IPL

  • associate partner
HOME » NEWS » Ipl » IPL 2020 CSK VS KXIP LIVE CRICKET SCORE CHENNAI SUPER KINGS VS KINGS XI PUNJAB RAYUDU RUTURAJ FIGHT BACK VB

CSK vs KXIP, IPL 2020 Live Score: ಕುತೂಹಲದತ್ತ ಚೆನ್ನೈ-ಪಂಜಾಬ್ ಪಂದ್ಯ

IPL 2020, Chennai Super Kings vs Kings XI Punjab Live Score: ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 22 ಬಾರಿ ಮುಖಾಮುಖಿ ಆಗಿದ್ದು ಚೆನ್ನೈ ಸೂಪರ್ ಕಿಂಗ್ಸ್​ 13 ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.

news18-kannada
Updated:November 1, 2020, 6:40 PM IST
CSK vs KXIP, IPL 2020 Live Score: ಕುತೂಹಲದತ್ತ ಚೆನ್ನೈ-ಪಂಜಾಬ್ ಪಂದ್ಯ
CSK vs KXIP Live Score Updates
  • Share this:
ಅಬುಧಾಬಿ (ನ. 01): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಾಧಾರಣ ಮೊತ್ತ ಕಲೆಹಾಕಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಪಂಜಾಬ್ ಬ್ಯಾಟ್ಸ್​ಮನ್​ಗಳು ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲಿಲ್ಲ. ದೀಪಕ್ ಹೂಡ ಅರ್ಧಶತಕದ ಪರಿಣಾಮ ಪಂಜಾಬ್ 20 ಓವರ್​ಗಳಲ್ಲಿ 153 ರನ್ ಗಳಿಸಿದೆ.

ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಚೆನ್ನೈ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆಗಿ ಬ್ಯಾಟ್ ಬೀಸಿದರು. ಅದರಲ್ಲೂ ಡುಪ್ಲೆಸಿಸ್ ಪವರ್ ಪ್ಲೇ ಓವರ್​ನಲ್ಲಿ ಅಬ್ಬರಿಸಿದರೆ ಗಾಯಕ್ವಾಡ್ ಉತ್ತಮ ಸಾತ್ ನೀಡಿದರು.

ಮೊದಲ ವಿಕೆಟ್​ಗೆ ಈ ಜೋಡಿ ಬರೋಬ್ಬರಿ 82 ರನ್​ಗಳ ಕಾಣಿಕೆ ನೀಡಿತು. ಅರ್ಧಶತಕದ ಅಂಚಿನಲ್ಲಿ ಎಡವಿದ ಡುಪ್ಲೆಸಿಸ್ 34 ಎಸೆತಗಳಲ್ಲಿ 48 ರನ್ ಬಾರಿಸಿ ಔಟ್ ಆದರು. ಸದ್ಯ ಕ್ರೀಸ್​ನಲ್ಲಿ ಗಾಯಕ್ವಾಡ್ ಹಾಗೂ ಅಂಬಟಿ ರಾಯುಡು ಇದ್ದಾರೆ.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್ ತಂಡ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾದ ನಾಯಕ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ 5 ಓವರ್​ನಲ್ಲೇ 44 ರನ್ ಚಚ್ಚಿದರು.

ಆದರೆ, ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಎನ್​ಗಿಡಿ 15 ಎಸೆತಗಳಲ್ಲಿ 26 ರನ್ ಸಿಡಿಸಿದ್ದ ಮಯಾಂಕ್​ರನ್ನು ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ 29 ರನ್ ಗಳಿಸಿದ್ದ ರಾಹುಲ್ ಕೂಡ ಬೌಲ್ಡ್​ ಆಗಿ ಪೆವಿಲಿಯನ್ ಹಾದಿ ಹಿಡಿದರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ನಿಕೋಲಸ ಪೂರನ್ ಆಟ ಈ ಬಾರಿ ಕೇವಲ 2 ರನ್​ಗೆ ಅಂತ್ಯವಾಯಿತು.

ಕ್ರಿಸ್ ಗೇಲ್ ಕೂಡ 12 ರನ್ ಗಳಿಸಿರುವಾಗ ತಾಹೀರ್ ಸ್ಪಿನ್ ಬಲೆಗೆ ಸಿಲುಕಿದರು. ಈ ಸಂದರ್ಭ ಮಂದೀಪ್ ಸಿಂಗ್ ಹಾಗೂ ದೀಪಕ್ ಹೂಡ ಒಂದಾಗ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 36 ರನ್​ಗಳ ಜೊತೆಯಾಟ ಆಡಿದರು. ಮಂದೀಪ್ 15 ಎಸೆತಗಳಲ್ಲಿ 14 ರನ್ ಗಳಿಸಿದರು.





ಕೊನೆಯ ಹಂತದಲ್ಲಿ ತಂಡದ ರನ್ ಗತಿ ಏರಿಸಲು ಹೋರಾಟ ನಡೆಸಿದ ಹೂಡ ಆಕರ್ಷಕ ಅರ್ಧಶತಕ ಸಿಡಿಸಿ ಆಸರೆಯಾದರು. ಹೂಡ 30 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಬಾರಿಸಿ ಅಜೇಯ 62 ರನ್ ಗಳಿಸಿದರು.

ಅಂತಿಮವಾಗಿ ಪಂಜಾಬ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಚೆನ್ನೈ ಪರ ಲುಂಗಿ ಎನ್​ಗಿಡಿ 3 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

ಚೆನ್ನೈ ಸೂಪರ್‌ ಕಿಂಗ್ಸ್: ಫಾಫ್ ಡುಪ್ಲೆಸಿಸ್, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಎನ್. ಜಗದೀಶನ್, ಎಂಎಸ್‌ ಧೋನಿ (ನಾಯಕ, ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್‌ ಚಹರ್‌, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್, ಲುಂಗಿ ಎನ್​ಗಿಡಿ.

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡ, ನಿಕೋಲಸ್ ಪೂರನ್, ಜೇಮ್ಸ್ ನೀಶಮ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಕ್ರಿಸ್ ಜೋರ್ಡನ್, ಮೊಹಮ್ಮದ್ ಶಮಿ.
Published by: Vinay Bhat
First published: November 1, 2020, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories