IPL 2020, CSK vs MI: ನಿರ್ಗಮನ ಬಾಗಿಲಲ್ಲಿ ನಿಂತಿರುವ ಚೆನ್ನೈಗೆ ಮುಂಬೈ ಸವಾಲು: ಯಾರಿಗೆ ಒಲಿಯುತ್ತೆ ಜಯ?

ಚೆನ್ನೈ ಪ್ಲೇ ಆಫ್ ಹಂತಕ್ಕೇರುವುದು ಕಷ್ಟಸಾಧ್ಯ. ಈ ಪಂದ್ಯದಲ್ಲಿ ಖಾಲಿ ಗೆಲುವು ಕಂಡರೆ ಸಾಲದು. ಉತ್ತಮ ರನ್​ರೇಟ್​ನೊಂದಿಗೆ ಭರ್ಜರಿ ಜಯದ ಅಗತ್ಯವಿದೆ.

CSK vs MI

CSK vs MI

 • Share this:
  ಶಾರ್ಜಾ (ಅ. 23): ಐಪಿಎಲ್​​ನಲ್ಲಿಂದು ನಡೆಯಲಿರುವ 41ನೇ ಪಂದ್ಯದಲ್ಲಿ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಾಟ ನಡೆಸಲಿವೆ. ಪ್ಲೇ ಆಫ್ ಕನಸನ್ನು ಅಲ್ಪಸ್ವಲ್ಪ ಜೀವಂತವಾಗಿರಿಸಿರುವ ಚೆನ್ನೈಗೆ ಈ ಪಂದ್ಯ ಮಹತ್ವ ಪಡೆದಿದೆ. ಇತ್ತ ಅಗ್ರಸ್ಥಾನಕ್ಕೇರಲು ಮುಂಬೈ ಮತ್ತೊಂದು ಗೆಲುವು ಎದುರುನೋಡುತ್ತಿದೆ.

  ಈವರೆಗೆ ಒಟ್ಟು ಒಂಭತ್ತು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ಆರರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ಇತ್ತ ಸಿಎಸ್​ಕೆ ತಂಡ 10 ಪಂದ್ಯಗಳನ್ನು ಆಡಿದ್ದು, ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 7 ಪಂದ್ಯಗಳನ್ನು ಕೈಚೆಲ್ಲಿದೆ.

  Breaking: Kapil Dev: ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

  ಚೆನ್ನೈ ಪ್ಲೇ ಆಫ್ ಹಂತಕ್ಕೇರುವುದು ಕಷ್ಟಸಾಧ್ಯ. ಈ ಪಂದ್ಯದಲ್ಲಿ ಖಾಲಿ ಗೆಲುವು ಕಂಡರೆ ಸಾಲದು. ಉತ್ತಮ ರನ್​ರೇಟ್​ನೊಂದಿಗೆ ಭರ್ಜರಿ ಜಯದ ಅಗತ್ಯವಿದೆ. ಇಂದಾದರು ಧೋನಿ ಟೀಂ ಸೀನಿಯರ್ಸ್​ಗೆ ಬೆಂಚ್ ಕಾಯಿಸಲು ಬಿಟ್ಟು ಯಂಗ್ ಸ್ಟಾರ್ಸ್​ಗೆ ಅವಕಾಶ ನೀಡುತ್ತಾ ನೋಡಬೇಕಿದೆ. ಡ್ವೇನ್ ಬ್ರಾವೋ ತಂಡದಿಂದ ಹೊರಬಿದ್ದಿರುವ ನೋವು ತಂಡಕ್ಕಿದೆ. ಹೀಗಾಗಿ ಇಮ್ರಾನ್ ತಾಹಿರ್ ಕಣಕ್ಕಿಳಿಯುವ ಅಂದಾಜಿದೆ.





  ಸಿಎಸ್​ಕೆ ಬಹುಬೇಗನೆ ವಿಕೆಟ್ ಕಳೆದುಕೊಳ್ಳುತ್ತಿದೆ. ಆರಂಭದ ಪಂದ್ಯದಲ್ಲಿ ಅಬ್ಬರಿಸುದ್ದ ಫಾಫ್ ಡುಪ್ಲೆಸಿಸ್ ಬರಬರುತ್ತ ಮಂಕಾಗಿದ್ದಾರೆ. ಅಂಬಟಿ ರಾಯುಡು, ಧೋನಿ, ಶೇನ್ ವಾಟ್ಸನ್ ಸ್ಥಿತಿಯೂ ಇದರಿಂದ ಹೊರತಾಗಿಲ್ಲ. ಜಡೇಜಾ ಅಂತಿಮ ಹಂತದಲ್ಲಿ ಬಂದು ತಮ್ಮ ಕೈಲಾದಷ್ಟು ರನ್ ಬಾರಿಸುತ್ತಿದ್ದಾರಷ್ಟೆ. ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಸ್ಯಾಮ್ ಕುರ್ರನ್ ಪ್ರದರ್ಶನ ಮಾತ್ರ ಸಿಎಸ್​ಕೆ ತಂಡಕ್ಕೆ ಪ್ಲಸ್ ಪಾಯಿಂಟ್.

  ಇತ್ತ ಪ್ರಚಂಡ ಫಾರ್ಮ್​ನಲ್ಲಿರುವ ಮುಂಬೈ ಎಲ್ಲ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಆದರೆ, ಸತತ 5 ಗೆಲುವಿನ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಡಬಲ್ ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತ್ತು. ಸಿಎಸ್‌ಕೆ ಎದುರು ಜಯ ದಾಖಲಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮುಂಬೈ ಪ್ಲೇ-ಆಫ್ ಹಾದಿಯನ್ನು ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ.

  IPL 2020 Points Table: ಪ್ಲೇಆಫ್​ಗೆ ಏರಲು ನಾಲ್ಕು ತಂಡಗಳ ನಡುವೆ ಭಾರೀ ಪೈಪೋಟಿ; ಯಾರಿಗೆ ಸಿಗಲಿದೆ ಸ್ಥಾನ

  ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ. ಡಿ ಕಾಕ್, ರೋಹಿತ್, ಸೂರ್ಯಕುಮಾರ್ ಯಾದವ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಮುಂಬೈನ ಬ್ಯಾಟಿಂಗ್ ಬಲ. ಆದರೆ, ಲೀಗ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಎದುರು 99 ರನ್ ಸಿಡಿಸಿದ್ದ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಬಳಿಕ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರ ಬದಲಿಗೆ ಸೌರಭ್ ತಿವಾರಿ ತಂಡಕ್ಕೆ ವಾಪಸಾಗಬಹುದು. ಕಳೆದ 2 ಪಂದ್ಯಗಳಲ್ಲಿ ದುಬಾರಿಯಾಗಿರುವ ನಾಥನ್ ಕೌಲ್ಟರ್ ನಿಲ್ ಬದಲಿಗೆ ಜೇಮ್ಸ್ ಪ್ಯಾಟಿನ್‌ಸನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

  ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಾಗಿರುವ ಮುಂಬೈ ಹಾಗೂ ಚೆನ್ನೈ ಪರಸ್ಪರ 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್ ಪಡೆ 17 ಹಾಗೂ ಧೋನಿ ಬಳಗ 12ರಲ್ಲಿ ಗೆಲುವು ಸಾಧಿಸಿದೆ.
  Published by:Vinay Bhat
  First published: