IPL

  • associate partner

CSK vs RR, IPL 2020 Live Score: ಧೋನಿ ಔಟ್: ಚೆನ್ನೈ 5 ವಿಕೆಟ್ ಪತನ

IPL 2020, Chennai Super Kings vs Rajasthan Royals Live Score: ಎರಡು ತಂಡಗಳು ಈವರೆಗೆ ಒಟ್ಟು 23 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ 14 ಬಾರಿ, ಉಳಿದ 9ರಲ್ಲಿ ರಾಜಸ್ಥಾನ​ ತಂಡ ಜಯ ಸಾಧಿಸಿದೆ.

news18-kannada
Updated:October 19, 2020, 9:01 PM IST
CSK vs RR, IPL 2020 Live Score: ಧೋನಿ ಔಟ್: ಚೆನ್ನೈ 5 ವಿಕೆಟ್ ಪತನ
CSK vs RR Live Score Updates
  • Share this:
ಅಬುಧಾಬಿ (ಅ. 19): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಐಪಿಎಲ್ 13ನೇ ಆವೃತ್ತಿಯ 37ನೇ ಪಂದ್ಯ ನಡೆಯುತ್ತಿದ್ದು, ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ.

ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದಿರುವ ಚೆನ್ನೈ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಓಪನರ್​ ಆಗಿ ಸ್ಯಾಮ್ ಕುರ್ರನ್ ಜೊತೆ ಕಣಕ್ಕಿಳಿದ ಫಾಪ್ ಡುಪ್ಲೆಸಿಸ್ ಕೇವಲ 10 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ನಂತರ ಬಂದ ಶೇನ್ ವಾಟ್ಸನ್ ಕೂಡ 8 ರನ್​ಗೆ ಬ್ಯಾಟ್ ಕೆಳಗಿಟ್ಟರು. ಕುರ್ರನ್ 25 ಎಸೆತಗಳಲ್ಲಿ 22 ರನ್ ಬಾರಿಸಿ ನಿರ್ಗಮಿಸಿದರು.

ಕಳೆದ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿದ್ದ ಅಂಬಟಿ ರಾಯುಡು ಈ ಬಾರಿ ಕೇವಲ 13 ರನ್​ಗೆ ಸುಸ್ತಾದರು. ಈ ಮೂಲಕ 56 ರನ್ ಆಗುವ ಹೊತ್ತಿಗೆ ಚೆನ್ನೈ ತಂಡ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಸದ್ಯ ಕ್ರೀಸ್​ನಲ್ಲಿ ರವೀಂದ್ರ ಜಡೇಜಾ ಹಾಗೂ ನಾಯಕ ಎಂ ಎಸ್ ಧೋನಿ ಇದ್ದಾರೆ.

ಇಂದಿನ ಪಂದ್ಯಕ್ಕೆ ಸಿಎಸ್​ಕೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು ಡ್ವೇನ್ ಬ್ರಾವೋ ಬದಲು ಜೋಷ್ ಹ್ಯಾಜ್ಲೆವುಡ್ ಕಣಕ್ಕಿಳಿಯುತ್ತಿದ್ದಾರೆ. ಜೊತೆಗೆ ಪಿಯೂಷ್ ಚಾವ್ಲಾ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಇತ್ತ ರಾಜಸ್ಥಾನ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಜಯದೇವ್ ಉನಾದ್ಕಟ್ ಬದಲು ಅಂಕಿತ್ ರಜಪೂತ್ ಆಡುತ್ತಿದ್ದಾರೆ.

ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ಅಂಕಿತ್ ರಜಪೂತ್.

ಚೆನ್ನೈ ಸೂಪರ್‌ ಕಿಂಗ್ಸ್: ಶೇನ್‌ ವ್ಯಾಟ್ಸನ್‌, ಫಾಪ್ ಡುಪ್ಲೆಸಿಸ್, ಅಂಬಟಿ ರಾಯುಡು, ಎಂಎಸ್‌ ಧೋನಿ (ನಾಯಕ, ವಿಕೆಟ್‌ ಕೀಪರ್‌), ಕೇದರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್‌ ಚಹರ್‌, ಶಾರ್ದೂಲ್ ಠಾಕೂರ್, ಪಿಯೂಷ್ ಚಾವ್ಲಾ, ಜೋಷ್ ಹ್ಯಾಜ್ಲೆವುಡ್.


ಚೆನ್ನೈ-ರಾಜಸ್ಥಾನ್ ಸೋಲು-ಗೆಲುವನ್ನು ಈವರೆಗೆ ಸಮಾನವಾಗಿ ಹಂಚಿಕೊಂಡಿದೆ. ಎರಡೂ ತಂಡಗಳು ಇಲ್ಲಿಯವರಗೆ ಒಟ್ಟು ಒಂಭತ್ತು ಪಂದ್ಯಗಳನ್ನಾಡಿದ್ದು, 6 ಪಂದ್ಯಗಳಲ್ಲಿ ಸೊಲು ಕಂಡಿದ್ದರೆ, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಪಾಯಿಂಟ್ ಪಟ್ಟಿಯಲ್ಲಿ 7 ಮತ್ತು 8ನೇ ಸ್ಥಾನದಲ್ಲಿವೆ. ಪ್ಲೇ ಆಫ್​ ಆಸೆ ಜೀವಂತವಾಗಿರಿಸಿಕೊಳ್ಳಲು ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿವೆ.

ಕಳೆದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಅಂತಿಮ ಹಂತದಲ್ಲಿ ಸೋತಿತ್ತು. ಅಲ್ಲದೆ ಧೋನಿ ಪಡೆಗೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿದೆ. ಡ್ವೇನ್ ಬ್ರಾವೋ ಕೆಲ ವಾರಗಳ ಕಾಲ ತಂಡಕ್ಕೆ ಅಲಭ್ಯರಾಗಿದ್ದಾರೆ. ತಂಡ ಉತ್ತಮ ಆರಂಭ ಪಡೆದುಕೊಳ್ಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸುವ ಆಟಗಾರರು ಯಾರೂ ಇಲ್ಲ. ಸ್ವತಃ ನಾಯಕನೇ ಪ್ರತಿ ಪಂದ್ಯದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ.

ಇತ್ತ ರಾಜಸ್ಥಾನ್ ರಾಯಲ್ಸ್ ಕೂಡ ಇದೇ ಸಮಸ್ಯೆ ಎದುರಿಸುತ್ತಿದೆ. ಕಳೆದ ಪಂದ್ಯದಲ್ಲಿ ಓಪನರ್ ಆಗಿ ಬಂದ ರಾಬಿನ್ ಉತ್ತಪ್ಪ ಕೊಂಚ ಯಶಸ್ಸು ಕಂಡಿದ್ದರು. ಉಳಿದಂತೆ ಸ್ಮಿತ್, ಬೆನ್ ಸ್ಟೋಕ್ಸ್​, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್ ಹೀಗೆ ಸ್ಟಾರ್ ಬ್ಯಾಟ್ಸ್​ಮನ್​ಗಳೇ ತಂಡದ ಗೆಲುವಿಗೆ ಹೋರಾಟ ನಡೆಸುತ್ತಿಲ್ಲ.

ಬೌಲಿಂಗ್‌ನಲ್ಲಿ ಜಯದೇವ್ ಉನಾದ್ಕತ್ ದುಬಾರಿಯಾದ ಪರಿಣಾಮವೇ ಆರ್‌ಸಿಬಿ ಎದುರು ಗೆಲುವು ಕಡೇ ಕ್ಷಣದಲ್ಲಿ ತಪ್ಪಿತ್ತು. ಆರ್ಚರ್ ಸಾರಥ್ಯದ ಬೌಲಿಂಗ್ ಪಡೆಗೂ ಸಿಎಸ್‌ಕೆ ಕಟ್ಟಿಹಾಕುವುದೇ ದೊಡ್ಡ ಸವಾಲಾಗಿದೆ.

ಎರಡು ತಂಡಗಳು ಐಪಿಎಲ್​ನಲ್ಲಿ ಈವರೆಗೆ ಒಟ್ಟು 23 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ 14 ಬಾರಿ ಗೆಲುವು ಪಡೆದಿದ್ದರೆ, ಉಳಿದ 9ರಲ್ಲಿ ರಾಜಸ್ಥಾನ​ ತಂಡ ಜಯ ಸಾಧಿಸಿದೆ.
Published by: Vinay Bhat
First published: October 19, 2020, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading