IPL

  • associate partner
HOME » NEWS » Ipl » IPL 2020 CSK VS KXIP LIVE CRICKET SCORE CHENNAI SUPER KINGS VS KINGS XI PUNJAB KXIP LOST 2 WICKETS VB 2

CSK vs KXIP, IPL 2020 Live Score: ಪಂಜಾಬ್ 6 ವಿಕೆಟ್ ಪತನ

IPL 2020, Chennai Super Kings vs Kings XI Punjab Live Score: ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 22 ಬಾರಿ ಮುಖಾಮುಖಿ ಆಗಿದ್ದು ಚೆನ್ನೈ ಸೂಪರ್ ಕಿಂಗ್ಸ್​ 13 ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.

news18-kannada
Updated:November 1, 2020, 5:01 PM IST
CSK vs KXIP, IPL 2020 Live Score: ಪಂಜಾಬ್ 6 ವಿಕೆಟ್ ಪತನ
CSK vs KXIP Live Score Updates
  • Share this:
ಅಬುಧಾಬಿ (ನ. 01): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 53ನೇ ಪಂದ್ಯದಲ್ಲಿ ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಕೆ. ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿ ಆಗುತ್ತಿವೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್​ಕೆಗೆ ಇದು ಔಪಚಾರಿಕ ಪಂದ್ಯವಾದರೆ, ರಾಹುಲ್ ಪಡೆ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿರು ಪಂಜಾಬ್ ತಂಡ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾದ ನಾಯಕ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ 5 ಓವರ್​ನಲ್ಲೇ 44 ರನ್ ಚಚ್ಚಿದರು.

ಆದರೆ, ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಎನ್​ಗಿಡಿ 15 ಎಸೆತಗಳಲ್ಲಿ 26 ರನ್ ಸಿಡಿಸಿದ್ದ ಮಯಾಂಕ್​ರನ್ನು ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ 29 ರನ್ ಗಳಿಸಿದ್ದ ರಾಹುಲ್ ಕೂಡ ಬೌಲ್ಡ್​ ಆಗಿ ಪೆವಿಲಿಯನ್ ಹಾದಿ ಹಿಡಿದರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ನಿಕೋಲಸ ಪೂರನ್ ಆಟ ಈ ಬಾರಿ ಕೇವಲ 2 ರನ್​ಗೆ ಅಂತ್ಯವಾಯಿತು.

ಕ್ರಿಸ್ ಗೇಲ್ ಕೂಡ 12 ರನ್ ಗಳಿಸಿರುವಾಗ ತಾಹೀರ್ ಸ್ಪಿನ್ ಬಲೆಗೆ ಸಿಲುಕಿದರು. ಈ ಸಂದರ್ಭ ಮಂದೀಪ್ ಸಿಂಗ್ ಹಾಗೂ ದೀಪಕ್ ಹೂಡ ಒಂದಾಗ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 36 ರನ್​ಗಳ ಜೊತೆಯಾಟ ಆಡಿದರು. ಮಂದೀಪ್ 15 ಎಸೆತಗಳಲ್ಲಿ 14 ರನ್ ಗಳಿಸಿದರು.

ಚೆನ್ನೈ ಸೂಪರ್‌ ಕಿಂಗ್ಸ್: ಫಾಫ್ ಡುಪ್ಲೆಸಿಸ್, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಎನ್. ಜಗದೀಶನ್, ಎಂಎಸ್‌ ಧೋನಿ (ನಾಯಕ, ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್‌ ಚಹರ್‌, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್, ಲುಂಗಿ ಎನ್​ಗಿಡಿ.

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡ, ನಿಕೋಲಸ್ ಪೂರನ್, ಜೇಮ್ಸ್ ನೀಶಮ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಕ್ರಿಸ್ ಜೋರ್ಡನ್, ಮೊಹಮ್ಮದ್ ಶಮಿ.





ಪ್ಲೇ ಆಫ್ ಹಂತಕ್ಕೇರಲು ಪಂಜಾಬ್​ಗೆ ಈ ಪಂದ್ಯ ನಿರ್ಣಾಯಕವಾಗಲಿದೆ. 13 ಪಂದ್ಯಗಳಿಂದ 12 ಪಾಯಿಂಟ್ಸ್ ಪಡೆದು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಪಂಜಾಬ್ ಇಂದಿನ ಪಂದ್ಯ ಗೆದ್ದರಷ್ಟೇ ಸಾಲದು ಇತರ ತಂಡಗಳ ಫಲಿ​ತಾಂಶ​ಕ್ಕಾಗಿ ಕಾಯ​ಬೇ​ಕಾ​ಗು​ತ್ತದೆ.

ಸತತ 5 ಗೆಲುವಿನ ಬಳಿಕ ರಾಜಸ್ಥಾನ ರಾಯಲ್ಸ್ ಎದುರು ಸೋಲಿಗೆ ಶರಣಾಗಿರುವ ಪಂಜಾಬ್ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ, ಬೌಲಿಂಗ್​ನಲ್ಲಿ ಕಮಾಲ್ ಮಾಡುವ ಆಟಗಾರರು ಯಾರೂಇಲ್ಲ. ಕ್ರಿಸ್ ಗೇಲ್ ಕಳೆದ ಪಂದ್ಯದಲ್ಲಿ ಅಬ್ಬರಿಸಿ 99 ರನ್ ಸಿಡಿಸಿದ್ದರು. ಮಯಾಂಕ್ ಅಗರ್ವಾಲ್ ಇಂದಿನ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ.

ಇತ್ತ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುತ್ತಿರುವ ಧೋನಿ ಈ ಪಂದ್ಯದಲ್ಲೂ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತ. ಕಳೆದ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಮಿಂಚಿದ್ದರು. ಹೀಗಾಗಿ ಪಂಜಾಬ್ ವಿರುದ್ಧವೂ ಸಿಡಿಯುವ ಕಾತುರದಲ್ಲಿದ್ದಾರೆ. ರವೀಂದ್ರ ಜಡೇಜಾ ಬ್ಯಾಟಿಂಗ್- ಬೌಲಿಂಗ್​ನಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನ ಹಾಕುತ್ತಿದ್ದಾರೆ. ದೀಪಕ್ ಚಹಾರ್, ಇಮ್ರಾನ್ ತಾಹಿರ್ ಹಾಗೂ ಸ್ಯಾಮ್ ಕುರ್ರನ್ ಮೇಲೆ ಹೆಚ್ಚಿನ ನಿರೀಕ್ಷಿ ಇದೆ.

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 22 ಬಾರಿ ಮುಖಾಮುಖಿ ಆಗಿದ್ದು ಚೆನ್ನೈ ಸೂಪರ್ ಕಿಂಗ್ಸ್​ 13 ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.
Published by: Vinay Bhat
First published: November 1, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories