IPL 2020, CSK vs RCB: ಕೊಹ್ಲಿ ಆಕರ್ಷಕ ಅರ್ಧಶತಕ: ಚೆನ್ನೈಗೆ 146 ರನ್​ಗಳ​ ಟಾರ್ಗೆಟ್

Chennai Super Kings (CSK) vs Royal Challengers Bangalore (RCB) Live Updates: ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 25 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 15 ಬಾರಿ ಗೆಲುವು ದಾಖಲಿಸಿದರೆ, ಆರ್​ಸಿಬಿ ಕೇವಲ 9 ರಲ್ಲಿ ಮಾತ್ರ ವಿಜಯ ಸಾಧಿಸಿದೆ. ಹಾಗೆಯೇ ಒಂದು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.

ಆರ್​ಸಿಬಿ

ಆರ್​ಸಿಬಿ

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್​ನ 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿವೆ. ದುಬೈ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ್ದ ಫಿಂಚ್ (15), ಸ್ಯಾಮ್ ಕರ್ರನ್ ಎಸೆತದಲ್ಲಿ ಕ್ಯಾಚ್ ನೀಡಿ 4ನೇ ಓವರ್​ನಲ್ಲಿ ನಿರ್ಗಮಿಸಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಉತ್ತಮವಾಗಿ ಬ್ಯಾಟ್ ಬೀಸಿದ ಪಡಿಕ್ಕಲ್ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 46 ಕ್ಕೇರಿಸಿದರು. ಆದರೆ ಇದರ ಬೆನ್ನಲ್ಲೇ ಸ್ಯಾಂಟ್ನರ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಫಾಫ್ ಡು ಪ್ಲೆಸಿಸ್ ಹಿಡಿದ ಅದ್ಭುತ ಕ್ಯಾಚ್​ಗೆ ದೇವದತ್ ಪಡಿಕ್ಕಲ್ (22) ಬಲಿಯಾದರು.

    ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಅದರಂತೆ ಮೊದಲ ಹತ್ತು ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 72 ಕ್ಕೆ ತಂದು ನಿಲ್ಲಿಸಿದರು. ಅಲ್ಲದೆ ಅರ್ಧಶತಕದ ಜೊತೆಯಾಟದ ಮೂಲಕ 15 ಓವರ್​ ಮುಕ್ತಾಯಕ್ಕೆ ತಂಡದ ಮೊತ್ತವನ್ನು 101ಕ್ಕೇರಿಸಿದರು.

    ಕೊನೆಯ 4 ಓವರ್​ಗಳಿರುವಾಗ ಬಿರುಸಿನ ಆಟಕ್ಕೆ ಮುಂದಾದ ಎಬಿ ಡಿವಿಲಿಯರ್ಸ್​ (39) ಚಹರ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಕೊನೆಯ ಎರಡು ಓವರ್​ಗಳಿರುವಾಗ ನಾಯಕ ಕೊಹ್ಲಿ ಜೊತೆಗೂಡಿದ ಮೊಯೀನ್ ಅಲಿ (1) ಬಂದ ವೇಗದಲ್ಲೇ ಹಿಂತಿರುಗಿದರು. ಆದರೆ ಮತ್ತೊಂದೆಡೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 42 ಎಸೆತಗಳಲ್ಲಿ 38ನೇ ಐಪಿಎಲ್ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಫಾಫ್ ಡುಪ್ಲೆಸಿಸ್ ಮನಮೋಹಕ ಕ್ಯಾಚ್​ಗೆ ಕೊಹ್ಲಿ ನಿರ್ಗಮಿಸಬೇಕಾಯಿತು.

    ಇನ್ನು ಕೊನೆಯ ಮೂರು ಓವರ್​ನಲ್ಲಿ ಕಂಬ್ಯಾಕ್ ಮಾಡಿದ ಸಿಎಸ್​ಕೆ ಬೌಲರುಗಳ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ರನ್​ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾದರು. ಅದರಂತೆ ಡೆತ್ ಓವರ್​ನಲ್ಲಿ ಕೇವಲ 20 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪರಿಣಾಮ RCB ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್​ಗಳಿಸಲಷ್ಟೇ ಶಕ್ತರಾದರು. ಸಿಎಸ್​ಕೆ ಪರ ಸ್ಯಾಮ್ ಕರ್ರನ್ 3 ಓವರ್​ನಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

    ಸ್ಕೋರ್: 145/6

    ಓವರ್: 20



    ಒಂದೆಡೆ ಮೂರು ಸೀಸನ್​ಗಳ ಬಳಿಕ ಆರ್​ಸಿಬಿ ಪ್ಲೇ ಆಫ್​ಗೇರುವ ತವಕದಲ್ಲಿದ್ದರೆ, ಮೂರು ಬಾರಿಯ ಚಾಂಪಿಯನ್ ಸಿಎಸ್​ಕೆ ಇದೇ ಮೊದಲ ಬಾರಿ ಲೀಗ್ ಹಂತದಿಂದಲೇ ಹೊರಬೀಳುವ ಭಯದಲ್ಲಿದೆ. ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇಂದಿನ ಗೆಲುವು ತಂಡದ ಪ್ಲೇ ಆಫ್ ಕನಸನ್ನು ಖಚಿತಪಡಿಸಲಿದೆ. ಆದರೆ ಧೋನಿ ಪಡೆ ಇಂದು ಭರ್ಜರಿ ಜಯಗಳಿಸಿದರೆ ಮಾತ್ರ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಹಾಗೆಯೇ ಉಳಿದ ಪಂದ್ಯಗಳಲ್ಲೂ ಭರ್ಜರಿ ನೆಟ್ ರನ್​ ರೇಟ್ ಗೆಲುವಿನ ಮೂಲಕ ಹಾಗೂ ಉಳಿದ ತಂಡಗಳ ಫಲಿತಾಂಶವನ್ನು ಅವಲಂಭಿಸಿ ಪವಾಡದಿಂದ ಪ್ಲೇ ಆಫ್ ಪ್ರವೇಶಿಸಬಹುದು.


    ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್​ಸಿಬಿ 37 ರನ್​ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಕಣಕ್ಕಿಳಿಯಲಿದೆ. ಅತ್ತ ಧೋನಿ ಪಡೆ ಮುಂಬೈ ವಿರುದ್ಧ ಆಡಿದ ಕೊನೆಯ ಪಂದ್ಯದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡುವ ಮೂಲಕ ಭಾರೀ ನಿರಾಸೆ ಮೂಡಿಸಿದೆ.

    ಇನ್ನು ಕೊಹ್ಲಿ ಪಡೆ ಬ್ಯಾಟಿಂಗ್ ಮತ್ತು ಬೌಲಿಂಗ್ ಉತ್ತಮ ಲಯದಲ್ಲಿದ್ದು, ಸಮತೋಲನ ಆಟದ ಮೂಲಕ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಕೆಕೆಆರ್ ವಿರುದ್ದದ ಕಳೆದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿರುವುದು ಆರ್​ಸಿಬಿ ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಕೆಕೆಆರ್​ ವಿರುದ್ಧ ಮಿಂಚಿದ್ದ ಮೊಹಮದ್​ ಸಿರಾಜ್ ಲಯಕ್ಕೆ ಮರಳಿದರೆ​, ಆರಂಭದಿಂದಲೂ ಆಲ್​ರೌಂಡರ್ ಕ್ರಿಸ್​ ಮೋರಿಸ್ ಮಿಂಚುತ್ತಿದ್ದಾರೆ. ಹಾಗೆಯೇ ಇಸುರು ಉಡಾನ, ಯಜುವೇಂದ್ರ ಚಾಹಲ್​ ಹಾಗೂ ವಾಷಿಂಗ್ಟನ್​ ಸುಂದರ್​ ಒಳಗೊಂಡ ಬೌಲಿಂಗ್​ ಸಂಘಟಿತ ದಾಳಿ ಪ್ರದರ್ಶಿಸುತ್ತಿದೆ. ಇನ್ನು ಬ್ಯಾಟಿಂಗ್​ನಲ್ಲಿ ಆರೋನ್ ಫಿಂಚ್ ವೈಫಲ್ಯ ಹೊರತುಪಡಿಸಿ, ಎಬಿ ಡಿವಿಲಿಯರ್ಸ್​, ವಿರಾಟ್​ ಕೊಹ್ಲಿ, ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದಾರೆ.

    ಮತ್ತೊಂದೆಡೆ ಐಪಿಎಲ್​​ ಇತಿಹಾಸದಲ್ಲಿ ಮೊದಲ ಬಾರಿಗೆ ಲೀಗ್​ ಹಂತದಲ್ಲೇ 8 ಪಂದ್ಯ ಸೋತಿರುವ ಧೋನಿ ಬಳಗಕ್ಕೆ ಈ ಕದನ ಮಾಡು ಇಲ್ಲವೇ ಮಡಿ. ಅತ್ಯುತ್ತಮ ನೆಟ್ ರನ್ ರೇಟ್ ಮೂಲಕ ಗೆದ್ದರೆ, ಪ್ಲೇ ಆಫ್ ಅವಕಾಶವನ್ನು ಎದುರು ನೋಡಬಹುದು. ಇದರ ಹೊರತಾಗಿ ಗೆದ್ದರೆ ಒಂದು ಗೆಲುವು ಎಂಬುದಷ್ಟೇ ಲೆಕ್ಕಕ್ಕೆ ಬರಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಮತ್ತೊಮ್ಮೆ ಯುವ ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ನಡೆಸುವ ಇರಾದೆಯಲ್ಲಿದೆ ಸಿಎಸ್​ಕೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
    Published by:zahir
    First published: