CSK vs MI, IPL 2020: ಟೂರ್ನಿಯಿಂದಲೇ ಹೊರಬಿದ್ದ ಚೆನ್ನೈ: ಮುಂಬೈಗೆ 10 ವಿಕೆಟ್ಗಳ ಜಯ
IPL 2020, Chennai Super Kings vs Mumbai Indians: ನಾಯಕ ಎಂಎಸ್ ಧೋನಿ ಜೊತೆ ಇನ್ನಿಂಗ್ಸ್ ಕಟ್ಟಲು ಹೊರಟ ಫಾಫ್ ಡುಪ್ಲೆಸಿಸ್ ಯೋಚನೆ ಫಲಿಸಲಿಲ್ಲ. ಬೌಲ್ಟ್ ಸ್ವಿಂಗ್ ಬೌಲಿಂಗ್ಗೆ ಡುಪ್ಲೆಸಿಸ್(1) ಶರಣಾದರು. ರವೀಂದ್ರ ಜಡೇಜಾ ಆಟ 7 ರನ್ಗೆ ಅಂತ್ಯವಾಯಿತು. ಧೋನಿ ಒಂದು ಸಿಕ್ಸ್ ಸಿಡಿಸಿ 16 ರನ್ಗೆ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು.
ಶಾರ್ಜಾ (ಅ. 23): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ನಲ್ಲಿ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಹೀನಾಯ ಸೋಲುಕಂಡಿರುವ ಚೆನ್ನೈ ಐಪಿಎಲ್ 2020 ಟೂರ್ನಿಯಿಂದಲೇ ಹೊರಬಿದ್ದಿದೆ.
ಚೆನ್ನೈ ನೀಡಿದ್ದ 115 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಬೌಂಡರಿ-ಸಿಕ್ಸರ್ ಚಚ್ಚಿದ ಕಿಶನ್ ಬೇಗನೆ ತಂಡಕ್ಕೆ ಗೆಲುವು ತಂದಿಟ್ಟರು.
ಕೇವಲ 12.2 ಓವರ್ಗಳಲ್ಲೇ ಮುಂಬೈ 116 ರನ್ ಬಾರಿಸುವ ಮೂಲಕ 10 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತು. ಕಿಶನ್ 38 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಿಡಿಸಿ ಅಜೇಯ 68 ರನ್ ಗಳಿಸಿದರೆ, ಡಿಕಾಕ್ 33 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಅಜೇಯ 46 ರನ್ ಗಳಿಸಿದರು.
ಈ ಗೆಲುವಿನೊಂದಿಗೆ ಮುಂಬೈ ತಂಡ ಆಡಿದ 10 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು ಕೇವಲ ಮೂರು ಪಂದ್ಯಗಳಲ್ಲಿ ಸೋಲುಕಂಡು 14 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಚೆನ್ನೈ ಎಂದಿನಂತೆ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಟೂರ್ನಿಯಲ್ಲಿ 2ನೇ ಬಾರಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳದೆ ಮೊದಲ ಓವರ್ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದರು. 2ನೇ ಓವರ್ನಲ್ಲಿ ಅಂಬಟಿ ರಾಯುಡು 2 ರನ್ಗೆ ಬುಮ್ರಾ ಬೌಲಿಂಗ್ನಲ್ಲಿ ಔಟ್ ಆದರು. ಮುಂದಿನ ಎಸೆತದಲ್ಲೇ ಎನ್. ಜಗದೀಶನ್ ಸ್ಪಿಪ್ನಲ್ಲಿದ್ದ ಸೂರ್ಯಕುಮಾರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ನಾಯಕ ಎಂಎಸ್ ಧೋನಿ ಜೊತೆ ಇನ್ನಿಂಗ್ಸ್ ಕಟ್ಟಲು ಹೊರಟ ಫಾಫ್ ಡುಪ್ಲೆಸಿಸ್ ಯೋಚನೆ ಫಲಿಸಲಿಲ್ಲ. ಬೌಲ್ಟ್ ಸ್ವಿಂಗ್ ಬೌಲಿಂಗ್ಗೆ ಡುಪ್ಲೆಸಿಸ್(1) ಶರಣಾದರು. ರವೀಂದ್ರ ಜಡೇಜಾ ಆಟ 7 ರನ್ಗೆ ಅಂತ್ಯವಾಯಿತು. ಧೋನಿ ಒಂದು ಸಿಕ್ಸ್ ಸಿಡಿಸಿ 16 ರನ್ಗೆ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. 50 ರನ್ಗೂ ಮೊದಲೇ 7 ವಿಕೆಟ್ ಕಳೆದುಕೊಂಡಿತು.
ಬಳಿಕ ಸ್ಯಾಮ್ ಕುರ್ರನ್ ಜೊತೆಯಾದ ದೀಪಕ್ ಚಹಾರ್(11) ಹಾಗೂ ಇಮ್ರಾನ್ ತಾಹಿರ್(13) ತಂಡದ ಖಾತೆಗೆ ಒಂದಿಷ್ಟು ರನ್ ಸೇರಿಸಿದರು. ಅದರಲ್ಲೂ ಕುರ್ರನ್ ತಂಡದ ರನ್ಗತಿಗೆ ಹೋರಾಡಿ ಅಂತಿಮ ಹಂತದವರೆಗೆ ಕ್ರೀಸ್ನಲ್ಲಿದ್ದರು. 47 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಬಾರಿಸಿ 52 ರನ್ ಚಚ್ಚಿದರು.
ಅಂತಿಮವಾಗಿ ಸಿಎಸ್ಕೆ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 4 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ ಹಾಗೂ ರಾಹುಲ್ ಚಹಾರ್ ತಲಾ 2 ಮತ್ತು ನಥನ್ ಕಲ್ಟರ್ 1 ವಿಕೆಟ್ ಪಡೆದರು.
ಇಂದಿನ ಪಂದ್ಯಕ್ಕೆ ಮುಂಬೈ ಪರ ಖಾಯಂ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದು, ಇವರ ಸ್ಥಾನದಲ್ಲಿ ಸೌರಭ್ ತಿವಾರಿ ಕಣಕ್ಕಿಳಿದಿದ್ದಾರೆ.
ಚೆನ್ನೈ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಕೇದರ್ ಜಾಧವ್, ಶೇನ್ ವಾಟ್ಸನ್ ಹಾಗೂ ಪಿಯೂಷ್ ಚಾವ್ಲಾ ತಂಡದಿಂದ ಹೊರಗುಳಿದಿದ್ದಾರೆ. ಇವರ ಬದಲು ಇಮ್ರಾನ್ ತಾಹಿರ್, ಎನ್. ಜಗದೀಶನ್ ಮತ್ತು ರುತುರಾಜ್ ಗಾಯಕ್ವಾಡ್ ಆಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್: ಫಾಪ್ ಡುಪ್ಲೆಸಿಸ್, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಎನ್. ಜಗದೀಶನ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಪಿಯೂಷ್ ಚಾವ್ಲಾ, ಜೋಷ್ ಹ್ಯಾಜ್ಲೆವುಡ್, ಇಮ್ರಾನ್ ತಾಹಿರ್.
Published by:Vinay Bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ