ಶಾರ್ಜಾ (ಅ. 23): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ನ 41ನೇ ಪಂದ್ಯ ನಡೆಯುತ್ತಿದ್ದು, ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಾಟ ನಡೆಸುತ್ತಿವೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿರುವ ಚೆನ್ನೈ ಆರಂಭದಲ್ಲೇ 5 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರುತುರಾಜ್ ಗಾಯಕ್ವಾಡ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳದೆ ಮೊದಲ ಓವರ್ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದರು. 2ನೇ ಓವರ್‌ನಲ್ಲಿ ಅಂಬಟಿ ರಾಯುಡು 2 ರನ್ಗೆ ಬುಮ್ರಾ ಬೌಲಿಂಗ್ನಲ್ಲಿ ಔಟ್ ಆದರು. ಮುಂದಿನ ಎಸೆತದಲ್ಲೇ ಎನ್. ಜಗದೀಶನ್ ಸ್ಪಿಪ್ನಲ್ಲಿದ್ದ ಸೂರ್ಯಕುಮಾರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ನಾಯಕ ಎಂಎಸ್ ಧೋನಿ ಜೊತೆ ಇನ್ನಿಂಗ್ಸ್ ಕಟ್ಟಲು ಹೊರಟ ಫಾಫ್ ಡುಪ್ಲೆಸಿಸ್ ಯೋಚನೆ ಫಲಿಸಲಿಲ್ಲ. ಬೌಲ್ಟ್ ಸ್ವಿಂಗ್ ಬೌಲಿಂಗ್ಗೆ ಡುಪ್ಲೆಸಿಸ್(1) ಶರಣಾದರು. ರವೀಂದ್ರ ಜಡೇಜಾ ಆಟ 7 ರನ್ಗೆ ಅಂತ್ಯವಾಯಿತು. ಧೋನಿ ಒಂದು ಸಿಕ್ಸ್ ಸಿಡಿಸಿ 16 ರನ್ಗೆ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಸದ್ಯ ಕ್ರೀಸ್ನಲ್ಲಿ ಸ್ಯಾಮ್ ಕುರ್ರನ್ ಹಾಗೂ ದೀಪಕ್ ಚಹಾರ್ ಇದ್ದಾರೆ.
ಮುಂಬೈ ಪರ ಖಾಯಂ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದು, ಇವರ ಸ್ಥಾನದಲ್ಲಿ ಸೌರಭ್ ತಿವಾರಿ ಕಣಕ್ಕಿಳಿದಿದ್ದಾರೆ.
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್(ವಿ.ಕೀ), ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್ (ನಾಯಕ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ನಥನ್ ಕಲ್ಟರ್ ನೈಲ್.
ಚೆನ್ನೈ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಕೇದರ್ ಜಾಧವ್, ಶೇನ್ ವಾಟ್ಸನ್ ಹಾಗೂ ಪಿಯೂಷ್ ಚಾವ್ಲಾ ತಂಡದಿಂದ ಹೊರಗುಳಿದಿದ್ದಾರೆ. ಇವರ ಬದಲು ಇಮ್ರಾನ್ ತಾಹಿರ್, ಎನ್. ಜಗದೀಶನ್ ಮತ್ತು ರುತುರಾಜ್ ಗಾಯಕ್ವಾಡ್ ಆಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್: ಫಾಪ್ ಡುಪ್ಲೆಸಿಸ್, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಎನ್. ಜಗದೀಶನ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಪಿಯೂಷ್ ಚಾವ್ಲಾ, ಜೋಷ್ ಹ್ಯಾಜ್ಲೆವುಡ್, ಇಮ್ರಾನ್ ತಾಹಿರ್.
What do you reckon is the conversation between @msdhoni, @hardikpandya7 and @deepak_chahar9 ?#Dream11IPL pic.twitter.com/4D8Riouxbx
— IndianPremierLeague (@IPL) October 23, 2020
ಚೆನ್ನೈ ಪ್ಲೇ ಆಫ್ ಹಂತಕ್ಕೇರುವುದು ಕಷ್ಟಸಾಧ್ಯ. ಈ ಪಂದ್ಯದಲ್ಲಿ ಖಾಲಿ ಗೆಲುವು ಕಂಡರೆ ಸಾಲದು. ಉತ್ತಮ ರನ್ರೇಟ್ನೊಂದಿಗೆ ಭರ್ಜರಿ ಜಯದ ಅಗತ್ಯವಿದೆ. ಇತ್ತ ಪ್ರಚಂಡ ಫಾರ್ಮ್ನಲ್ಲಿರುವ ಮುಂಬೈ ಎಲ್ಲ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಆದರೆ, ಸತತ 5 ಗೆಲುವಿನ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಡಬಲ್ ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತ್ತು. ಸಿಎಸ್‌ಕೆ ಎದುರು ಜಯ ದಾಖಲಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮುಂಬೈ ಪ್ಲೇ-ಆಫ್ ಹಾದಿಯನ್ನು ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ.
ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಾಗಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರಸ್ಪರ 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್ ಪಡೆ 17 ಹಾಗೂ ಧೋನಿ ಬಳಗ 12ರಲ್ಲಿ ಗೆಲುವು ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ