ನಿನ್ನೆ ಶನಿವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ನ 25ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 37 ರನ್ಗಳ ಭರ್ಜರಿ ಜಯ ಸಾಧಿಸಿತು. ಧೋನಿ ಪಡೆಯ ವಿರುದ್ಧ ಬ್ಯಾಟಿಂಗ್ನಲ್ಲಿ ಕೊಹ್ಲಿ ವಿರಾಟ ಪ್ರದರ್ಶನ ತೋರಿದರೆ, ಬೌಲರ್ಗಳ ಸಂಘಟಿತ ಹೋರಾಟದ ನೆರವಿನಿಂದ ಆರ್ಸಿಬಿ ನಾಲ್ಕನೇ ಗೆಲುವು ದಾಖಲಿಸಿತು. ಒಟ್ಟು 8 ಅಂಕದೊಂದಿಗೆ ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದೆ.
ಚೆನ್ನೈ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತಾದರೂ ಬಳಿಕ ನಡೆದಿದ್ದು ವಿರಾಟ್ ಕೊಹ್ಲಿಯ ಒನ್ ಮ್ಯಾನ್ ಶೋ. ಧೋನಿ ಹುಡುಗರ ಬೆವರಿಳಿಸಿದ ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಚೆಂಡನ್ನು ಬೌಂಡರಿ- ಸಿಕ್ಸರ್ಗೆ ಅಟ್ಟಿದರು.
IPL 2020, CSK vs RCB: ಚೊಚ್ಚಲ ಪಂದ್ಯದಲ್ಲಿ ಮೊರೀಸ್ ಮಿಂಚು: ಧೋನಿ ಎದುರು ಗೆದ್ದು ಬೀಗಿದ ಕೊಹ್ಲಿ
ಕೇವಲ 52 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿದ ಕೊಹ್ಲಿ ಅಜೇಯ 90 ರನ್ ಚಚ್ಚಿದರು. ಇವರ ಆಟ ಕಂಡು ಪತ್ನಿ ಅನುಷ್ಕಾ ಶರ್ಮಾ ಪೆವಿಲಿಯನ್ನಿಂದ ಫ್ಲೈಯಿಂಗ್ ಕಿಸ್ ಕೂಡ ಕೊಟ್ಟರು. ಪರಿಣಾಮ ಆರ್ಸಿಬಿ 20 ಓವರ್ನಲ್ಲಿ 169 ರನ್ ಬಾರಿಸಿತು.
ಅಂತಿಮ ಹಂತದಲ್ಲಿ ಕೊಹ್ಲಿ ಆರ್ಭಟಿಸಿದ ಪರಿಣಾಮ ಕೊನೆಯ 5 ಓವರ್ಗಳಲ್ಲಿ ಬರೋಬ್ಬರಿ 74 ರನ್ಗಳು ಹರಿದುಬಂದವು. ಅದರಲ್ಲೂ ಎಬಿ ಡಿವಿಲಿಯರ್ಸ್ ಅವರ ರೀತಿ ಕೊಹ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದ್ದು ನೋಡಲು ಮನಮೋಹಕವಾಗಿತ್ತು. ಸದ್ಯ ಈ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ.
20ನೇ ಓವರ್ನ ಡ್ವೇನ್ ಬ್ರಾವೋ ಅವರ ಮೊದಲ ಎಸೆತದಲ್ಲಿ ಕೊಹ್ಲಿ ಈ ಅದ್ಭುತ ಶಾಟ್ ಹೊಡೆದರು. ಕ್ರೀಸ್ ಬಿಟ್ಟು ಬಂದ ಕೊಹ್ಲಿ ವೈಡ್ ಹೋಗುತ್ತಿದ್ದ ಬಾಲ್ ಅನ್ನು ಎಬಿಡಿ ಅವರ ರೀತಿ ಲೆಗ್ ಎರಿಯಾ ಕಡೆ ಅಟ್ಟಿದರು. ಜೊತೆಗೆ 4 ರನ್ ತಂದುಕೊಟ್ಟರು.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ ಅವರ ಅಜೇಯ 90, ದೇವದತ್ ಪಡಿಕ್ಕಲ್ ಅವರ 33 ಹಾಗೂ ಶಿವಂ ದುಬೆ ಅವರ ಅಜೇಯ 22 ರನ್ಗಳ ನೆರವಿನಿಂದ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು.
Anushka Sharma: ಕೊಹ್ಲಿ-ಅನುಷ್ಕಾ ಮಾಡಿದ ಈ ಸಹಾಯವನ್ನು ಎಂದಿಗೂ ಮರೆಯಲ್ಲ; ಭಾವುಕರಾದ ಕೆಎಲ್ ರಾಹುಲ್
ಟಾರ್ಗೆಟ್ ಬೆನ್ನಟ್ಟಿದ ಸಿಎಸ್ಕೆ ಆರ್ಸಿಬಿ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಅನುಭವಿಸಿತು. ಸಿಎಸ್ಕೆ ಪರ ಅಂಬಟಿ ರಾಯುಡು 42 ರನ್ ಬಾರಿಸಿದರು. ಆರ್ಸಿಬಿ ಪರ ಚೊಚ್ಚಲ ಪಂದ್ಯವನ್ನಾಡಿದ ಕ್ರಿಸ್ ಮೊರೀಸ್ 4 ಓವರ್ನಲ್ಲಿ ಕೇವಲ 19 ರನ್ ನೀಡಿ 3 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ