IPL 2020: RCB ಪಡೆಯಲ್ಲಿ ಒಂದು ಬದಲಾವಣೆ ಸಾಧ್ಯತೆ: ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಬೀಗಿರುವ ಆರ್​​ಸಿಬಿ ಇಂದು ಕೂಡ ಅದೇ ಆತ್ಮ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಬೌಲಿಂಗ್ ಪಡೆಯೊಂದಿಗೆ ಇಂದು ಕೂಡ ಕಣಕ್ಕಿಳಿಯಲಿದೆ

csk vs rcb

csk vs rcb

  • Share this:
    IPLನ 44ನೇ ಪಂದ್ಯದಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯವನ್ನು ಗೆದ್ದರೆ ಕೊಹ್ಲಿ ಪಡೆ ಪ್ಲೇ ಆಫ್​ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ. ಹಾಗೆಯೇ ಈ ಪಂದ್ಯದಲ್ಲಿ ಧೋನಿ ಪಡೆ ಸೋತರೆ ಧೋನಿ ಪಡೆಯ ನಿರ್ಗಮನ ಕೂಡ ಅಧಿಕೃತವಾಗಲಿದೆ.

    ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಬೀಗಿರುವ ಆರ್​​ಸಿಬಿ ಇಂದು ಕೂಡ ಅದೇ ಆತ್ಮ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಬೌಲಿಂಗ್ ಪಡೆಯೊಂದಿಗೆ ಇಂದು ಕೂಡ ಕಣಕ್ಕಿಳಿಯಲಿದೆ. ಕೊಲ್ಕತ್ತಾ ವಿರುದ್ಧ ಸಿರಾಜ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದು, ನಾಯಕನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದು, ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಡೌಟ್. ಆದರೆ ಆರಂಭಿಕ ಆಟಗಾರ ಆರೋನ್ ಫಿಂಚ್‌ ವೈಫ‌ಲ್ಯ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಜೋಶ್ ಫಿಲಿಪ್​ಗೆ ಅವಕಾಶ ನೀಡಿದರೂ ಅಚ್ಚರಿಪಡಬೇಕಿಲ್ಲ. ಅಲ್ಲದೆ ಇಸುರು ಉಡಾನ ಸ್ಥಾನದಲ್ಲಿ ಮೊಯೀನ್ ಅಲಿಗೆ ಚಾನ್ಸ್ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

    ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್​ ಮೊದಲ ಸಲ ಲೀಗ್ ಹಂತದಿಂದಲೇ ಹೊರಬೀಳುವ ಸಂಕಟದಲ್ಲಿದೆ. ಒಂದು ವೇಳೆ ಇಂದು ಸೋತರೆ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವೆಂಬ ಕಳಂಕವೂ ತಟ್ಟಲಿದೆ. ಹೀಗಾಗಿ ಧೋನಿ ಪಡೆ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಇನ್ನು ಕಳೆದ ಪಂದ್ಯದಲ್ಲಿ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದ ಧೋನಿ, ಈ ಬಾರಿ ಕೂಡ ಅವಕಾಶ ಸಿಗದಿವರಿಗೆ ಚಾನ್ಸ್ ನೀಡುವ ಸಾಧ್ಯತೆಯಿದೆ. ಅದರಂತೆ ತಾಹಿರ್ ಸ್ಥಾನದಲ್ಲಿ ಸ್ಯಾಂಟ್ನರ್​ಗೆ ಅವಕಾಶ ದೊರೆಯಬಹುದು.
    ಸಂಭಾವ್ಯ ಉಭಯ ತಂಡಗಳು:

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    1. ಆರೋನ್ ಫಿಂಚ್/ಜೋಶ್ ಫಿಲಿಪ್

    2. ದೇವದತ್ ಪಡಿಕ್ಕಲ್

    3. ವಿರಾಟ್ ಕೊಹ್ಲಿ (ನಾಯಕ)

    4. ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್)

    5. ಶಿವಂ ದುಬೆ

    6. ಮೊಯೀನ್ ಅಲಿ

    7. ಕ್ರಿಸ್ ಮೋರಿಸ್

    8. ವಾಷಿಂಗ್ಟನ್ ಸುಂದರ್

    9. ಯಜುವೇಂದ್ರ ಚಹಲ್

    10. ಮೊಹಮ್ಮದ್ ಸಿರಾಜ್

    11. ನವದೀಪ್ ಸೈನಿ

    ಚೆನ್ನೈ ಸೂಪರ್ ಕಿಂಗ್ಸ್

    1. ಶೇನ್ ವ್ಯಾಟ್ಸನ್

    2. ಫಾಫ್ ಡು ಪ್ಲೆಸಿಸ್

    3. ಅಂಬಾಟಿ ರಾಯುಡು

    4. ರುತುರಾಜ್ ಗಾಯಕ್ವಾಡ್

    5. ಎಂ.ಎಸ್.ಧೋನಿ (ನಾಯಕ)

    6. ರವೀಂದ್ರ ಜಡೇಜಾ

    7. ಮಿಚೆಲ್ ಸ್ಯಾಂಟ್ನರ್/ಇಮ್ರಾನ್ ತಾಹಿರ್

    8. ಪಿಯೂಷ್ ಚಾವ್ಲಾ

    9. ದೀಪಕ್ ಚಹರ್

    10. ಸ್ಯಾಮ್ ಕರ್ರನ್

    11. ಶಾರ್ದುಲ್ ಠಾಕೂರ್

    ಪಂದ್ಯದ ಸಮಯ: 3.30

    ಸ್ಥಳ: ದುಬೈ

    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
    Published by:zahir
    First published: