ದುಬೈ (ಅ. 29): ಐಪಿಎಲ್ನಲ್ಲಿ ಇಂದು ನಡೆಯಲಿರುವ 49ನೇ ಪಂದ್ಯದಲ್ಲಿ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್ಕೆಗೆ ಇದು ಔಪಚಾರಿಕ ಪಂದ್ಯವಾಗಿದ್ದರೆ ಇತ್ತ ಕೆಕೆಆರ್ ಪ್ಲೇ ಆಫ್ ಹಂತಕ್ಕೇರಲು ಗೆಲ್ಲಲೇ ಬೇಕಾದ ಇತ್ತಡದಲ್ಲಿದೆ. ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ ಈ ಕಾದಾಟಕ್ಕೆ ಸಾಕ್ಷಿಯಾಗಲಿದೆ.
ಕೋಲ್ಕತ್ತಾ ತಂಡ ಆಡಿರುವ 12 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಪಡೆದುಕೊಂಡಿದ್ದು, ನಾಕೌಟ್ ಹಂತಕ್ಕೆ ತಲುಪಬೇಕಾದರೆ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಜೊತೆಗೆ ರನ್ ರೇಟನ್ನೂ ಹೆಚ್ಚಿಸಿಕೊಳ್ಳಬೇಕಾದ ಇತ್ತಡದಲ್ಲಿದೆ.
ಅನುಷ್ಕಾಗೆ ಊಟ ಮಾಡಿದೆಯಾ ಎಂದು ಮೈದಾನದಿಂದಲೇ ಕೇಳಿದ ಕೊಹ್ಲಿ; ವಿಡಿಯೋ ವೈರಲ್
The Dubai International Cricket Stadium will host Match 49 of #Dream11IPL when @ChennaiIPL will take on @KKRiders today.
Preview by @ameyatilak https://t.co/N4LIrqPm2x #CSKvKKR pic.twitter.com/Bd6MGhr05H
— IndianPremierLeague (@IPL) October 29, 2020
ಅಲ್ಲದೆ ಕೆಕೆಆರ್ ಈ ಬಾರಿಯ ಐಪಿಎಲ್ನಲ್ಲಿ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನೂ ಪಡೆದಿಲ್ಲ. ಇಂದಿನ ಪಂದ್ಯ ಮಹತ್ವದ್ದಾಗಿದ್ದು, ಆರಂಭಿಕ ಆಟಗಾರರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ವರುಣ್ ಚಕ್ರವರ್ತಿ ಮಾತ್ರ ಬೌಲಿಂಗ್ನಲ್ಲಿ ಉತ್ತಮ ಸ್ಪೆಲ್ ಮಾಡುತ್ತಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಲೂಕಿ ಫರ್ಗ್ಯುಸನ್, ಕಮಲೇಶ್ ನಾಗರಕೋಟಿ, ಸುನೀಲ್ ನರೈನ್ ಮೇಲೆ ಹೆಚ್ಚು ನಿರೀಕ್ಷೆ ಇದೆ.
ಇತ್ತ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುತ್ತಿರುವ ಧೋನಿ ಈ ಪಂದ್ಯದಲ್ಲೂ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತ. ಕಳೆದ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಮಿಂಚಿದ್ದರು. ಹೀಗಾಗಿ ಕೆಕೆಆರ್ ವಿರುದ್ಧವೂ ಸಿಡಿಯುವ ಕಾತುರದಲ್ಲಿದ್ದಾರೆ.
Jasprit Bumrah: ವಿರಾಟ್ ಕೊಹ್ಲಿ ವಿಕೆಟ್ ಪಡೆದು ವಿಶಿಷ್ಟ ದಾಖಲೆ ಬರದೆ ಜಸ್ಪ್ರೀತ್ ಬೂಮ್ರಾ
ಸ್ಯಾಮ್ ಕುರ್ರನ್ ಬ್ಯಾಟಿಂಗ್- ಬೌಲಿಂಗ್ನಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನ ಹಾಕುತ್ತಿದ್ದಾರೆ. ದೀಪಕ್ ಚಹಾರ್, ಇಮ್ರಾನ್ ತಾಹಿರ್ ಹಾಗೂ ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ನಿರೀಕ್ಷಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ