಕಿದರು. ಜಡೇಜಾ 30 ಎಸೆತಗಳಲ್ಲಿ 35 ರನ್ ಬಾರಿಸಿದರು. ಅಂತಿಮವಾಗಿ ಚೆನ್ನೈ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ರಾಜಸ್ಥಾನ್ ಪರ ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ ಶ್ರೇಯಸ್ ಗೋಪಾಲ್ ಹಾಗೂ ರಾಹುಲ್ ತೇವಾಟಿಯ ತಲಾ 1 ವಿಕೆಟ್ ಪಡೆದರು.

  ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ಅಂಕಿತ್ ರಜಪೂತ್.

  ಚೆನ್ನೈ ಸೂಪರ್‌ ಕಿಂಗ್ಸ್: ಶೇನ್‌ ವ್ಯಾಟ್ಸನ್‌, ಫಾಪ್ ಡುಪ್ಲೆಸಿಸ್, ಅಂಬಟಿ ರಾಯುಡು, ಎಂಎಸ್‌ ಧೋನಿ (ನಾಯಕ, ವಿಕೆಟ್‌ ಕೀಪರ್‌), ಕೇದರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್‌ ಚಹರ್‌, ಶಾರ್ದೂಲ್ ಠಾಕೂರ್, ಪಿಯೂಷ್ ಚಾವ್ಲಾ, ಜೋಷ್ ಹ್ಯಾಜ್ಲೆವುಡ್.
  Published by:Vinay Bhat
  First published: